ಏಷ್ಯಾಕಪ್ನ 6ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಶ್ರೀಲಂಕಾ ತಂಡ 2 ರನ್ಗಳ ರೋಚಕ ಜಯ ಸಾಧಿಸಿದೆ. ಲಾಹೋರ್ನ ಗಡ್ಡಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ದುಸನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 50 ಓವರ್ಗಳಲ್ಲಿ 291 ರನ್ ಕಲೆಹಾಕಿತು. ಈ ಮೊತ್ತವನ್ನು 37.1 ಓವರ್ಗಳಲ್ಲಿ ಚೇಸ್ ಮಾಡಿದರೆ ಸೂಪರ್-4 ಹಂತಕ್ಕೇರಲು ಅಫ್ಘಾನಿಸ್ತಾನ್ ತಂಡಕ್ಕೆ ಅವಕಾಶವಿತ್ತು.
ಅದರಂತೆ ಭರ್ಜರಿಯಾಗಿ ಬ್ಯಾಟ್ ಬೀಸಿದ ಅಫ್ಘಾನ್ ಆಟಗಾರರು 37 ಓವರ್ಗಳ ವೇಳೆಗೆ ತಂಡದ ಮೊತ್ತವನ್ನು 289 ಕ್ಕೆ ತಂದು ನಿಲ್ಲಿಸಿದ್ದರು. ಆದರೆ 1 ಎಸೆತದಲ್ಲಿ 3 ರನ್ಗಳ ಅವಶ್ಯಕತೆಯಿದ್ದಾಗ ಮುಜೀಬ್ ಉರ್ ರೆಹಮಾನ್ ಕ್ಯಾಚ್ ನೀಡಿದರು. ಇದರೊಂದಿಗೆ ಸೂಪರ್-4 ಹಂತಕ್ಕೇರುವ ಅಫ್ಘಾನಿಸ್ತಾನ್ ತಂಡ ಕನಸು ಕೂಡ ಕಮರಿತು. ಇದರ ಬೆನ್ನಲ್ಲೇ ಫಾರೂಖಿಯನ್ನು ಸಹ ಔಟ್ ಮಾಡಿದ ಶ್ರೀಲಂಕಾ ತಂಡವು 2 ರನ್ಗಳ ರೋಚಕ ಜಯ ಸಾಧಿಸಿತು.
ಶ್ರೀಲಂಕಾ- 291/8 (50)
ಅಫ್ಘಾನಿಸ್ತಾನ್- 289 (37.4)
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಝಲ್ಹಕ್ ಫಾರೂಖಿ.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ(ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮಥೀಶ ಪತಿರಾಣ.
ಮುಜೀಬ್ ಹಾಗೂ ಫಾರೂಖಿ ವಿಕೆಟ್ ಕಬಳಿಸಿದ ಧನಂಜಯ ಡಿಸಿಲ್ವಾ. 2 ರನ್ಗಳಿಂದ ಸೋತು ಏಷ್ಯಾಕಪ್ನಿಂದ ಹೊರಬಿದ್ದ ಅಫ್ಘಾನಿಸ್ತಾನ್ ತಂಡ.
ಸೂಪರ್- 4 ಹಂತಕ್ಕೆ ನಾಲ್ಕು ತಂಡಗಳು ಫೈನಲ್:
ಟೂರ್ನಿಯಿಂದ ಹೊರಬಿದ್ದ ನೇಪಾಳ ಹಾಗೂ ಅಫ್ಘಾನಿಸ್ತಾನ್ ತಂಡಗಳು.
ದುನಿಲ್ ವೆಲ್ಲಲಾಗೆ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸಿದ ರಶೀದ್ ಖಾನ್.
1 ಎಸೆತಗಳಲ್ಲಿ 3 ರನ್ ಬಾರಿಸಿದರೆ ಅಫ್ಘಾನಿಸ್ತಾನ್ ತಂಡ ಸೂಪರ್-4 ಹಂತಕ್ಕೇರಲಿದೆ.
