ಟೀಂ ಇಂಡಿಯಾ ಕೋಚ್ ಆಗಲು ಹೆಂಡತಿಯ ಅನುಮತಿ ಬೇಕು ಎಂದ ನೆಹ್ರಾ

ಆಶಿಶ್ ನೆಹ್ರಾ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಕುರಿತು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ಪತ್ನಿಯ ಅನುಮತಿ ಇಲ್ಲದೆ ಈ ಹುದ್ದೆ ಒಪ್ಪಿಕೊಂಡರೆ ವಿಚ್ಛೇದನ ಖಚಿತ ಎಂದಿದ್ದಾರೆ. ಕೋಚ್ ಆಗುವುದು ಗೌರವದ ವಿಚಾರವಾದರೂ, ಸದ್ಯ ಗುಜರಾತ್ ಟೈಟನ್ಸ್ ಕೋಚ್ ಆಗಿ ಸಂತೋಷವಾಗಿದ್ದೇನೆ ಎಂದಿದ್ದು, ಭವಿಷ್ಯದಲ್ಲಿ ಯೋಚಿಸುವುದಾಗಿ ತಿಳಿಸಿದ್ದಾರೆ.

ಟೀಂ ಇಂಡಿಯಾ ಕೋಚ್ ಆಗಲು ಹೆಂಡತಿಯ ಅನುಮತಿ ಬೇಕು ಎಂದ ನೆಹ್ರಾ
Ashish Nehra

Updated on: Sep 10, 2026 | 7:12 PM

ಟೀಂ ಇಂಡಿಯಾದ ಹೆಡ್ ಕೋಚ್ ಆಗಲು ಹೆಂಡತಿಯ ಅನುಮತಿಬೇಕು, ಇಲ್ಲದಿದ್ದರೆ ನನಗೆ ವಿಚ್ಛೇದನ ಖಚಿತ ಎಂದು ಟೀಂ ಇಂಡಿಯಾದ ಮಾಜಿ ವೇಗಿದ ಬೌಲರ್ ಆಶಿಶ್ ನೆಹ್ರಾ ತಮಾಷೆಯಾಗಿ ಹೇಳುವ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದ್ದಾರೆ. ಆದಾಗ್ಯೂ ನೆಹ್ರಾ ಟೀಂ ಇಂಡಿಯಾ ಕೋಚ್ ಹುದ್ದೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿಲ್ಲ. ಬದಲಿಗೆ ಟೀಂ ಇಂಡಿಯಾದ ಕೋಚ್ ಆಗುವುದು ಗೌರವದ ವಿಚಾರ. ಆದರೆ ಪ್ರಸ್ತುತ ನಾನು ಗುಜರಾತ್ ಟೈಟಾನ್ಸ್ ತಂಡದ ಹೆಡ್ ಕೋಚ್ ಆಗಿ ಸಂತೋಷವಾಗಿದ್ದೇನೆ ಎಂದಿದ್ದಾರೆ.

ಮಡದಿಯ ಅನುಮತಿ ಬೇಕು

ಭವಿಷ್ಯದಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ಬಗ್ಗೆ ಕೋಲ್ಕತ್ತಾದಲ್ಲಿ ನಡೆದ ಸಿಎಬಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ನೆಹ್ರಾ, ಹೆಡ್ ಕೋಚ್ ಆಗಿ ತಂಡದೊಂದಿಗೆ ವರ್ಷವಿಡೀ ಪ್ರಯಾಣ ಮಾಡಬೇಕಾಗುತ್ತದೆ. ಇದು ತುಂಬಾ ಕಷ್ಟಕರ. ಆದಾಗ್ಯೂ ಈ ಹುದ್ದೆಗೆ ತಮ್ಮ ಪತ್ನಿ ರುಶ್ಮಾ ಅವರ ಅನುಮತಿ ಬೇಕಾಗುತ್ತದೆ. ಇಲ್ಲದಿದ್ದರೆ ಅವರು ನನಗೆ ವಿಚ್ಛೇದನ ನೀಡುವುದು ಖಚಿತ ಎಂದು ನೆಹ್ರಾ ತಮಾಷೆಯಾಗಿ ಹೇಳಿದ್ದಾರೆ. ಆದಾಗ್ಯೂ ಟೀಂ ಇಂಡಿಯಾದ ಮುಖ್ಯ ಕೋಚ್ ಆಗುವುದು ಗೌರವದ ವಿಚಾರ. ಆದರೆ ಅದನ್ನು ನಾನು ಮಹತ್ವಾಕಾಂಕ್ಷೆಯನ್ನಾಗಿ ಮಾಡಿಕೊಂಡಿಲ್ಲ. ಪ್ರಸ್ತುತ ಗುಜರಾತ್ ಟೈಟಾನ್ಸ್ ತಂಡದಲ್ಲಿಯೇ ನಾನು ಸಂತೋಷವಾಗಿದ್ದೇನೆ. ಭವಿಷ್ಯದಲ್ಲಿ ಆ ಬಗ್ಗೆ ಯೋಚಿಸುತ್ತೇನೆ ಎಂದು ನೆಹ್ರಾ ಹೇಳಿದ್ದಾರೆ.

ಐಪಿಎಲ್​ನಲ್ಲಿ ನೆಹ್ರಾ

ಆಶಿಶ್ ನೆಹ್ರಾ ಪ್ರಸ್ತುತ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಖ್ಯ ಕೋಚ್ ಆಗಿದ್ದು, 2022 ರಿಂದ ತಂಡದಲ್ಲಿದ್ದಾರೆ. ತಮ್ಮ ಕೋಚಿಂಗ್​ನಲ್ಲಿ ಗುಜರಾತ್ ತಂಡವನ್ನು ಚೊಚ್ಚಲ ಆವೃತ್ತಿಯಲ್ಲೇ ಚಾಂಪಿಯನ್ ಮಾಡಿದ್ದರು. ಅದಾದ ಬಳಿಕ ಗುಜರಾತ್ ತಂಡವನ್ನು ಎರಡು ಬಾರಿ ಫೈನಲ್​ಗೇರಿಸಿದ್ದಾರೆ. ಆದರೆ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ; ಟೀಂ ಇಂಡಿಯಾ ಯಾವಾಗ, ಯಾರ ವಿರುದ್ಧ ಆಡಲಿದೆ?

ನೆಹ್ರಾ ವೃತ್ತಿಜೀವನ

ಇನ್ನು ನೆಹ್ರಾ ಭಾರತ ಪರ 17 ಟೆಸ್ಟ್, 120 ಏಕದಿನ ಮತ್ತು 27 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟೆಸ್ಟ್‌ನಲ್ಲಿ 44, ಏಕದಿನದಲ್ಲಿ 157 ಮತ್ತು ಟಿ20ಯಲ್ಲಿ 34 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2017 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನೆಹ್ರಾ, ನವೆಂಬರ್ 1, 2017 ರಂದು ದೆಹಲಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us