AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ಅಬ್ಬರ ಸಿಡಿಲಬ್ಬರ.. ಪಾಕೆಟ್ ಡೈನಮೋ ಸ್ಫೋಟಕ್ಕೆ ನುಚ್ಚುನೂರಾದ ಕಿವೀಸ್

Ishan Kishan Smashes Fastest T20 Century: ಭಾರತ-ನ್ಯೂಜಿಲೆಂಡ್ ಅಂತಿಮ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಸಿಡಿಲಬ್ಬರದ ಶತಕ ಸಿಡಿಸಿದರು. ಗಾಯದ ನಂತರ ಕಣಕ್ಕಿಳಿದ ಕಿಶನ್, 42 ಎಸೆತಗಳಲ್ಲಿ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕವನ್ನು ಪೂರೈಸಿದರು. ಇಶ್ ಸೋಧಿ ಓವರ್‌ನಲ್ಲಿ 29 ರನ್ ಗಳಿಸಿ, ಕಿವೀಸ್ ಬೌಲರ್‌ಗಳನ್ನು ಕಂಗೆಡಿಸಿ ಭರ್ಜರಿ ಕಮ್‌ಬ್ಯಾಕ್ ಮಾಡಿದರು.

IND vs NZ: ಅಬ್ಬರ ಸಿಡಿಲಬ್ಬರ.. ಪಾಕೆಟ್ ಡೈನಮೋ ಸ್ಫೋಟಕ್ಕೆ ನುಚ್ಚುನೂರಾದ ಕಿವೀಸ್
Ishan Kishan
ಪೃಥ್ವಿಶಂಕರ
|

Updated on:Jan 31, 2026 | 9:18 PM

Share

ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಇಶಾನ್ ಕಿಶನ್ (Ishan Kishan) ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿದ ಕಿಶನ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಗಾಯದಿಂದಾಗಿ ಹಿಂದಿನ ಪಂದ್ಯದಿಂದ ಹೊರಗುಳಿದಿದ್ದ ಕಿಶನ್ ಸರಣಿಯ ಅಂತಿಮ ಪಂದ್ಯದಲ್ಲಿ ಕಿವೀಸ್ ಬೌಲರ್‌ಗಳನ್ನು ಹೈರಾಣಾಗಿಸಿದ್ದಾರೆ. ಸಂಜು ವಿಕೆಟ್ ಪತನದ ನಂತರ ಬಹುಬೇಗನೇ ಬ್ಯಾಟಿಂಗ್​ಗೆ ಬಂದ ಕಿಶನ್ ತಮ್ಮ ಅಂತರರಾಷ್ಟ್ರೀಯ ಟಿ20 ವೃತ್ತಿಜೀವನದ ಮೊದಲ ಶತಕ ಸಿಡಿಸಿ ಮಿಂಚಿದರು.

ಒಂದೇ ಓವರ್​ನಲ್ಲಿ 29 ರನ್

ಈ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದರಲ್ಲೂ ಇನ್ನಿಂಗ್ಸ್‌ನ 12 ನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ಸ್ಪಿನ್ನರ್ ಇಶ್ ಸೋಧಿಯನ್ನು ಇನ್ನಿಲ್ಲದ ಂತೆ ಕಾಡಿದ ಕಿಶನ್ ಒಂದೇ ಓವರ್​ನಲ್ಲಿ ಬರೋಬ್ಬರಿ 29 ರನ್ ಕಲೆಹಾಕಿ ತಮ್ಮ ಅರ್ಧಶತಕ ಪೂರೈಸಿದರು. ವೈಡ್‌ನೊಂದಿಗೆ ಪ್ರಾರಂಭವಾದ ಓವರ್​ನ ಮುಂದಿನ ಮೂರು ಎಸೆತಗಳಲ್ಲಿ ಕಿಶನ್ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ನಂತರ ನಾಲ್ಕನೇ ಎಸೆತದಲ್ಲಿ ಸಿಕ್ಸರ್, ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಮತ್ತು ಕೊನೆಯ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿ ಓವರ್ ಮುಗಿಸಿದರು. ಹೀಗಾಗಿ, ಈ ಓವರ್​ನ ಆರು ಎಸೆತಗಳಲ್ಲಿ ಕಿಶನ್ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು.