7 ಎಸೆತಗಳಲ್ಲಿ 15 ಬಾರಿಸಿದರೆ ಅಫ್ಘಾನಿಸ್ತಾನ್ ತಂಡ ಸೂಪರ್-4 ಹಂತಕ್ಕೇರಲಿದೆ. ಅತ್ತ ಶ್ರೀಲಂಕಾ ತಂಡವು ಏಷ್ಯಾಕಪ್ನಿಂದ ಹೊರಬೀಳಲಿದೆ. ಕುತೂಹಲ ಘಟ್ಟದಲ್ಲಿ ಸೂಪರ್-4 ಹಂತದ ರೇಸ್.
ಕಸುನ್ ರಜಿತ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ನಜೀಬುಲ್ಲಾ ಝದ್ರಾನ್. ಕ್ರೀಸ್ನಲ್ಲಿ ರಶೀದ್ ಖಾನ್ ಹಾಗೂ ನಜೀಬುಲ್ಲಾ ಝದ್ರಾನ್ ಬ್ಯಾಟಿಂಗ್.
37.1 ಓವರ್ಗಳಲ್ಲಿ ಚೇಸ್ ಮಾಡಿದರೆ ಅಫ್ಘಾನಿಸ್ತಾನ್ ತಂಡಕ್ಕೆ ಸೂಪರ್-4 ಹಂತಕ್ಕೇರಲಿದೆ.
ಮಥೀಶ ಪತಿರಾಣ ಎಸೆತದಲ್ಲಿ ಡೀಪ್ ಕವರ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ರಶೀದ್ ಖಾನ್. ಅಫ್ಘಾನಿಸ್ತಾನ್ ತಂಡದ ಹೋರಾಟ ಮುಂದುವರಿಕೆ. ಕ್ರೀಸ್ನಲ್ಲಿ ನಜೀಬುಲ್ಲಾ ಝದ್ರಾನ್ ಹಾಗೂ ರಶೀದ್ ಖಾನ್ ಬ್ಯಾಟಿಂಗ್.
ದುನಿಲ್ ವೆಲ್ಲಲಾಗೆ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದ ಹಶ್ಮತುಲ್ಲಾ ಶಾಹಿದಿ. 66 ಎಸೆತಗಳಲ್ಲಿ 59 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಅಫ್ಘಾನಿಸ್ತಾನ್ ತಂಡದ ನಾಯಕ. ಕ್ರೀಸ್ನಲ್ಲಿ ನಜೀಬುಲ್ಲಾ ಝದ್ರಾನ್ ಹಾಗೂ ರಶೀದ್ ಖಾನ್ ಬ್ಯಾಟಿಂಗ್.
37.1 ಓವರ್ಗಳಲ್ಲಿ 292 ರನ್ಗಳಿಸಿದರೆ ಮಾತ್ರ ಅಫ್ಘಾನಿಸ್ತಾನ್ ಸೂಪರ್-4 ಹಂತಕ್ಕೇರಲಿದೆ.
ದುನಿತ್ ವೆಲ್ಲಲಾಗೆ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಕರೀಮ್ ಜನತ್. 13 ಎಸೆತಗಳಲ್ಲಿ 22 ರನ್ ಬಾರಿಸಿ ನಿರ್ಗಮಿಸಿದ ಅಫ್ಘಾನ್ ಬ್ಯಾಟರ್. ಕ್ರೀಸ್ನಲ್ಲಿ ಶಾಹಿದಿ ಹಾಗೂ ನಜೀಬುಲ್ಲಾ ಝದ್ರಾನ್ ಬ್ಯಾಟಿಂಗ್.
ಮಹೀಶ್ ತೀಕ್ಷಣ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯನ್ನ…ಬೌಂಡರಿ ಲೈನ್ನಲ್ಲಿ ಧನಂಜಯ ಡಿಸಿಲ್ವಾ ಅತ್ಯುತ್ತಮ ಕ್ಯಾಚ್…ಮೊಹಮ್ಮದ್ ನಬಿ ಔಟ್.
ಕೇವಲ 32 ಎಸೆತಗಳಲ್ಲಿ 65 ರನ್ ಬಾರಿಸಿ ನಿರ್ಗಮಿಸಿದ ಮೊಹಮ್ಮದ್ ನಬಿ
37.1 ಓವರ್ಗಳಲ್ಲಿ ಅಫ್ಘಾನಿಸ್ತಾನ್ 292 ರನ್ಗಳನ್ನು ಚೇಸ್ ಮಾಡಿದರೆ ಸೂಪರ್-4 ಹಂತಕ್ಕೇರಲಿದೆ. ಶ್ರೀಲಂಕಾ ಟೂರ್ನಿಯಿಂದ ಹೊರಬೀಳಲಿದೆ.
