AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಳತಿ ಸಮ್ರೀನ್‌ಗೆ ಉಂಗುರ ತೊಡಿಸಿದ ಅರ್ಷದೀಪ್: ಅಭಿಮಾನಿಗಳಿಗೆ ಸಿಹಿಸುದ್ದಿ

ಟೀಂ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ತಮ್ಮ ಗೆಳತಿ ಸಮ್ರೀನ್ ಕೌರ್ ಜೊತೆ ನ್ಯೂಜಿಲೆಂಡ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮೊಣಕಾಲೂರಿ ಪ್ರಪೋಸ್ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪಂಜಾಬಿ ನಟಿ ಮತ್ತು 'ಮಿಸ್ ಇಂಡಿಯಾ ಜಮ್ಮು ಕಾಶ್ಮೀರ್' ಪ್ರಶಸ್ತಿ ವಿಜೇತೆ ಸಮ್ರೀನ್ ಕೌರ್ ಜೊತೆ ಅರ್ಷದೀಪ್ ಅವರ ಪ್ರೇಮಕಥೆಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಈ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

ಗೆಳತಿ ಸಮ್ರೀನ್‌ಗೆ ಉಂಗುರ ತೊಡಿಸಿದ ಅರ್ಷದೀಪ್: ಅಭಿಮಾನಿಗಳಿಗೆ ಸಿಹಿಸುದ್ದಿ
ಅರ್ಷದೀಪ್ ಸಿಂಗ್ ಮತ್ತು ಸಮ್ರೀನ್ ಕೌರ್
ಪೃಥ್ವಿಶಂಕರ
|

Updated on: Nov 11, 2026 | 7:23 PM

Share

ಟೀಂ ಇಂಡಿಯಾದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ತಮ್ಮ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ನಡುವೆಯೇ ತಮ್ಮ ಬಹುಕಾಲದ ಗೆಳತಿ ಸಮ್ರೀನ್ ಕೌರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅರ್ಷದೀಪ್ ಸಿಂಗ್ ತಮ್ಮ ಗೆಳತಿ ಸಮ್ರೀನ್ ಕೌರ್ ಅವರಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ ಮಾಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಫೋಟೋಗಳಲ್ಲಿ ಅರ್ಷದೀಪ್ ಮೊಣಕಾಲೂರಿ ಕುಳಿತು ಸಮ್ರೀನ್‌ಗೆ ಉಂಗುರ ತೊಡಿಸುತ್ತಿರುವ ಸುಂದರ ಕ್ಷಣ ಸೆರೆಯಾಗಿದೆ.

ಪ್ರೇಯಸಿಗೆ ಪ್ರಪೋಸ್ ಮಾಡಿದ ಅರ್ಷದೀಪ್

ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಕ್ಕಾಗಿ ಅರ್ಷದೀಪ್ ನ್ಯೂಜಿಲೆಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಮ್ರೀನ್ ಕೌರ್ ಜೊತೆಗಿನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿರುವ ಅವರು ಭಾವನಾತ್ಮಕ ಸಂದೇಶವನ್ನೂ ಬರೆದುಕೊಂಡಿದ್ದಾರೆ. ‘ಜೀವನ ನಮಗೆ ನೀಡಬಹುದಾದ ಎಲ್ಲ ಉಡುಗೊರೆಗಳಿಗಿಂತಲೂ ದೊಡ್ಡ ಸಂತೋಷವೆಂದರೆ ಅದು ನಮಗೆ ಒಬ್ಬರನ್ನೊಬ್ಬರು ನೀಡಿರುವುದು. ಈ ಜೀವಮಾನದ ಒಡನಾಟಕ್ಕೆ ಮುನ್ನುಡಿ ಬರೆದಿದ್ದೇವೆ. 11.11.2026ರಂದು ನಮ್ಮ ನಿಶ್ಚಿತಾರ್ಥ’ ಎಂದು ಇಬ್ಬರೂ ಪೋಸ್ಟ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

View this post on Instagram

A post shared by Samreen (@samreenkaur__)

ಬಹುದಿನಗಳ ಪ್ರೀತಿಗೆ ಅಧಿಕೃತ ಮುದ್ರೆ

ಅರ್ಷದೀಪ್ ಸಿಂಗ್ ಮತ್ತು ಸಮ್ರೀನ್ ಕೌರ್ ಅವರ ಪ್ರೇಮಕಥೆ ಬಹಳ ದಿನಗಳಿಂದಲೇ ಸುದ್ದಿಯಲ್ಲಿತ್ತು. ಆರಂಭದಲ್ಲಿ ಅರ್ಷದೀಪ್ ಸ್ನ್ಯಾಪ್‌ಚಾಟ್‌ನಲ್ಲಿ ಯುವತಿಯೊಬ್ಬರ ಕೈ ಹಿಡಿದಿರುವ ಫೋಟೋ ಹಂಚಿಕೊಂಡಿದ್ದರು. ಆದರೆ ಆ ಸಂದರ್ಭದಲ್ಲಿ ಗೆಳತಿಯ ಮುಖವನ್ನು ಬಹಿರಂಗಪಡಿಸಿರಲಿಲ್ಲ. ಇದರಿಂದ ಅವರ ಪ್ರೇಮದ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ನಂತರ ಧರ್ಮಶಾಲಾದ ಬೀದಿಗಳಲ್ಲಿ ಇಬ್ಬರೂ ಕೈಕೈ ಹಿಡಿದುಕೊಂಡು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ತಡೆಯಲು ಅರ್ಷದೀಪ್ ಪ್ರಯತ್ನಿಸಿದ್ದು ಕೂಡ ಗಮನ ಸೆಳೆದಿತ್ತು.

ಕೊನೆಗೆ ಜುಲೈ ತಿಂಗಳಲ್ಲಿ ಸಮ್ರೀನ್ ಕೌರ್ ಜೊತೆಗಿನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು. ಇದೀಗ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಹಾರ್ದಿಕ್ ಪಾಂಡ್ಯಗೆ ಮುಂಬೈ ವಿದಾಯ; ಅರ್ಷದೀಪ್ ಸಿಂಗ್‌ಗೆ ಅದ್ಧೂರಿ ಸ್ವಾಗತ

ಯಾರು ಈ ಸಮ್ರೀನ್ ಕೌರ್?

ಅರ್ಷದೀಪ್ ಸಿಂಗ್ ಅವರ ಬಾಳಸಂಗಾತಿಯಾಗಲಿರುವ ಸಮ್ರೀನ್ ಕೌರ್ ಮನರಂಜನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಯುವ ತಾರೆ. ಪಂಜಾಬಿ ಸಂಗೀತ ವಿಡಿಯೋಗಳಲ್ಲಿ ತಮ್ಮ ಅಭಿನಯದ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಬಾಲಿವುಡ್‌ನ ‘83′ ಸಿನಿಮಾದಲ್ಲೂ ಅವರು ಸಣ್ಣದಾದರೂ ಗಮನ ಸೆಳೆಯುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ‘ನೇಲ್ ಪಾಲಿಷ್’ ಸೇರಿದಂತೆ ವೆಬ್ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಹಲವು ಜನಪ್ರಿಯ ಪಂಜಾಬಿ ಹಾಡುಗಳ ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಮ್ರೀನ್ ಕೌರ್ ಅವರು ‘ಮಿಸ್ ಇಂಡಿಯಾ ಜಮ್ಮು ಮತ್ತು ಕಾಶ್ಮೀರ’ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ತಮ್ಮ ಫ್ಯಾಷನ್ ಹಾಗೂ ಸ್ಟೈಲಿಶ್ ಲುಕ್ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More