IND vs NZ: ಅಭಿಷೇಕ್ ಅಬ್ಬರಕ್ಕೆ ಮೊದಲ ಓವರ್​ನಲ್ಲೇ ಆಕಾರ ಕಳೆದುಕೊಂಡ ಚೆಂಡು

Abhishek Sharma six: ಭಾರತ vs ನ್ಯೂಜಿಲೆಂಡ್ T20 ಸರಣಿಯ ಅಂತಿಮ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಜಾಕೋಬ್ ಡಫಿ ಎಸೆತಕ್ಕೆ ಭರ್ಜರಿ ಸಿಕ್ಸರ್ ಬಾರಿಸಿ ಚೆಂಡಿನ ಆಕಾರವನ್ನೇ ಬದಲಾಯಿಸಿದರು. ಈ ಅದ್ಭುತ ಹೊಡೆತದಿಂದಾಗಿ ಅಂಪೈರ್‌ಗಳು ಮೊದಲ ಓವರ್‌ನಲ್ಲೇ ಹೊಸ ಚೆಂಡನ್ನು ತರಬೇಕಾಯಿತು. ಅಭಿಮಾನಿಗಳನ್ನು ರೋಮಾಂಚನಗೊಳಿಸಿದ ಅಭಿಷೇಕ್ 16 ಎಸೆತಗಳಲ್ಲಿ 30 ರನ್ ಗಳಿಸಿ ಸ್ಫೋಟಕ ಇನ್ನಿಂಗ್ಸ್ ಆಡಿದರು.

IND vs NZ: ಅಭಿಷೇಕ್ ಅಬ್ಬರಕ್ಕೆ ಮೊದಲ ಓವರ್​ನಲ್ಲೇ ಆಕಾರ ಕಳೆದುಕೊಂಡ ಚೆಂಡು
Abhishek Sharma

Updated on: Jan 31, 2026 | 7:50 PM

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಕೊನೆಯ ಮತ್ತು ಐದನೇ ಪಂದ್ಯ ತಿರುವನಂತಪುರಂನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ (Abhishek Sharma) ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಅದರಲ್ಲೂ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಲು ಯತ್ನಿಸುವ ಅಭಿಷೇಕ್ ಈ ಪಂದ್ಯದ ಮೊದಲೆರಡು ಎಸೆತಗಳಲ್ಲಿ ರನ್ ಬಾರಿಸಲಿಲ್ಲ. ಆದರೆ ಮೂರನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸುವಲ್ಲಿ ಯಶಸ್ವಿಯಾದರು. ಜಾಕೋಬ್ ಡಫಿ ಎಸೆದ ಈ ಎಸೆತವನ್ನು ಸಿಕ್ಸರ್​ಗಟ್ಟುವ ಮೂಲಕ ಅಭಿಷೇಕ್ ತಮ್ಮ ಖಾತೆ ತೆರೆದರು. ಆದರೆ ಅಭಿಯ ಈ ಪವರ್​ಫುಲ್​ ಶಾಟ್​ನಿಂದಾಗಿ ಅಂಪೈರ್​ಗಳು ಮೊದಲ ಓವರ್​ನಲ್ಲೇ ಚೆಂಡನ್ನು ಬದಲಿಸಬೇಕಾಯಿತು.

ಚೆಂಡಿನ ಆಕಾರವೇ ಬದಲಾಯ್ತು

ಅಭಿಷೇಕ್ ಶರ್ಮಾ ಈ ಸರಣಿಯಲ್ಲಿ ಮತ್ತೊಮ್ಮೆ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಖಾತೆಯನ್ನು ತೆರೆದರು. ಜಾಕೋಬ್ ಡಫಿ ಮೂರನೇ ಎಸೆತವನ್ನು ಅಭಿಷೇಕ್ ಕವರ್ಸ್​ ದಿಕ್ಕಿನಲ್ಲಿ ಆಡುವ ಮೂಲಕ ಭರ್ಜರಿ ಸಿಕ್ಸರ್ ಬಾರಿಸಿದರು. ಇತ್ತ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕೂಡ ಹುಚ್ಚೆದು ಕುಣಿಯಲಾರಂಭಿಸಿದರು. ಆದರೆ ಈ ಅದ್ಭುತ ಸಿಕ್ಸರ್ ನಂತರ ಚೆಂಡನ್ನು ಬದಲಿಸಬೇಕಾಯಿತು. ಏಕೆಂದರೆ ಅಭಿಷೇಕ್ ತೋಳ್ಬಲಕ್ಕೆ ಸಿಲುಕಿದ ಚೆಂಡು ತನ್ನ ಆಕಾರವನ್ನು ಕಳೆದುಕೊಂಡಿತ್ತು. ವಾಸ್ತವವಾಗಿ ಅಭಿ ಬಾರಿಸಿದ ಚೆಂಡು ಬೌಂಡರಿಯಿಂದಾಚೆಗಿನ ಕಾಂಕ್ರೀಟ್ ಅಥವಾ ಗಟ್ಟಿಯಾದ ಮೇಲ್ಮೈಗೆ ಬಡಿದು ಅದರ ಆಕಾರವನ್ನು ಕಳೆದುಕೊಂಡಿತ್ತು. ಹೀಗಾಗಿ ಚೆಂಡನ್ನು ಪರೀಕ್ಷಿಸಿದ ಅಂಪೈರ್‌ಗಳು ಚೆಂಡನ್ನು ಬದಲಿಸುವ ನಿರ್ಧಾರಕ್ಕೆ ಬಂದರು.

IND vs NZ: ಗುರುವಿಗೆ ತಕ್ಕ ಶಿಷ್ಯ; 2ನೇ ಅತಿ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್

30 ರನ್​ಗಳಿಗೆ ಅಭಿ ಇನ್ನಿಂಗ್ಸ್ ಅಂತ್ಯ

ನಿಯಮಗಳ ಪ್ರಕಾರ, ಪಂದ್ಯದಲ್ಲಿ ಬಳಸುವ ಚೆಂಡಿನ ಆಕಾರ ಬದಲಾದರೆ, ಅದನ್ನು ಬದಲಾಯಿಸಬೇಕು. ಅದರಂತೆ ಅಂಪೈರ್‌ಗಳು ತಕ್ಷಣ ಹೊಸ ಚೆಂಡನ್ನು ತರಲು ನಿರ್ಧರಿಸಿದರು, ಇದರಿಂದಾಗಿ ಆಟವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಪಂದ್ಯದ ಆರಂಭಿಕ ಓವರ್‌ನಲ್ಲಿ ಈ ಘಟನೆ ಸಂಭವಿಸಿದರಿಂದ ಅಭಿಮಾನಿಗಳು ಅಚ್ಚರಿಗೊಂಡರು. ಆ ಬಳಿಕ ತಮ್ಮ ಸ್ಫೋಟಕ ಇನ್ನಿಂಗ್ಸ್ ಮುಂದುವರಿಸಿದ ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲಿ ಒಂದು ಸಿಕ್ಸ್ ಮತ್ತು ಎರಡು ಬೌಂಡರಿಗಳನ್ನು ಒಳಗೊಂಡಂತೆ 14 ರನ್ ಗಳಿಸಿದರು. ಆದಾಗ್ಯೂ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಅಭಿ 16 ಎಸೆತಗಳಲ್ಲಿ 14 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