ಕಸುನ್ ರಜಿತ ಎಸೆತದಲ್ಲಿ ಲೆಗ್ ಸೈಡ್ನತ್ತ ತೂಫಾನ್ ಸಿಕ್ಸ್ ಸಿಡಿಸಿದ ಮೊಹಮ್ಮದ್ ನಬಿ. ಅಫ್ಘಾನಿಸ್ತಾನ್ ತಂಡದ ಭರ್ಜರಿ ಬ್ಯಾಟಿಂಗ್. ಕ್ರೀಸ್ನಲ್ಲಿ ಹಶ್ಮತುಲ್ಲಾ ಶಾಹಿದಿ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್.
ಪತಿರಾಣ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಮೊಹಮ್ಮದ್ ನಬಿ.
ಅಫ್ಘಾನಿಸ್ತಾನ್ ಪರ ಏಕದಿನ ಕ್ರಿಕೆಟ್ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ದಾಖಲೆ ನಬಿ ಪಾಲು.
ಅಫ್ಘಾನಿಸ್ತಾನ್ ತಂಡದ ಭರ್ಜರಿ ಬ್ಯಾಟಿಂಗ್. 24 ಓವರ್ಗಳ ಮುಕ್ತಾಯದ ವೇಳೆ 180 ರನ್ ಪೇರಿಸಿದ ಅಫ್ಘಾನ್ನರು.
37.1 ಓವರ್ಗಳಲ್ಲಿ 292 ರನ್ಗಳ ಗುರಿ ಮುಟ್ಟಿದರೆ ಅಫ್ಘಾನಿಸ್ತಾನ್ ಸೂಪರ್-4 ಹಂತಕ್ಕೇರಲಿದೆ.
ಕ್ರೀಸ್ನಲ್ಲಿ ಮೊಹಮ್ಮದ್ ನಬಿ ಹಾಗೂ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್
ಕಸುನ್ ರಜಿತ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿದ ರಹಮತ್ ಶಾ. ಫ್ರಂಟ್ ಫೀಲ್ಡರ್ಗೆ ಸುಲಭ ಕ್ಯಾಚ್. ಶ್ರೀಲಂಕಾ ತಂಡಕ್ಕೆ 4ನೇ ಯಶಸ್ಸು.
40 ಎಸೆತಗಳಲ್ಲಿ 45 ರನ್ ಬಾರಿಸಿ ನಿರ್ಗಮಿಸಿದ ರಹಮತ್ ಶಾ.
ಕ್ರೀಸ್ನಲ್ಲಿ ಹಶ್ಮತುಲ್ಲಾ ಶಾಹಿದಿ ಹಾಗೂ ಮೊಹಮ್ಮದ್ ನಬಿ ಬ್ಯಾಟಿಂಗ್
ಧನಂಜಯ ಡಿಸಿಲ್ವಾ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಸಿಡಿಸಿದ ರಹಮತ್ ಶಾ. 14 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತ 92 ರನ್ಗಳು. ಕ್ರೀಸ್ನಲ್ಲಿ ರಹಮತ್ ಶಾ (37) ಹಾಗೂ ಹಶ್ಮತುಲ್ಲಾ ಶಾಹಿದಿ (16) ಬ್ಯಾಟಿಂಗ್.
ದಸುನ್ ಶಾನಕ ಎಸೆತದಲ್ಲಿ ಲಾಂಗ್ ಆನ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಫ್ಗಾನಿಸ್ತಾನ್ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ. ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್.
ಮಥೀಶ್ ಪತಿರಾಣ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಗುಲ್ಬದ್ದೀನ್ ನೈಬ್. ಶ್ರೀಲಂಕಾ ತಂಡಕ್ಕೆ 3ನೇ ಯಶಸ್ಸು.
16 ಎಸೆತಗಳಲ್ಲಿ 22 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಗುಲ್ಬದ್ದೀನ್ ನೈಬ್.
