BPL 2024-2025: ಕೇವಲ 17 ಎಸೆತಗಳಲ್ಲಿ 82 ರನ್ ಚಚ್ಚಿದ ಅಲೆಕ್ಸ್ ಹೇಲ್ಸ್; ವಿಡಿಯೋ ನೋಡಿ
Alex Hales Explosive Century: ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ, ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಅವರು ರಂಗ್‌ಪುರ್ ರೈಡರ್ಸ್ ಪರ ಅದ್ಭುತವಾದ ಆಟ ಪ್ರದರ್ಶಿಸಿದ್ದಾರೆ. ಕೇವಲ 56 ಎಸೆತಗಳಲ್ಲಿ ಅಜೇಯ 113 ರನ್ ಗಳಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 7 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿ, ಅವರು ತಮ್ಮ ತಂಡಕ್ಕೆ ಸತತ ನಾಲ್ಕನೇ ಗೆಲುವನ್ನು ಗಳಿಸಿಕೊಟ್ಟಿದ್ದಾರೆ. ಇದರಿಂದ ರಂಗ್‌ಪುರ್ ರೈಡರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದ
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ರಂಗ್‌ಪುರ್ ರೈಡರ್ಸ್ ಪರ ಆಡುತ್ತಿರುವ ಹೇಲ್ಸ್ ಕೇವಲ 56 ಎಸೆತಗಳಲ್ಲಿ ಅಜೇಯ 113 ರನ್‌ಗಳ ತೂಫಾನ್ ಶತಕ ಸಿಡಿಸಿದ್ದಾರೆ. ಅವರ ಬಿರುಸಿನ ಇನ್ನಿಂಗ್ಸ್‌ನ ಸಹಾಯದಿಂದ ರಂಗ್‌ಪುರ್ ರೈಡರ್ಸ್ ತಂಡ, ಸಿಲ್ಹೆಟ್ ಸ್ಟ್ರೈಕರ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಗೆಲ್ಲಲು 20 ಓವರ್‌ಗಳಲ್ಲಿ 206 ರನ್‌ಗಳ ಗುರಿ ಪಡೆದಿದ್ದ ರಂಗ್‌ಪುರ್ ರೈಡರ್ಸ್ ತಂಡ ಅಲೆಕ್ಸ್ ಹೇಲ್ಸ್ ಮತ್ತು ಸೈಫ್ ಹಸನ್ ಅವರ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗುರಿ ಮುಟ್ಟಿತು.
ಹೇಲ್ಸ್ ಸಿಕ್ಸರ್, ಬೌಂಡರಿಗಳ ಸುರಿಮಳೆ
ಅಲೆಕ್ಸ್ ಹೇಲ್ಸ್ ಅವರ ಇನ್ನಿಂಗ್ಸ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯಾಯಿತು. ಈ ಬಲಗೈ ಬ್ಯಾಟ್ಸ್‌ಮನ್ ತಮ್ಮ ಇನ್ನಿಂಗ್ಸ್‌ನಲ್ಲಿ 7 ಸಿಕ್ಸರ್ ಮತ್ತು 10 ಬೌಂಡರಿಗಳನ್ನು ಬಾರಿಸಿದರು. ಇದರರ್ಥ ಹೇಲ್ಸ್ ಕೇವಲ ಬೌಂಡರಿಗಳಿಂದಲೇ 82 ರನ್ ಗಳಿಸಿದರು. ಹೇಲ್ಸ್ ಅವರ ಸ್ಟ್ರೈಕ್ ರೇಟ್ ಕೂಡ 200ಕ್ಕಿಂತ ಹೆಚ್ಚಿದ್ದು ಅವರ ಇನ್ನಿಂಗ್ಸ್‌ನ ವಿಶೇಷವಾಗಿತ್ತು. ರಂಗ್‌ಪುರ್ ರೈಡರ್ಸ್ ಕೇವಲ 2 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತ್ತು ಆದರೆ ಇದಾದ ನಂತರ ಸೈಫ್ ಹಸನ್ ಜೊತೆಗೂಡಿ ಹೇಲ್ಸ್ 186 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಜಯ ತಂದುಕೊಟ್ಟರು.
Warning : Hales-torm incoming! ❄
A quickfire 113* from Alex Hales helped the Rangpur Riders cruise past the target with 8 wickets to spare! 👊 #BPLonFanCode pic.twitter.com/MOIG4DkHKQ
— FanCode (@FanCode) January 6, 2025
ರಂಗ್‌ಪುರ ರೈಡರ್ಸ್‌ಗೆ ಸತತ ನಾಲ್ಕನೇ ಗೆಲುವು
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ರಂಗ್‌ಪುರ ರೈಡರ್ಸ್‌ಗೆ ಇದು ಸತತ ನಾಲ್ಕನೇ ಗೆಲುವು. ನಾಲ್ಕೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ರಂಗ್‌ಪುರ ಅಗ್ರಸ್ಥಾನದಲ್ಲಿದೆ. ಖುಲ್ನಾ ಟೈಗರ್ಸ್ ಕೂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ. ಅಲೆಕ್ಸ್ ಹೇಲ್ಸ್ ಈ ಟೂರ್ನಿಯಲ್ಲಿ ಇದುವರೆಗೆ 4 ಪಂದ್ಯಗಳಲ್ಲಿ 86.50 ಸರಾಸರಿಯಲ್ಲಿ 173 ರನ್ ಗಳಿಸಿದ್ದಾರೆ. ಇದರಲ್ಲಿ 10 ಸಿಕ್ಸರ್ ಮತ್ತು 16 ಬೌಂಡರಿಗಳಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