Rohit Sharma: ರಹಾನೆ ಸುಲಭ ಕ್ಯಾಚ್ ಕೈಚೆಲ್ಲಿದ್ದನ್ನು ಕಂಡು ರೋಹಿತ್, ಶಮಿ ಏನು ಮಾಡಿದ್ರು ನೋಡಿ

|

Updated on: Jun 08, 2023 | 8:53 AM

WTC Final, IND vs AUS: 57ನೇ ಓವರ್​ನ ಶಮಿ ಬೌಲಿಂಗ್​ನ ಎರಡನೇ ಎಸೆತದಲ್ಲಿ ಟ್ರಾವಿಸ್ ಹೆಡ್ ಅವರು ಕಟ್ ಶಾಟ್ ಹೊಡೆಯಲು ಯತ್ನಿಸಿದರು. ಅಂದುಕೊಂಡ ಮಟ್ಟಿಗೆ ಟೈಮ್ ಆಗದ ಕಾರಣ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಹಾನೆ ಅತ್ತ ಗಾಳಿಯಲ್ಲಿ ಚೆಂಡು ಬಂತು.

Rohit Sharma: ರಹಾನೆ ಸುಲಭ ಕ್ಯಾಚ್ ಕೈಚೆಲ್ಲಿದ್ದನ್ನು ಕಂಡು ರೋಹಿತ್, ಶಮಿ ಏನು ಮಾಡಿದ್ರು ನೋಡಿ
Rohit Sharma and Ajinkya Rahane
Follow us on

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2023ರ ಫೈನಲ್ (WTC Final 2023) ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾವನ್ನು (India vs Australia) ಎದುರಿಸುತ್ತಿದೆ. ಮೊದಲ ದಿನದಾಟ ಮುಕ್ತಾಯಗೊಂಡಿದ್ದು ಕಾಂಗರೂ ಪಡೆ ಮೇಲುಗೈ ಸಾಧಿಸಿದೆ. ಟ್ರಾವಿಸ್ ಹೆಡ್ ಅವರ ಆಕರ್ಷಕ ಶತಕ ಹಾಗೂ ಸ್ಟೀವ್ ಸ್ಮಿತ್ ಅವರ ಅರ್ಧಶತಕದ ನೆರವಿನಿಂದ ಆಸೀಸ್ ಪ್ರಥಮ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 327 ರನ್ ಗಳಿಸಿದ್ದು ದೊಡ್ಡ ಮೊತ್ತದ ಮುನ್ಸೂಚನೆ ನೀಡಿದೆ. ಡಬ್ಲ್ಯೂಟಿಸಿ ಫೈನಲ್​ನ ಮೊದಲ ದಿನವೇ ಸಾಕಷ್ಟು ರೋಚಕ ಕ್ಷಣಕ್ಕೆ ಸಾಕ್ಷಿಯಾಯಿತು. ಇದರಲ್ಲಿ ಅಜಿಂಕ್ಯ ರಹಾನೆ (Ajinkya Rahane) ಕ್ಯಾಚ್ ಚೈಲ್ಲಿದ್ದು ಕೂಡ ಒಂದು.

ಆಸ್ಟ್ರೇಲಿಯಾ ಮೊದಲ ದಿನ ಯಶಸ್ಸು ಸಾಧಿಸಲು ಮುಖ್ಯ ಕಾರಣವಗಿದ್ದು ಟ್ರಾವಿಸ್ ಹೆಡ್. ಸ್ಫೋಟಕ ಬ್ಯಾಟಿಂಗ್ ನಡೆಸಿ 106 ಎಸೆತಗಳಲ್ಲಿ ಶತಕ ಸಿಡಿಸಿದ ಇವರು ಒಟ್ಟು 156 ಎಸೆತಗಳಲ್ಲಿ 22 ಫೋರ್, 1 ಸಿಕ್ಸರ್​ನೊಂದಿಗೆ 146 ರನ್ ಕಲೆಹಾಕಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರನ್ನು ಆರಂಭದಲ್ಲೇ ಪೆವಿಲಿಯನ್​ಗೆ ಅಟ್ಟುವ ಅವಕಾಶ ಭಾರತಕ್ಕಿತ್ತು. ಆದರೆ, ಅಜಿಂಕ್ಯ ರಹಾನೆ ಮಾಡಿದ ಎಡವಟ್ಟು ತಂಡಕ್ಕೆ ದೊಡ್ಡ ಹಿನ್ನಡೆ ಆಯಿತು.

