Mark Wood: ಅತೀ ವೇಗದ ಬೌಲಿಂಗ್…ದಾಖಲೆ ಬರೆದ ಮಾರ್ಕ್​ ವುಡ್

| Updated By: ಝಾಹಿರ್ ಯೂಸುಫ್

Updated on: Jul 08, 2023 | 4:08 PM

Ashes 2023: ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.

Mark Wood: ಅತೀ ವೇಗದ ಬೌಲಿಂಗ್...ದಾಖಲೆ ಬರೆದ ಮಾರ್ಕ್​ ವುಡ್
Mark Wood
Follow us on

Ashes 2023: ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಮೂಲಕ ಹೆಡಿಂಗ್ಲಿ ಮೈದಾನದಲ್ಲಿ ಇಂಗ್ಲೆಂಡ್ ವೇಗಿ ಮಾರ್ಕ್ ವುಡ್ (Mark Wood) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ ಅತ್ಯಂತ ವೇಗವಾಗಿ ಚೆಂಡೆಸೆಯುವ ಮೂಲಕ ಎಂಬುದೇ ಇಲ್ಲಿ ವಿಶೇಷ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ದಾಳಿಗಿಳಿದ ಮಾರ್ಕ್​ ವುಡ್ ಕರಾರುವಾಕ್ ದಾಳಿ ಮೂಲಕ ಗಮನ ಸೆಳೆದಿದ್ದರು. ಅದರಲ್ಲೂ ತಮ್ಮ ಮೊದಲ ಓವರ್​ನ ಎಲ್ಲಾ ಎಸೆತಗಳನ್ನು 145 Kmph ನಲ್ಲಿ ಎಸೆದಿರುವುದು ವಿಶೇಷ.

ಈ ಓವರ್​ನ ಮೊದಲ ಎಸೆತವು 146 Kmph ವೇಗದಲ್ಲಿ ಮೂಡಿಬಂದರೆ, 2ನೇ ಎಸೆತವು 149 Kmph ವೇಗದಲ್ಲಿ ಸಾಗಿತು. ಇನ್ನು 3ನೇ ಎಸೆತವು 152.8 Kmph ವೇಗದಲ್ಲಿ ವಿಕೆಟ್ ಕೀಪರ್ ಕೈ ಸೇರಿತು. ಹಾಗೆಯೇ 4ನೇ ಎಸೆತವನ್ನು 149 Kmph ವೇಗದಲ್ಲಿ ಎಸೆದರು. ಇನ್ನು 5ನೇ ಎಸೆತವು 151 Kmph ವೇಗದಲ್ಲಿ ಸಾಗಿದರೆ, 6ನೇ ಎಸೆತವನ್ನು 149 Kmph ವೇಗದಲ್ಲಿ ಎಸೆದರು.

ಅಂದರೆ ಒಂದೇ ಓವರ್​ನಲ್ಲಿ ಎರಡು ಬಾರಿ 150 ಕ್ಕಿಂತ ಹೆಚ್ಚಿನ ವೇಗದಲ್ಲಿ ಚೆಂಡೆಸೆಯುಸುವ ಮೂಲಕ​ ಹೆಡಿಂಗ್ಲಿ ಮೈದಾನದಲ್ಲಿ ಅತ್ಯಂತ ವೇಗದಲ್ಲಿ ಬೌಲಿಂಗ್ ಮಾಡಿದ ದಾಖಲೆಯನ್ನು ಮಾರ್ಕ್​ ವುಡ್ ನಿರ್ಮಿಸಿದ್ದಾರೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 11.4 ಓವರ್ ಬೌಲಿಂಗ್ ಮಾಡಿದ್ದ ಮಾರ್ಕ್​ ವುಡ್ ಕೇವಲ 34 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 263 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: Mark Wood: ಅಂದು ಬೇಸರದಿಂದ IPL ತೊರೆದಿದ್ದ ಮಾರ್ಕ್​ ವುಡ್ ಇಂದು ಭರ್ಜರಿ ಕಂಬ್ಯಾಕ್..!

ಕುತೂಹಲಘಟ್ಟದತ್ತ ಆ್ಯಶಸ್ ಟೆಸ್ಟ್:

ಆ್ಯಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ಮತ್ತೊಂದೆಡೆ ಮಾರ್ಕ್ ವುಡ್ (5 ವಿಕೆಟ್) ದಾಳಿಗೆ ತತ್ತರಿಸಿದ ಆಸೀಸ್ ಪಡೆ ಮೊದಲ ಇನಿಂಗ್ಸ್ ಅನ್ನು 263 ರನ್​ಗಳಿಗೆ ಅಂತ್ಯಗೊಳಿಸಿತು.

ಇನ್ನು ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ (6 ವಿಕೆಟ್) ಅವರ ಕರಾರುವಾಕ್ ದಾಳಿ ಮುಂದೆ ಇಂಗ್ಲೆಂಡ್ ಬ್ಯಾಟರ್​ಗಳು ಕ್ರೀಸ್​ ಕಚ್ಚಿ ನಿಲ್ಲಲು ಪರದಾಡಿದರು. ಇದಾಗ್ಯೂ ಬೆನ್ ಸ್ಟೋಕ್ಸ್ (80) ಅವರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 237 ರನ್​ಗಳಿಸಿತು.

ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡವು 116 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡಿದೆ. ಸದ್ಯ ಕ್ರೀಸ್​ನಲ್ಲಿ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.