ಕ್ರೀಸ್ನಲ್ಲಿ ರಹಮತ್ ಶಾ ಹಾಗೂ ಹಶ್ಮತುಲ್ಲಾ ಶಾಹಿದಿ ಬ್ಯಾಟಿಂಗ್.
8 ಓವರ್ಗಳಲ್ಲಿ ಅರ್ಧಶತಕ ಪೂರೈಸಿದ ಅಫ್ಘಾನಿಸ್ತಾನ್. ಕ್ರೀಸ್ನಲ್ಲಿ ಗುಲ್ಬದ್ದೀನ್ ನೈಬ್ ಹಾಗೂ ರಹಮತ್ ಶಾ ಬ್ಯಾಟಿಂಗ್.
ರಹಮಾನುಲ್ಲಾ ಗುರ್ಬಾಝ್ (4) ಹಾಗೂ ಇಬ್ರಾಹಿಂ ಝದ್ರಾನ್ (7) ಔಟ್.
2 ವಿಕೆಟ್ ಕಬಳಿಸಿದ ಶ್ರೀಲಂಕಾ ವೇಗಿ ಕಸುನ್ ರಜಿತ.
ಕಸುನ್ ರಜಿಎ ಎಸೆತದಲ್ಲಿ ಬೌಲ್ಡ್ ಆಗಿ ಹೊರನಡೆದ ಇಬ್ರಾಹಿಂ ಝದ್ರಾನ್. 14 ಎಸೆತಗಳಲ್ಲಿ 7 ರನ್ಗಳಿಸಿ ವಿಕೆಟ್ ಒಪ್ಪಿಸಿದ ಅಫ್ಘಾನ್ ಆರಂಭಿಕ ಆಟಗಾರ. ಕ್ರೀಸ್ನಲ್ಲಿ ಗುಲ್ಬದ್ದೀನ್ ನೈಬ್ ಹಾಗೂ ರಹಮತ್ ಶಾ ಬ್ಯಾಟಿಂಗ್
ಕಸುನ್ ರಂಜಿತ ಎಸೆತದಲ್ಲಿ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ಗೆ ಕ್ಯಾಚ್ ನೀಡಿದ ರಹಮಾನುಲ್ಲಾ ಗುರ್ಬಾಝ್. ಶ್ರೀಲಂಕಾ ತಂಡಕ್ಕೆ ಮೊದಲ ಯಶಸ್ಸು. 8 ಎಸೆತಗಳಲ್ಲಿ 4 ರನ್ ಬಾರಿಸಿ ನಿರ್ಗಮಿಸಿದ ರಹಮಾನುಲ್ಲಾ ಗುರ್ಬಾಝ್.
ಕುಸಾಲ್ ರಂಜಿತ ಎಸೆತದಲ್ಲಿ ಆಫ್ ಸೈಡ್ನತ್ತ ಭರ್ಜರಿ ಬೌಂಡರಿ ಬಾರಿಸಿ ತಂಡದ ಖಾತೆ ತೆರೆದ ರಹಮಾನುಲ್ಲಾ ಗುರ್ಬಾಝ್. ಕ್ರೀಸ್ನಲ್ಲಿ ಇಬ್ರಾಹಿಂ ಝದ್ರಾನ್ ಹಾಗೂ ರಹಮಾನುಲ್ಲಾ ಗುರ್ಬಾಝ್ ಬ್ಯಾಟಿಂಗ್.
50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 291 ರನ್ ಕಲೆಹಾಕಿದ ಶ್ರೀಲಂಕಾ. 92 ರನ್ ಬಾರಿಸಿದ ಕುಸಾಲ್ ಮೆಂಡಿಸ್ ಶ್ರೀಲಂಕಾ ಪರ ಟಾಪ್ ಸ್ಕೋರರ್.
ಅಫ್ಘಾನಿಸ್ತಾನ್ ಪರ 10 ಓವರ್ಗಳಲ್ಲಿ 60 ರನ್ ನೀಡಿ 4 ವಿಕೆಟ್ ಕಬಳಿಸಿದ ಗುಲ್ಬದ್ದೀನ್ ನೈಬ್.
