ನೋ…ಬಾಲ್: ಮತ್ತೆ ಸ್ಪಾಟ್ ಫಿಕ್ಸಿಂಗ್ ಚರ್ಚೆ..!

| Updated By: ಝಾಹಿರ್ ಯೂಸುಫ್

Updated on: Dec 03, 2023 | 6:09 PM

Abhimanyu Mithun: ಕರ್ನಾಟಕ ಮೂಲದ ಅಭಿಮನ್ಯು ಮಿಥುನ್ 2010-11ರಲ್ಲಿ ಭಾರತದ ಪರ 4 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 12 ವಿಕೆಟ್​ಗಳನ್ನು ಕಬಳಿಸಿದ್ದರು. ಇದೀಗ ವರ್ಷಗಳ ಬಳಿಕ ಅಭಿಮನ್ಯು ಮಿಥುನ್ ಬಿಗ್ಗೆಸ್ಟ್ ನೋ ಬಾಲ್ ಮೂಲಕ ಸುದ್ದಿಯಾಗಿದ್ದಾರೆ.

ನೋ...ಬಾಲ್: ಮತ್ತೆ ಸ್ಪಾಟ್ ಫಿಕ್ಸಿಂಗ್ ಚರ್ಚೆ..!
Abhimanyu Mithun
Follow us on

ಟೀಮ್ ಇಂಡಿಯಾದ ಮಾಜಿ ವೇಗಿ ಅಭಿಮನ್ಯು ಮಿಥುನ್ (Abhimanyu Mithun) ಎಸೆದ ನೋ ಬಾಲ್​ವೊಂದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಅಬುಧಾಬಿಯಲ್ಲಿ ನಡೆದ ಟಿ10 ಲೀಗ್​ನ 14ನೇ ಪಂದ್ಯದಲ್ಲಿ ನಾರ್ದರ್ನ್ ವಾರಿಯರ್ಸ್ ತಂಡದ ಪರ ಕಣಕ್ಕಿಳಿದ ಮಿಥುನ್ 2 ಓವರ್​ಗಳನ್ನು ಬೌಲಿಂಗ್ ಮಾಡಿದ್ದರು. ಈ ವೇಳೆ 11 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಆದರೆ, ಈ ಪಂದ್ಯದಲ್ಲಿ ಮಿಥುನ್ ಎಸೆದ ನೋ ಬಾಲ್ ಕ್ರಿಕೆಟ್ ಪ್ರೇಮಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಚೆನ್ನೈ ಬ್ರೇವ್ಸ್ ತಂಡದ ಇನ್ನಿಂಗ್ಸ್​ನ 5ನೇ ಓವರ್ ಬೌಲಿಂಗ್ ಮಾಡಿದ್ದ ಮಿಥುನ್ ಮೂರನೇ ಎಸೆತವನ್ನು ನೋ ಬಾಲ್ ಮಾಡಿದರು. ಕ್ರಿಕೆಟ್‌ನಲ್ಲಿ ಯಾವುದೇ ಬೌಲರ್‌ಗೆ ನೋ ಬಾಲ್ ಅಥವಾ ವೈಡ್ ಬಾಲ್ ಬೌಲ್ ಮಾಡುವುದು ಹೊಸ ವಿಷಯವಲ್ಲ. ಆದರೆ ಮಿಥುನ್ ಅಭಿಮನ್ಯು ನೋ ಬಾಲ್ ಬೌಲ್ ಮಾಡಿದಾಗ, ಅವರ ಕಾಲು ಕ್ರೀಸ್‌ನ ಹೊರಗೆ ಸುಮಾರು ಒಂದೂವರೆ ಅಡಿ ದೂರವಿತ್ತು. ಇದೇ ಕಾರಣದಿಂದಾಗಿ ಇದು ಮನಃಪೂರ್ವಕವಾಗಿ ಎಸೆದ ನೋ ಬಾಲ್​ ಎಂಬ ಸಂಶಯ ಮೂಡಿದೆ.

ಏಕೆಂದರೆ 2010 ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಕೂಡ ಇದೇ ಮಾದರಿಯಲ್ಲಿ ನೋ ಬಾಲ್ ಎಸೆದಿದ್ದರು. ಆ ಬಳಿಕ ನಡೆದ ವಿಚಾರಣೆಯಿಂದಾಗಿ ಇದು ಸ್ಪಾಟ್ ಫಿಕ್ಸಿಂಗ್ ಸಲುವಾಗಿ ಎಸೆದ ನೋ ಬಾಲ್ ಎಂಬುದು ತಿಳಿದು ಬಂದಿತ್ತು. ಅಲ್ಲದೆ ಫಿಕ್ಸಿಂಗ್ ಆರೋಪದಲ್ಲಿ ಮೊಹಮ್ಮದ್ ಅಮೀರ್ ಅವರನ್ನು ಕೆಲ ಕಾಲ ಬ್ಯಾನ್ ಮಾಡಲಾಗಿತ್ತು.

ಇದನ್ನೂ ಓದಿ: IPL 2024: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮತ್ತೆ ಬಂದ ಕೇದಾರ್ ಜಾಧವ್..!

ಇದೀಗ ಅದೇ ಮಾದರಿಯಲ್ಲೇ ಅಭಿಮನ್ಯು ಮಿಥುನ್ ಕೂಡ ಬಿಗ್ಗೆಸ್ಟ್ ನೋ ಬಾಲ್ ಎಸೆದಿದ್ದಾರೆ. ಹೀಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಕೇಳಿ ಬರುತ್ತಿವೆ.

ಅಂದಹಾಗೆ ಕರ್ನಾಟಕ ಮೂಲದ ಅಭಿಮನ್ಯು ಮಿಥುನ್ 2010-11ರಲ್ಲಿ ಭಾರತದ ಪರ 4 ಟೆಸ್ಟ್ ಮತ್ತು 5 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಟ್ಟು 12 ವಿಕೆಟ್​ಗಳನ್ನು ಕಬಳಿಸಿದ್ದರು. ಇದೀಗ ವರ್ಷಗಳ ಬಳಿಕ ಅಭಿಮನ್ಯು ಮಿಥುನ್ ಬಿಗ್ಗೆಸ್ಟ್ ನೋ ಬಾಲ್ ಮೂಲಕ ಸುದ್ದಿಯಾಗಿದ್ದಾರೆ.