
2025 ರ ಏಷ್ಯಾಕಪ್ನಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ನಡುವೆ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಏಕಪಕ್ಷೀಯ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಹಾಂಗ್ ಕಾಂಗ್‌ಗೆ 189 ರನ್‌ಗಳ ಗುರಿಯನ್ನು ನೀಡಿತು. ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು. ತಂಡದ ಪರ ಒಮರ್‌ಜೈ ಮತ್ತು ಸೆಡಿಕುಲ್ಲಾ ಅರ್ಧಶತಕದ ಇನ್ನಿಂಗ್ಸ್ ಆಡಿ ತಂಡವನ್ನು ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಈ ಗುರಿ ಬೆನ್ನಟ್ಟಿದ ಹಾಂಗ್ ಕಾಂಗ್ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತಾ ಸಾಗಿತು. ಹೀಗಾಗಿ ಒತ್ತಡಕ್ಕೊಳಗಾಗದ ತಂಡ 20 ಓವರ್‌ಗಳಲ್ಲಿ 100 ರನ್ಗಳನ್ನು ದಾಟಲು ಸಾಧ್ಯವಾಗದೆ 94 ರನ್ಗಳಿಂದ ಸೋಲೊಪ್ಪಿಕೊಂಡಿತು.
2025 ರ ಏಷ್ಯಾ ಕಪ್‌ನ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ಮುಖಾಮುಖಿದ್ದವು. ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಹಾಂಗ್ ಕಾಂಗ್ ತಂಡ 9 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಲಷ್ಟೇ ಶಕ್ತವಾಯಿತು.
ಹಾಂಗ್ ಕಾಂಗ್ ತಂಡದ ಅರ್ಧದಷ್ಟು ಆಟಗಾರರು ಕೇವಲ 43 ರನ್‌ಗಳೊಂದಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಕಿಂಚಿನ್ ಶಾ ಕೇವಲ 6 ರನ್ ಗಳಿಸಿ ನೂರ್ ಅಹ್ಮದ್‌ಗೆ ಬಲಿಯಾದರು.
ದೊಡ್ಡ ಸ್ಕೋರ್ ಬೆನ್ನಟ್ಟಲು ಬಂದ ಹಾಂಗ್ ಕಾಂಗ್ ತಂಡ ಮೂರನೇ ಓವರ್‌ನಲ್ಲಿಯೇ ತನ್ನ ಮೂರನೇ ವಿಕೆಟ್ ಕಳೆದುಕೊಂಡಿತು. ನಿಜಾಕತ್ ಖಾನ್ ಅವರನ್ನು 16 ರನ್‌ಗಳಿಗೆ ರಶೀದ್ ಖಾನ್ ರನ್ ಔಟ್ ಮಾಡಿದರು.
ದೊಡ್ಡ ಗುರಿಯನ್ನು ಬೆನ್ನಟ್ಟಿರುವ ಹಾಂಗ್ ಕಾಂಗ್ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ದೊಡ್ಡ ಹೊಡೆತ ಬಿದ್ದಿತು. ಆರಂಭಿಕ ಆಟಗಾರ ಅಂಶುಮಾನ್ ರಾತ್ ಖಾತೆ ತೆರೆಯದೆಯೇ ಫಜಲ್ಹಕ್ ಫಾರೂಕಿಯ ಬಲಿಪಶುವಾದರು.
ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿದೆ. ಅಂದರೆ ಹಾಂಗ್ ಕಾಂಗ್ ಗೆಲ್ಲಲು 189 ರನ್ ಗಳಿಸಲೇಬೇಕು. ತಂಡದ ಪರ ಸೆಡಿಕುಲ್ಲಾ ಅಟಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 52 ಎಸೆತಗಳಲ್ಲಿ 73 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು.
ಸೇದಿಕುಲ್ಲಾ ಅಟಲ್ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ಮೂಲಕ ತಮ್ಮ ಅರ್ಧಶತಕ ಪೂರೈಸಿದ್ದಾರೆ. ಅಟಲ್ 41 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದಾರೆ.
ಅಟಲ್ 19 ಎಸೆತಗಳಲ್ಲಿ 27 ರನ್ ಗಳಿಸಿದ್ದಾರೆ. ಇನ್ನೊಂದು ತುದಿಯಿಂದ ಅವರಿಗೆ ಮೊಹಮ್ಮದ್ ನಬಿ ಅವರಿಂದ ಉತ್ತಮ ಬೆಂಬಲ ಸಿಗುತ್ತಿದೆ. ಅಫ್ಘಾನಿಸ್ತಾನ ಈಗ 50 ರನ್‌ಗಳ ಗಡಿ ದಾಟಿದೆ.
ಅಫ್ಘಾನಿಸ್ತಾನ ಮೊದಲ ವಿಕೆಟ್ ಕಳೆದುಕೊಂಡಿದೆ. ಗುರ್ಬಾಜ್ ಕೇವಲ 8 ರನ್‌ಗಳಿಗೆ ಪೆವಿಲಿಯನ್ ಸೇರಿದ್ದಾರೆ. ಹಾಂಗ್ ಕಾಂಗ್ ಉತ್ತಮ ಆರಂಭವನ್ನು ಹೊಂದಿದೆ.
ಜೀಶನ್ ಅಲಿ, ಬಾಬರ್ ಹಯಾತ್, ಅಂಶುಮಾನ್ ರಾತ್, ಕಲ್ಹನ್ ಚಲ್ಲು, ನಿಜಾಕತ್ ಖಾನ್, ಎಜಾಜ್ ಖಾನ್, ಕಿಂಚಿತ್ ಶಾ, ಯಾಸಿಮ್ ಮುರ್ತಾಜಾ (ನಾಯಕ), ಆಯುಷ್ ಶುಕ್ಲಾ, ಅತೀಕ್ ಇಕ್ಬಾಲ್, ಎಹ್ಸಾನ್ ಖಾನ್.
ರಹಮಾನುಲ್ಲಾ ಗುರ್ಬಾಜ್, ಸೇದಿಕುಲ್ಲಾ ಅಟಲ್, ಇಬ್ರಾಹಿಂ ಜದ್ರಾನ್, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನೈಬ್, ಕರೀಂ ಜನತ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ಎಎಮ್ ಗಜನ್ಫರ್, ಫಜಲ್ಹಕ್ ಫಾರೂಕಿ.
ಟಾಸ್ ಗೆದ್ದ ಅಫ್ಘನ್ ನಾಯಕ ರಶೀದ್ ಖಾನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
Published On - 7:31 pm, Tue, 9 September 25