ಇದನ್ನೂ ಓದಿ
IND vs AUS Final: ಆಸೀಸ್ 327-3: ಮೊದಲ ದಿನ ಯಶಸ್ಸು ಸಾಧಿಸಿದ ಆಸ್ಟ್ರೇಲಿಯಾ: ಕುತೂಹಲ ಕೆರಳಿಸಿದ ದ್ವಿತೀಯ ದಿನದಾಟ
WTC Final: ತಂಡದಲ್ಲಿ ಅಶ್ವಿನ್​ಗಿಲ್ಲ ಸ್ಥಾನ…ರೋಹಿತ್ ಶರ್ಮಾ ವಿರುದ್ಧ ಸುನಿಲ್ ಗವಾಸ್ಕರ್ ಅಸಮಾಧಾನ..!
ಟೀಮ್ ಇಂಡಿಯಾ ವಿರುದ್ಧ ಟೆಸ್ಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ್ದು ಯಾರು ಗೊತ್ತೇ?
Travis Head: ಟೀಮ್ ಇಂಡಿಯಾ ವಿರುದ್ಧ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಟ್ರಾವಿಸ್ ಹೆಡ್

WTC Final 2023: ಡಬ್ಲ್ಯುಟಿಸಿ ಫೈನಲ್ ಪಂದ್ಯಗಳು ಇಂಗ್ಲೆಂಡ್‌ನಲ್ಲೇ ನಡೆಯುತ್ತಿರುವುದ್ಯಾಕೆ? ಇಲ್ಲಿದೆ ವಿವರ

57ನೇ ಓವರ್​ನ ಮೊಹಮ್ಮದ್ ಶಮಿ ಬೌಲಿಂಗ್​ನ ಎರಡನೇ ಎಸೆತದಲ್ಲಿ ಹೆಡ್ ಅವರು ಕಟ್ ಶಾಟ್ ಹೊಡೆಯಲು ಯತ್ನಿಸಿದರು. ಅಂದುಕೊಂಡ ಮಟ್ಟಿಗೆ ಟೈಮ್ ಆಗದ ಕಾರಣ ಗಲ್ಲಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರಹಾನೆ ಅತ್ತ ಗಾಳಿಯಲ್ಲಿ ಚೆಂಡು ಬಂತು. ಆದರೆ, ರಹಾನೆ ಕ್ಯಾಚ್​ಗೆಂದು ಕೈ ಮೇಲೆತ್ತು ಹಿಡಿಯುವ ಹೊತ್ತಿಗೆ ಬಾಲ್ ಅವರ ಕೈಯಿಂದ ಪಾಸ್ ಆಯಿತು. ಒಂದೊಳ್ಳೆ ಅವಕಾಶವನ್ನು ಕೈಚೆಲ್ಲಿದರು. ಇದರಿಂದ ಬೇಸರಗೊಂಡ ಬೌಲರ್ ಶಮಿ ಹಾಗೂ ನಾಯಕ ರೋಹಿತ್ ಶರ್ಮಾ ಬೇಸರ ಹೊರಹಾಕಿದರು. ಇಲ್ಲಿದೆ ನೋಡಿ ಆ ವಿಡಿಯೋ.

 

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಾಂಗರೂ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. 4ನೇ ಓವರ್​ನ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಉಸ್ಮಾನ್ ಖ್ವಾಜಾ ಸೊನ್ನೆಗೆ ನಿರ್ಗಮಿಸಿದರು. ಈ ಸಂದರ್ಭ ಜೊತೆಯಾದ ಡೇವಿಡ್ ವಾರ್ನರ್ (43) ಹಾಗೂ ಮಾರ್ನಸ್ ಲಾಬುಶೇನ್ (26) 69 ರನ್​ಗಳ ಜೊತೆಯಾಟ ಆಡಿದರಷ್ಟೆ. ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ.

ಆಕ್ರಮಣಕಾರಿ ಆಟದ ಮೂಲಕ ಆರಂಭದಿಂದಲೇ ಭಾರತಕ್ಕೆ ಎಚ್ಚರಿಕೆ ನೀಡಿದ ಹೆಡ್ ಅವರನ್ನು ಕಟ್ಟಿಹಾಕಲು ರೋಹಿತ್ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾದವು. ಕೇವಲ ಹೆಡ್ (146) ಅವರಿಗೆ ಉತ್ತಮವಾಗಿ ಸಾಥ್ ನೀಡಿದ್ದು ಅನುಭವಿ ಆಟಗಾರ ಸ್ಟೀವ್ ಸ್ಮಿತ್ (95). ಈ ಜೋಡಿ ಈಗಾಗಲೇ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಭಾರತ ಪರ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಒಂದು ವಿಕೆಟ್ ಕಿತ್ತಿದ್ದಾರೆ. ಇಂದಿನ ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