ಮೂರು ಪಂದ್ಯಗಳ ಟಿ20 ಸರಣಿಗಾಗಿ ಅಫ್ಘಾನಿಸ್ತಾನ್ ಮತ್ತು ಶ್ರೀಲಂಕಾ (Afghanistan vs Sri Lanka) ತಂಡಗಳನ್ನು ಪ್ರಕಟಿಸಲಾಗಿದೆ. ಫೆಬ್ರವರಿ 17 ರಿಂದ ಶುರುವಾಗಲಿರುವ ಈ ಸರಣಿಯಿಂದ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಹೊರಗುಳಿದಿದ್ದಾರೆ. ಬೆನ್ನು ನೋವಿನ ಚಿಕಿತ್ಸೆಗೆ ಒಳಗಾಗಿರುವ ರಶೀದ್ ಖಾನ್ (Rashid Khan) ಇದೀಗ ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ಹಾಗೆಯೇ ಮತ್ತೋರ್ವ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಗಾಯದ ಕಾರಣ ಈ ಸರಣಿಗೆ ಅಲಭ್ಯರಾಗಿದ್ದಾರೆ.
ಇನ್ನು 16 ಸದಸ್ಯರ ಈ ತಂಡವನ್ನು ಇಬ್ರಾಹಿಂ ಝದ್ರಾನ್ ಮುನ್ನಡೆಸಲಿದ್ದಾರೆ. ಅತ್ತ ಶ್ರೀಲಂಕಾ ತಂಡದ ನಾಯಕರಾಗಿ ವನಿಂದು ಹಸರಂಗ ಕಾಣಿಸಿಕೊಳ್ಳಲಿದ್ದಾರೆ. ಲಂಕಾ ಟೀಮ್ನ ಉಪನಾಯಕನಾಗಿ ಚರಿತ್ ಅಸಲಂಕಾ ನೇಮಕವಾಗಿದ್ದು, ಇವರ ಜೊತೆಗೆ ಧನಂಜಯ ಡಿ ಸಿಲ್ವಾ, ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್, ಮಾಜಿ ನಾಯಕ ದಸುನ್ ಶಾನಕ ಸೇರಿದಂತೆ ಸ್ಟಾರ್ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಈ ಸರಣಿಗೆ ಆಯ್ಕೆಯಾಗಿರುವ ಉಭಯ ತಂಡಗಳು ಈ ಕೆಳಗಿನಂತಿದೆ..
ಶ್ರೀಲಂಕಾ ಟಿ20 ತಂಡ: ವನಿಂದು ಹಸರಂಗ (ನಾಯಕ), ಚರಿತ್ ಅಸಲಂಕಾ (ಉಪನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಕುಸಾಲ್ ಪೆರೇರಾ, ಏಂಜೆಲೊ ಮ್ಯಾಥ್ಯೂಸ್, ದಾಸುನ್ ಶಾನಕ, ಸದೀರ ಸಮರವಿಕ್ರಮ, ಕಮಿಂದು ಮೆಂಡಿಸ್, ಮಹೀಶ ದಕ್ಷನಂಜಯ, ಅಖಿಲ ದಕ್ಷನಂಜಯ , ದಿಲ್ಶನ್ ಮಧುಶಂಕ, ನುವಾನ್ ತುಷಾರ, ಬಿನೂರ ಫೆರ್ನಾಂಡೋ
ಅಫ್ಘಾನಿಸ್ತಾನ್ ಟಿ20 ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್, ಮೊಹಮ್ಮದ್ ಇಶಾಕ್ ರಹೀಮಿ, ಹಜರತುಲ್ಲಾ ಝಝೈ, ಗುಲ್ಬದಿನ್ ನೈಬ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಕರೀಂ ಜನತ್, ಶರಫುದ್ದೀನ್ ಅಶ್ರಫ್, ಫಝಲ್ಹಕ್ ಫಾರೂಕಿ, ಫಕ್ರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ವಫಾದಾರ್ ಮೊಮಂಡ್, ಖೈಸ್ ಅಹ್ಮದ್.
ಇದನ್ನೂ ಓದಿ: James Anderson: ಜಿಮ್ಮಿ ಮಾರಕ ದಾಳಿಗೆ ಶೇನ್ ವಾರ್ನ್ ವಿಶ್ವ ದಾಖಲೆ ಶೇಕಿಂಗ್..!
Published On - 11:55 am, Tue, 13 February 24