43 ಓವರ್ಗಳ ಮುಕ್ತಾಯದ ವೇಳೆಗೆ 245 ರನ್ ಕಲೆಹಾಕಿದ ಶ್ರೀಲಂಕಾ. 7 ವಿಕೆಟ್ ಕಬಳಿಸಿರುವ ಅಫ್ಘಾನಿಸ್ತಾನ್ ತಂಡ. ಕ್ರೀಸ್ನಲ್ಲಿ ಮಹೀಶ್ ತೀಕ್ಷಣ ಹಾಗೂ ದುನಿತ್ ಬ್ಯಾಟಿಂಗ್
ರಶೀದ್ ಖಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ದುಸನ್ ಶಾನಕ. ಅಫ್ಘಾನಿಸ್ತಾನ್ ತಂಡಕ್ಕೆ 7ನೇ ಯಶಸ್ಸು. 8 ಎಸೆತಗಳಲ್ಲಿ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ನಾಯಕ.
ಕುಸಾಲ್ ಮೆಂಡಿಸ್ ರನೌಟ್. ದುಸನ್ ಶಾನಕ ಬಾರಿಸಿದ ಚೆಂಡು ಬೌಲರ್ ರಶೀದ್ ಖಾನ್ ಕೈಗೆ ತಾಗಿ ನಾನ್ ಸ್ಟ್ರೈಕ್ ವಿಕೆಟ್ಗೆ ಬಡಿಯಿತು. ಇತ್ತ ಕ್ರೀಸ್ನಿಂದ ಹೊರಗುಳಿದಿದ್ದ ಕುಸಾಲ್ ಮೆಂಡಿಸ್ ರನೌಟ್.
84 ಎಸೆತಗಳಲ್ಲಿ 92 ರನ್ ಬಾರಿಸಿ ಶತಕ ವಂಚಿತರಾಗಿ ನಿರ್ಗಮಿಸಿದ ಕುಸಾಲ್ ಮೆಂಡಿಸ್.
ಮಜೀಬ್ ಉರ್ ರೆಹಮಾನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದ ಧನಂಜಯ ಡಿಸಿಲ್ವಾ. ಅಫ್ಘಾನಿಸ್ತಾನ್ ತಂಡಕ್ಕೆ 5ನೇ ಯಶಸ್ಸು. 19 ಎಸೆತಗಳಲ್ಲಿ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಧನಂಜಯ ಡಿಸಿಲ್ವಾ. ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ದುಸನ್ ಶಾನಕ ಬ್ಯಾಟಿಂಗ್.
35 ಓವರ್ಗಳಲ್ಲಿ 200 ರನ್ ಕಲೆಹಾಕಿದ ಶ್ರೀಲಂಕಾ. ಕ್ರೀಸ್ನಲ್ಲಿ ಕುಸಾಲ್ ಮೆಂಡಿ (82) ಹಾಗೂ ಧನಂಜಯ ಡಿಸಿಲ್ವಾ (5) ಬ್ಯಾಟಿಂಗ್.
ಅಫ್ಘಾನಿಸ್ತಾನ್ ಪರ 3 ವಿಕೆಟ್ ಕಬಳಿಸಿದ ಗುಲ್ಬದ್ದೀನ್ ನೈಬ್. ಒಂದು ವಿಕೆಟ್ ಪಡೆದ ರಶೀದ್ ಖಾನ್.
ರಶೀದ್ ಖಾನ್ ಎಸೆತದಲ್ಲಿ ನೇರವಾಗಿ ಕ್ಯಾಚ್ ನೀಡಿದ ಚರಿತ್ ಅಸಲಂಕಾ. ಅಫ್ಗಾನಿಸ್ತಾನ್ ತಂಡಕ್ಕೆ 4ನೇ ಯಶಸ್ಸು. 43 ಎಸೆತಗಳಲ್ಲಿ 36 ರನ್ ಬಾರಿಸಿ ನಿರ್ಗಮಿಸಿದ ಚರಿತ್ ಅಸಲಂಕಾ. ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಧನಂಜಯ ಡಿಸಿಲ್ವಾ ಬ್ಯಾಟಿಂಗ್.
