ಏಕದಿನ ವಿಶ್ವಕಪ್​ನಲ್ಲಿ ಹೊಸ ಇತಿಹಾಸ ಬರೆದ ರಚಿನ್ ರವೀಂದ್ರ

Rachin Ravindra Records: ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ರಚಿನ್ ರವೀಂದ್ರ ಅಗ್ರಸ್ಥಾನಕ್ಕೇರಿದ್ದಾರೆ. ಸದ್ಯ 565 ರನ್​ಗಳಿಸಿರುವ ರಚಿನ್ ಮೊದಲ ಸ್ಥಾನದಲ್ಲಿದ್ದರೆ, 550 ರನ್ ಬಾರಿಸಿರುವ ಕ್ವಿಂಟನ್ ಡಿಕಾಕ್ 2ನೇ ಸ್ಥಾನದಲ್ಲಿದ್ದಾರೆ. ಇನ್ನು 543 ರನ್​ ಕಲೆಹಾಕಿರುವ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

| Updated By: ಝಾಹಿರ್ ಯೂಸುಫ್

Updated on: Nov 09, 2023 | 10:06 PM

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 42 ರನ್​ ಬಾರಿಸುವ ಮೂಲಕ ನ್ಯೂಝಿಲೆಂಡ್​ನ ಯುವ ದಾಂಡಿಗ ರಚಿನ್ ರವೀಂದ್ರ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಚಿನ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದರು.

1 / 7
ಮೊದಲ ಓವರ್​ನಿಂದ ಲಂಕಾ ಬೌಲರ್​ಗಳನ್ನು ದಂಡಿಸಲಾರಂಭಿಸಿದ ಯುವ ಎಡಗೈ ದಾಂಡಿಗ ಕೇವಲ 34 ಎಸೆತಗಳಲ್ಲಿ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ 42 ರನ್​ಗಳೊಂದಿಗೆ ರಚಿನ್ ರವೀಂದ್ರ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...

2 / 7
ಚೊಚ್ಚಲ ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ರಚಿನ್ ರವೀಂದ್ರ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಇಂಗ್ಲೆಂಡ್​ನ ಜಾನಿ ಬೈರ್​ಸ್ಟೋವ್ ಹೆಸರಿನಲ್ಲಿತ್ತು.

3 / 7
2019 ರ ಏಕದಿನ ವಿಶ್ವಕಪ್​ನಲ್ಲಿ ಜಾನಿ ಬೈರ್​ಸ್ಟೋವ್ 532 ರನ್​ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಚೊಚ್ಚಲ ವಿಶ್ವಕಪ್​ನಲ್ಲಿ 565 ರನ್​ ಕಲೆಹಾಕುವ ಮೂಲಕ ರಚಿನ್ ರವೀಂದ್ರ ಹೊಸ ಇತಿಹಾಸ ನಿರ್ಮಿಸಿದ್ದಾರೆ.

4 / 7
ಹಾಗೆಯೇ ಏಕದಿನ ವಿಶ್ವಕಪ್​ನಲ್ಲಿ 25 ವಯಸ್ಸಿಗೂ ಮುನ್ನ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಕೂಡ ರಚಿನ್ ಹೆಸರಿಗೆ ಸೇರ್ಪಡೆಯಾಗಿದೆ. ಈ ಹಿಂದೆ ಈ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು.

5 / 7
1996ರ ಏಕದಿನ ವಿಶ್ವಕಪ್​ನಲ್ಲಿ ಸಚಿನ್ ತೆಂಡೂಲ್ಕರ್ 523 ರನ್ ಬಾರಿಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ 23 ವರ್ಷದ ರಚಿನ್ ರವೀಂದ್ರ 565 ರನ್​ಗಳಿಸಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

6 / 7
ಅಷ್ಟೇ ಅಲ್ಲದೆ ಈ ಬಾರಿಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ರಚಿನ್ ರವೀಂದ್ರ ಅಗ್ರಸ್ಥಾನಕ್ಕೇರಿದ್ದಾರೆ. ಸದ್ಯ 565 ರನ್​ಗಳಿಸಿರುವ ರಚಿನ್ ಮೊದಲ ಸ್ಥಾನದಲ್ಲಿದ್ದರೆ, 550 ರನ್ ಬಾರಿಸಿರುವ ಕ್ವಿಂಟನ್ ಡಿಕಾಕ್ 2ನೇ ಸ್ಥಾನದಲ್ಲಿದ್ದಾರೆ. ಇನ್ನು 543 ರನ್​ ಕಲೆಹಾಕಿರುವ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ.

7 / 7
Follow us