‘ಇದೇನಾ ಸಭ್ಯತೆ?’; ಟೀಂ ಇಂಡಿಯಾ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ ಲಂಕಾ ಫ್ಯಾನ್ಸ್! ವಿಡಿಯೋ ನೋಡಿ

|

Updated on: Sep 13, 2023 | 1:35 PM

IND vs SL: ಟೀಂ ಇಂಡಿಯಾದೆದುರಿನ ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗದ ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಟೀಂ ಇಂಡಿಯಾದ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಇದೀಗ ಬೆಳೆಕಿಗೆ ಬಂದಿದೆ.

‘ಇದೇನಾ ಸಭ್ಯತೆ?’; ಟೀಂ ಇಂಡಿಯಾ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ ಲಂಕಾ ಫ್ಯಾನ್ಸ್! ವಿಡಿಯೋ ನೋಡಿ
ಫ್ಯಾನ್ಸ್ ಫೈಟ್
Follow us on

ಟೀಂ ಇಂಡಿಯಾದೆದುರಿನ (Team India) ಹೀನಾಯ ಸೋಲನ್ನು ಅರಗಿಸಿಕೊಳ್ಳಲಾಗದ ಶ್ರೀಲಂಕಾ ಕ್ರಿಕೆಟ್ ತಂಡದ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದ ಟೀಂ ಇಂಡಿಯಾದ ಅಭಿಮಾನಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ಇದೀಗ ಬೆಳೆಕಿಗೆ ಬಂದಿದೆ. ಏಷ್ಯಾಕಪ್ (Asia cup 2023) ಸೂಪರ್-4 ಸುತ್ತಿನಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri lanka) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯುತ್ತಿತ್ತು. ಹೀಗಾಗಿ ಈ ಹೈವೋಲ್ಟೇಜ್ ಕದನವನ್ನು ಕಣ್ತುಂಬಿಕೊಳ್ಳಲು ಉಭಯ ದೇಶದ ಅಭಿಮಾನಿಗಳು ಮೈದಾನದಲ್ಲಿ ಹಾಜರಿದ್ದರು. ಈ ವೇಳೆ ಟೀಂ ಇಂಡಿಯಾ ಎದುರು ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಲಂಕಾ ಪಡೆ, ಗೆಲುವಿನ ಸುಳಿವು ನೀಡಿತ್ತು. ಆದರೆ ಲಂಕಾ ತಂಡದ ಬ್ಯಾಟಿಂಗ್ ಆರಂಭವಾದಾಗ ತಂಡದ ಬ್ಯಾಟರ್​ಗಳು ಭಾರತದ ಬೌಲಿಂಗ್ ಮುಂದೆ ಮಂಡಿಯೂರಿದರು. ಹೀಗಾಗಿ ಭಾರತಕ್ಕೆ 41 ರನ್​ಗಳ ಗೆಲುವು ದೊರೆತಿದಲ್ಲದೆ, ತಂಡ ನೇರವಾಗಿ ಫೈನಲ್ ಪ್ರವೇಶಿಸಿತು. ಈ ವೇಳೆ ತನ್ನ ತಂಡದ ಸೋಲನ್ನು ಅಗರಿಸಿಕೊಳ್ಳದ ಲಂಕಾ ಅಭಿಮಾನಿಗಳು ಭಾರತದ ಅಭಿಮಾನಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಕಪಾಳಮೋಕ್ಷ ಮಾಡಿದ ಲಂಕಾ ಅಭಿಮಾನಿ

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶ್ರೀಲಂಕಾದ ಕೆಲವು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಳಿತಿದ್ದ ಭಾರತೀಯ ಅಭಿಮಾನಿಗಳನ್ನು ಥಳಿಸುವುದನ್ನು ಕಾಣಬಹುದಾಗಿದೆ. ಶ್ರೀಲಂಕಾದ ಅಭಿಮಾನಿಯೊಬ್ಬರು ಮೊದಲು ಭಾರತೀಯ ಅಭಿಮಾನಿಯನ್ನು ನಿಂದಿಸಿ ನಂತರ ಕಪಾಳಮೋಕ್ಷ ಮಾಡಿ ಗುದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೊಲಂಬೊದ ಕ್ರೀಡಾಂಗಣದಲ್ಲಿ ಕುಳಿತಿದ್ದ ಇತರ ಅಭಿಮಾನಿಗಳು ಆರೋಪಿ ಯುವಕನನ್ನು ತಡೆಯಲು ಪ್ರಯತ್ನಿಸಿದರಾದರೂ ಆತ ತಂಡ ಸೋತ ಹತಾಶೆಯಲ್ಲಿ ಟೀಂ ಇಂಡಿಯಾ ಅಭಿಮಾನಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಅಲ್ಪ ಮೊತ್ತಕ್ಕೆ ಲಂಕಾ ಆಲೌಟ್

ಇನ್ನು ಪಂದ್ಯದ ಬಗ್ಗೆ ಹೇಳಬೇಕೆಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಅವರ ಅರ್ಧಶತಕ ನೆರವಿನಿಂದ 213 ರನ್ ಕೆಲಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೇವಲ 172 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಮೊದಲ ತಂಡವಾಗಿ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ.

ಭಾರತದ ಕೃಪಾಕಟಾಕ್ಷ ದೊರೆತರಷ್ಟೇ ಪಾಕ್ ತಂಡಕ್ಕೆ ಏಷ್ಯಾಕಪ್ ಫೈನಲ್ ಟಿಕೆಟ್..!

ಫೈನಲ್​ಗೆ ಭಾರತ

ಇದಕ್ಕೂ ಮುನ್ನ ಸೂಪರ್-4 ಸುತ್ತಿನಲ್ಲಿ ಪಾಕಿಸ್ತಾನವನ್ನು 228 ರನ್‌ಗಳಿಂದ ಸೋಲಿಸಿದ್ದ ಟೀಂ ಇಂಡಿಯಾ 2 ಅಂಕ ಪಡೆದಿದಲ್ಲದೆ ನೆಟ್​ ರನ್​ರೇಟ್​ ಅನ್ನು ಸಹ ಹೆಚ್ಚಿಸಿಕೊಂಡಿತ್ತು. ಇದಾದ ಬಳಿಕ ಶ್ರೀಲಂಕಾವನ್ನು ಸೋಲಿಸಿರುವ ಭಾರತದ ಸುಲಭವಾಗಿ ಫೈನಲ್ ತಲುಪಿತ್ತು. ಇದೀಗ ಟೀಂ ಇಂಡಿಯಾಗೆ ಇನ್ನೂ ಒಂದು ಲೀಗ್ ಪಂದ್ಯ ಬಾಕಿಯಿದ್ದು ಶುಕ್ರವಾರ ಬಾಂಗ್ಲಾದೇಶವನ್ನು ಎದುರಿಸಬೇಕಿದೆ. ಆ ಬಳಿಕ ಭಾನುವಾರದಂದು ಫೈನಲ್ ಪಂದ್ಯ ನಡೆಯಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:33 pm, Wed, 13 September 23