ಕರೀಮ್ ಜನತ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಕುಸಾಲ್ ಮೆಂಡಿಸ್. ಶ್ರೀಲಂಕಾ ತಂಡದ ಮೊತ್ತ 178 ರನ್.
ಕ್ರೀಸ್ನಲ್ಲಿ ಕುಸಾಲ್ ಮೆಂಡಿಸ್ ಹಾಗೂ ಚರಿತ್ ಅಸಲಂಕಾ ಬ್ಯಾಟಿಂಗ್.
31 ಓವರ್ಗಳ ಮುಕ್ತಾಯದ ವೇಳೆಗೆ 170 ರನ್ ಕಲೆಹಾಕಿದ ಶ್ರೀಲಂಕಾ ತಂಡ. ಕ್ರೀಸ್ನಲ್ಲಿ ಚರಿತ್ ಅಲಸಂಕಾ (34) ಹಾಗೂ ಕುಸಾಲ್ ಮೆಂಡಿಸ್ (64) ಭರ್ಜರಿ ಬ್ಯಾಟಿಂಗ್. ಮೂರು ವಿಕೆಟ್ ಕಬಳಿಸಿದ ಅಫ್ಘಾನ್ ವೇಗಿ ಗುಲ್ಬದ್ದೀನ್ ನೈಬ್.
ಫಝಲ್ಹಕ್ ಫಾರೂಖಿ ಎಸೆತದಲ್ಲಿ ಕವರ್ ಡ್ರೈವ್ ಫೋರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದ ಕುಸಾಲ್ ಮೆಂಡಿಸ್. 55 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ ಮೆಂಡಿಸ್. ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
ರಶೀದ್ ಖಾನ್ ಎಸೆದ 27ನೇ ಓವರ್ನ ಮೊದಲ ಮೂರು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ಗಳನ್ನು ಬಾರಿಸಿದ ಕುಸಾಲ್ ಮೆಂಡಿಸ್. ಕ್ರೀಸ್ನಲ್ಲಿ ಚರಿತ್ ಅಸಲಂಕಾ (22) ಹಾಗೂ ಕುಸಾಲ್ ಮೆಂಡಿಸ್ (44) ಭರ್ಜರಿ ಬ್ಯಾಟಿಂಗ್. 27ನೇ ಓವರ್ ಮುಕ್ತಾಯದ ವೇಳೆ ಲಂಕಾ ತಂಡದ ಮೊತ್ತ 144.
20ನೇ ಓವರ್ನಲ್ಲಿ ಶತಕ ಪೂರೈಸಿದ ಶ್ರೀಲಂಕಾ ತಂಡ. ಕ್ರೀಸ್ನಲ್ಲಿ ಚರಿತ್ ಅಸಲಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್. ಅಫ್ಘಾನಿಸ್ತಾನ್ ಪರ ಮೂರು ವಿಕೆಟ್ ಕಬಳಿಸಿದ ಗುಲ್ಬದ್ದೀನ್ ನೈಬ್.
3ನೇ ವಿಕೆಟ್ ಕಬಳಿಸಿದ ಗುಲ್ಬದ್ದೀನ್ ನೈಬ್. ಗುಲ್ಬದ್ದೀನ್ ಎಸೆತದಲ್ಲಿ ವಿಕೆಟ್ ಕೀಪರ್ ಗುರ್ಬಾಝ್ಗೆ ಕ್ಯಾಚ್ ನೀಡಿದ ಸದೀರ ಸಮರವಿಕ್ರಮ. ಕೇವಲ 3 ರನ್ಗಳಿಸಿ ವಿಕೆಟ್ ಒಪ್ಪಿಸಿದ ಸದೀರ. ಅಫ್ಘಾನಿಸ್ತಾನ್ ಪರ ಮೂರು ವಿಕೆಟ್ ಕಬಳಿಸಿದ ಗುಲ್ಬದ್ದೀನ್.
ಶ್ರೀಲಂಕಾ ತಂಡದ 2ನೇ ವಿಕೆಟ್ ಕಬಳಿಸಿದ ಗುಲ್ಬದ್ದೀನ್ ನೈಬ್. ಗುಲ್ಬದ್ದೀನ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಪಾತುಮ್ ನಿಸ್ಸಂಕಾ.
