ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದು ಪಂದ್ಯಗಳ T20 ಸರಣಿಯು ಜೂನ್ 9 ರಂದು ಪ್ರಾರಂಭವಾಗುತ್ತದೆ. ಸರಣಿಯ ಮೊದಲ ಪಂದ್ಯವು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಗಾಗಿ, ಬಿಸಿಸಿಐ ಹಿರಿಯ ಆಯ್ಕೆ ಸಮಿತಿಯು ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ನಾಯಕ ರೋಹಿತ್ ಶರ್ಮಾ (Rohit Sharma, Jaspreet Bumra)ಗೆ ವಿಶ್ರಾಂತಿ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ತಂಡದ ನಾಯಕನಾಗಿ ಕೆಎಲ್ ರಾಹುಲ್ (KL Rahul)ಗೆ ಪಟ್ಟಕಟ್ಟಲಾಗಿದೆ. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ರಾಹುಲ್ ತಂಡದ ನಾಯಕರಾಗಿದ್ದರು. ರಾಹುಲ್ ಇತ್ತೀಚೆಗೆ IPL-2022 ರಲ್ಲಿ ಹೊಸದಾಗಿ ಪ್ರಾರಂಭಿಸಲಾದ ಲಕ್ನೋ ಸೂಪರ್ ಜೈಂಟ್ಸ್ ನಾಯಕತ್ವ ವಹಿಸಿದ್ದರು. ಅವರು ತಂಡವನ್ನು ಪ್ಲೇ ಆಫ್‌ಗೆ ಕರೆದೊಯ್ದರು. ಆದರೆ, ಈ ಯಶಸ್ಸು ಟೀಂ ಇಂಡಿಯಾದಲ್ಲಿ ಪುನರಾವರ್ತನೆಯಾಗುವುದೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಇದರ ಹಿಂದೆ ಹಲವು ಕಾರಣಗಳಿವೆ. ನಾಯಕನಾಗಿ ರಾಹುಲ್ ದಾಖಲೆ ಉತ್ತಮವಾಗಿಲ್ಲ. ಆದರೂ ಅವರು ಟೀಂ ಇಂಡಿಯಾ ನಾಯಕ ರೇಸ್‌ನಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಂಡ ನಂತರ ರಾಹುಲ್ ನಾಯಕತ್ವದ ರೇಸ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ರಾಹುಲ್ ನಂತರ ಪಂದ್ಯಕ್ಕೆ ತಂಡದ ನಾಯಕರಾಗಿದ್ದರು. ರೋಹಿತ್ ಶರ್ಮಾ ಮೂರು ಸ್ವರೂಪಗಳಿಗೆ ನಾಯಕನಾಗಿದ್ದರೆ, ರಾಹುಲ್ ಉಪನಾಯಕನಾಗಿ ನೇಮಕಗೊಂಡರು.
ಕೆಟ್ಟ ದಾಖಲೆ..
ಟೀಂ ಇಂಡಿಯಾ ನಾಯಕನಾಗಿ ರಾಹುಲ್ ಅವರ ದಾಖಲೆಯನ್ನು ನೋಡಿದರೆ ಇನ್ನೂ ಕೆಟ್ಟದಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಅವರು ನಾಯಕತ್ವದ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋತಿತ್ತು. ನಂತರ ರಾಹುಲ್ ನಾಯಕತ್ವ ವಹಿಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಸೋತರು. ಕೊಹ್ಲಿ ಮತ್ತು ರೋಹಿತ್ ನಾಯಕತ್ವದಲ್ಲಿ ಕಾಣುವ ಆಕ್ರಮಣಶೀಲತೆ ಮತ್ತು ಜಾಣ್ಮೆ ರಾಹುಲ್ ನಾಯಕತ್ವದಲ್ಲಿ ಕಾಣುತ್ತಿಲ್ಲ. ಇದು ಅವರ ನಾಯಕತ್ವದ ದೊಡ್ಡ ದೌರ್ಬಲ್ಯ ಎಂದು ಪರಿಗಣಿಸಲಾಗಿದೆ. ಅವರು ಎರಡು ವರ್ಷಗಳ ಕಾಲ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್‌ಗೆ ನಾಯಕರಾಗಿದ್ದರು. ಆದರೆ, ತಂಡವನ್ನು ಪ್ಲೇ ಆಫ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ರಾಹುಲ್ ಈ ಸೀಸನ್ನಲ್ಲಿ ಲಕ್ನೋವನ್ನು ಪ್ಲೇ ಆಫ್‌ಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಆದರೆ ಫೈನಲ್ಗೇರುವಲ್ಲಿ ಅವರ ನಿಧಾನಗತಿಯ ಬ್ಯಾಟಿಂಗ್ಗೆ ತಂಡದ ಸೋಲಿಗೆ ಕಾರಣವಾಯಿತು. ಇಂತಹ ಸಂದರ್ಭಗಳಲ್ಲಿ ಅನುಭವವಿರುವ ರಾಹುಲ್ ಉತ್ತಮ ನಾಯಕನಾಗಿ ಬೆಳೆದು ಅಗತ್ಯ ಬಿದ್ದಾಗ ಟೀಂ ಇಂಡಿಯಾವನ್ನು ನಿಭಾಯಿಸುವ ನಿರೀಕ್ಷೆಯಿದೆ.
ಒಂದು ವೇಳೆ ಫ್ಲಾಪ್ ಆದಲ್ಲಿ ಸ್ಥಾನ ಕಳೆದುಕೊಂಡಂತಾಗುತ್ತದೆ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ರಾಹುಲ್‌ಗೆ ದೊಡ್ಡ ಸವಾಲಾಗಿದೆ. ಏಕೆಂದರೆ ಇದು ಬಹುಶಃ ನಾಯಕ ಅಥವಾ ಉಪನಾಯಕನಾಗಿ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಸರಣಿಯಲ್ಲಿ ರಾಹುಲ್ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆದಾರರು ಅವರ ಮೇಲೆ ನಂಬಿಕೆ ಇಡುತ್ತಾರೆ. ಆದರೆ, ಅವರು ವಿಫಲವಾದರೆ ಬದಲಾವಣೆಗಳನ್ನು ಕಾಣಬಹುದು. ಟೀಂ ಇಂಡಿಯಾಗೆ ಈಗ ಉಪನಾಯಕ/ನಾಯಕನ ಆಯ್ಕೆ ಇದೆ. ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ರೇಸ್‌ನಲ್ಲಿದ್ದಾರೆ. ಪಂತ್ ಮತ್ತು ಬುಮ್ರಾ ಕೂಡ ಉಪನಾಯಕರಾಗಿದ್ದಾರೆ. ಇದರೊಂದಿಗೆ ಕೆಎಲ್ ರಾಹುಲ್‌ಗೆ ಈ ಸರಣಿಯಲ್ಲಿ ದೊಡ್ಡ ಅಪಾಯ ಎದುರಾಗಿದೆ. ಹೀಗಾಗಿ ಈ ಸರಣಿಯಲ್ಲಿ ರಾಹುಲ್ ಹೇಗೆ ಕಾರ್ಯನಿರ್ವಹಿತ್ತಾರೆ ಎಂಬುದನ್ನು ನಾವು ನೋಡಬೇಕಾಗಿದೆ.
Published On - 2:46 pm, Sun, 5 June 22