ಸತತ 7 ಬೌಂಡರಿ

ಈ ದುಬಾರಿ ಓವರ್ ಬೌಲ್ ಮಾಡಿದ ಇಶ್ ಸೋಧಿ ಮುಜುಗರದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡರು. ಇದು ಅಂತ ಟಿ20 ಯಲ್ಲಿ ನ್ಯೂಜಿಲೆಂಡ್​ನ ಬೌಲರ್​ ಒಬ್ಬ ಬೌಲ್ ಮಾಡಿದ ಎರಡನೇ ಅತ್ಯಂತ ದುಬಾರಿ ಓವರ್ ಎನಿಸಿಕೊಂಡಿತು. ಈ ಸರಣಿಯ ಹಿಂದಿನ ಪಂದ್ಯದಲ್ಲಿಯೂ ಇಶ್ ಸೋಧಿ ಓವರ್‌ನಲ್ಲಿ 29 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಸೋಧಿ ಅವರ ಮುಂದಿನ ಓವರ್​ನ ಮೊದಲ ಎಸೆತದಲ್ಲೂ ಇಶಾನ್ ಸಿಕ್ಸರ್‌ ಬಾರಿಸಿದರು. ಈ ಮೂಲಕ ಸತತ ಏಳು ಎಸೆತಗಳಲ್ಲಿ ಏಳು ಬೌಂಡರಿಗಳನ್ನು (ಬೌಂಡರಿ ಮತ್ತು ಸಿಕ್ಸರ್) ಬಾರಿಸುವ ಮೂಲಕ ಕಿಶನ್ ಗಮನಾರ್ಹ ಸಾಧನೆಯನ್ನು ಪೂರ್ಣಗೊಳಿಸಿದರು.

IND vs NZ: 21 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್

42 ಎಸೆತಗಳಲ್ಲಿ ಶತಕ

ಅರ್ಧಶತಕ ಬಾರಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಇಶಾನ್ ಕಿಶನ್ ಕೇವಲ 42 ಎಸೆತಗಳಲ್ಲಿ ಶತಕ ಪೂರೈಸಿದರು. ಇದರರ್ಥ ಅವರು ಕೇವಲ 14 ಎಸೆತಗಳಲ್ಲಿ 50 ರಿಂದ 100 ರನ್ ಗಳಿಸಿದರು. ಇದು ನ್ಯೂಜಿಲೆಂಡ್ ವಿರುದ್ಧದ ಟಿ20ಪಂದ್ಯದಲ್ಲಿ ಅತಿ ವೇಗದ ಶತಕದ ದಾಖಲೆಯಾಗಿದೆ. ಕಿಶನ್ ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 43 ಎಸೆತಗಳನ್ನು ಎದುರಿಸಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಿತ 103 ರನ್ ಬಾರಿಸಿ ಔಟಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Sat, 31 January 26

ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ಸಿಜೆ ರಾಯ್ ಕೇಸ್​​ ಸಂಬಂಧ ಎಸ್​ಐಟಿ ರಚನೆ: ಯಾರ ನೇತೃತ್ವದಲ್ಲಿ ತನಿಖೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ರಾಯ್ ಮೇಲೆ ನಟಿಯರ ಹನಿ ಟ್ರ್ಯಾಪ್ ಗಾಳ: ತಪ್ಪಿಸಿಕೊಂಡಿದ್ದು ಹೇಗೆ?
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ಪುರಸಭೆ ಮುಖ್ಯಾಧಿಕಾರಿಗೆ ಚಳಿಬಿಡಿಸಿದ ಸಂಸದ ಸುನೀಲ್​​ ಬೋಸ್: ವಿಡಿಯೋ ವೈರಲ್
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ವಿದೇಶದಲ್ಲಿ ಹವಾಲಾ ಮೂಲಕ ಪಕ್ಷಗಳಿಗೆ ಹಣ ಸಂದಾಯ ಮಾಡಿದ್ದರಾ ರಾಯ್?
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಪಕ್ಷದ ನಾಯಕನ ಜತೆಗೆ ಪತ್ನಿಯ ಅಕ್ರಮ ಸಂಬಂಧ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಸಿಜೆ ರಾಯ್ ಹೃದಯ ಸೀಳಿದ ಬುಲೆಟ್ ಹೊರ ತೆಗೆದ ಡಾಕ್ಟರ್ ಹೇಳಿದ್ದೇನು ನೋಡಿ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಜೋರಾದ ವಾಗ್ವಾದ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಅನುಶ್ರೀ ಮೇಲೆ ಮಿಮಿಕ್ರಿ; ನೀವು ಹೊಟ್ಟೆ ಹುಣ್ಣಾಗುವಂತೆ ನಗೋದು ಖಚಿತ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ಕಾನ್ಫಿಡೆಂಟ್ ಗ್ರೂಪ್ ಸಿಜೆ ರಾಯ್ ಸಾವಿನ ಬಗ್ಗೆ ಎಂಡಿ ದೂರಲ್ಲಿ ಅಚ್ಚರಿಯ ಅಂಶ
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್
ನಾನು ತಂದೆ ಆಗ್ತಿರೋದು ಇನ್​​​ಸ್ಟಾಗ್ರಾಮ್​​​ಗೂ ಗೊತ್ತಾಗಿದೆ: ಧನಂಜಯ್