40 ಎಸೆತಗಳಲ್ಲಿ 41 ರನ್ ಬಾರಿಸಿ ವಿಕೆಟ್ ಒಪ್ಪಿಸಿದ ಶ್ರೀಲಂಕಾ ತಂಡದ ಆರಂಭಿಕ ಆಟಗಾರ ನಿಸ್ಸಂಕಾ.
ಅಫ್ಘಾನಿಸ್ತಾನ್ ವೇಗಿ ಗುಲ್ಬದ್ದೀನ್ ನೈಬ್ ಎಸೆತದಲ್ಲಿ ಮೊಹಮ್ಮದ್ ನಬಿಗೆ ಕ್ಯಾಚ್ ನೀಡಿ ಹೊರನಡೆದ ದಿಮುತ್ ಕರುಣರತ್ನೆ. 35 ಎಸೆತಗಳಲ್ಲಿ 32 ರನ್ ಬಾರಿಸಿ ನಿರ್ಗಮಿಸಿದ ದಿಮುತ್ ಕರುಣರತ್ನೆ. ಕ್ರೀಸ್ನಲ್ಲಿ ಪಾತುಮ್ ನಿಸ್ಸಂಕಾ ಹಾಗೂ ಕುಸಾಲ್ ಮೆಂಡಿಸ್ ಬ್ಯಾಟಿಂಗ್.
9ನೇ ಓವರ್ ವೇಳೆ ಅರ್ಧಶತಕ ಪೂರೈಸಿದ ಶ್ರೀಲಂಕಾ ತಂಡ. ಲಂಕಾ ಆರಂಭಿಕರಿಂದ ಉತ್ತಮ ಬ್ಯಾಟಿಂಗ್. ಕ್ರೀಸ್ನಲ್ಲಿ ದಿಮುತ್ ಕರುಣರತ್ನೆ (31) ಹಾಗೂ ಪಾತುಮ್ ನಿಸ್ಸಂಕಾ (25) ಬ್ಯಾಟಿಂಗ್. ಮೊದಲ ವಿಕೆಟ್ ಪಡೆಯಲು ಅಫ್ಘಾನಿಸ್ತಾನ್ ಬೌಲರ್ಗಳ ಹರಸಾಹಸ.
2 ಓವರ್ಗಳಲ್ಲಿ 15 ರನ್ ಬಾರಿಸಿದ ಶ್ರೀಲಂಕಾ ಆರಂಭಿಕರು. ಮೂರು ಫೋರ್ಗಳನ್ನು ಬಾರಿಸಿದ ದಿಮುತ್ ಕರುಣರತ್ನೆ. ಲಂಕಾ ತಂಡದ ಉತ್ತಮ ಆರಂಭ. ಕ್ರೀಸ್ನಲ್ಲಿ ದಿಮುತ್ ಕರುಣರತ್ನೆ ಹಾಗೂ ಪಾತುಮ್ ನಿಸ್ಸಂಕಾ ಬ್ಯಾಟಿಂಗ್.
ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್(ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶಾನಕ(ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮಥೀಶ ಪತಿರಾಣ.
ಅಫ್ಘಾನಿಸ್ತಾನ್ (ಪ್ಲೇಯಿಂಗ್ XI): ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಝಲ್ಹಕ್ ಫಾರೂಖಿ.
ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ತಂಡದ ನಾಯಕ ದುಸನ್ ಶಾನಕ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಅಫ್ಗಾನಿಸ್ತಾನ್ ತಂಡವು ಈ ಪಂದ್ಯದಲ್ಲೂ ಮೊದಲು ಫೀಲ್ಡಿಂಗ್ ಮಾಡಲಿದೆ.
A do or die match for the Afghans! They will look to break their losing streak and come good on their promise of quality. On the other hand, the Lankans will look to go about their dominating business and storm into the Super 4s with confidence. #AsiaCup2023 #AFGvSL pic.twitter.com/lwErRuTCL2
— AsianCricketCouncil (@ACCMedia1) September 5, 2023
ಏಷ್ಯಾಕಪ್ನ 6ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ್ vs ಶ್ರೀಲಂಕಾ ಮುಖಾಮುಖಿ. ಉಭಯ ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯ.
Published On - 2:13 pm, Tue, 5 September 23