ಅರ್ಧದಷ್ಟು ತಂಡವನ್ನು ಪೆವಿಲಿಯನ್​ಗಟ್ಟಿದ ಈ ಆಟಗಾರನೇ ಟೀಂ ಇಂಡಿಯಾಕ್ಕೆ ಅಪಾಯ..!

|

Updated on: Sep 17, 2023 | 9:39 AM

Asia Cup 2023 Final: ಸೆಪ್ಟೆಂಬರ್ 12 ರಂದು ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಸಹಜವಾಗಿಯೇ ಈ ಪಂದ್ಯವನ್ನು ಟೀಂ ಇಂಡಿಯಾ 41 ರನ್‌ಗಳಿಂದ ಗೆದ್ದುಕೊಂಡರೂ, ಲಂಕಾ ತಂಡದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲಾಲೆಗೆ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗಿ ಪರಿಣಮಿಸಿದ್ದರು. ಈ ಎಡಗೈ ಸ್ಪಿನ್ನರ್ ಭಾರತದ ವಿರುದ್ಧ 40 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದರು.

ಅರ್ಧದಷ್ಟು ತಂಡವನ್ನು ಪೆವಿಲಿಯನ್​ಗಟ್ಟಿದ ಈ ಆಟಗಾರನೇ ಟೀಂ ಇಂಡಿಯಾಕ್ಕೆ ಅಪಾಯ..!
ದುನಿತ್ ವೆಲ್ಲಲಾಗೆ
Follow us on

ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ ಭಾನುವಾರ ಅಂದರೆ, ಇಂದು ಏಷ್ಯಾಕಪ್‌ನ ಫೈನಲ್ (Asia Cup 2023 Final) ಪಂದ್ಯವನ್ನು ಆಡಲಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟೀಂ ಇಂಡಿಯಾ,  ಹಾಲಿ ಚಾಂಪಿಯನ್ ಶ್ರೀಲಂಕಾ (India vs Sri lanka) ತಂಡವನ್ನು ಎದುರಿಸಲಿದೆ. ಭಾರತವು ಶ್ರೀಲಂಕಾಕ್ಕಿಂತ ಹೆಚ್ಚು ಬಲಿಷ್ಠ ತಂಡವೆಂದು ಪರಿಗಣಿಸಲ್ಪಟ್ಟಿದ್ದರೂ, ಆತಿಥೇಯ ತಂಡದ ಒಬ್ಬ ಆಟಗಾರ ಮಾತ್ರ ಟೀಂ ಇಂಡಿಯಾದ (Team India) ಟೆನ್ಶನ್ ಹೆಚ್ಚಿಸಿದ್ದಾನೆ. ಈ ಹಿಂದೆ ಸೂಪರ್-4 ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದ್ದವು. ಆ ಪಂದ್ಯದಲ್ಲಿ ಭಾರತ ತಂಡದ ಅರ್ಧದಷ್ಟು ಮಂದಿಯನ್ನು ಆ ಆಟಗಾರ ಪೆವಿಲಿಯನ್‌ನಲ್ಲಿ ಕೂರುವಂತೆ ಮಾಡಿದ್ದರು. ಹೀಗಿರುವಾಗ ಈ ಆಟಗಾರನನ್ನು ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೇಗೆ ಎದುರಿಸುತ್ತದೆ? ಅಥವಾ ಈ ಆಟಗಾರ ಮತ್ತೊಮ್ಮೆ ಟೀಂ ಇಂಡಿಯಾಗೆ ಟೆನ್ಶನ್ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ವಾಸ್ತವವಾಗಿ ಸೆಪ್ಟೆಂಬರ್ 12 ರಂದು ನಡೆದ ಸೂಪರ್-4 ಸುತ್ತಿನ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಿದ್ದವು. ಸಹಜವಾಗಿಯೇ ಈ ಪಂದ್ಯವನ್ನು ಟೀಂ ಇಂಡಿಯಾ 41 ರನ್‌ಗಳಿಂದ ಗೆದ್ದುಕೊಂಡರೂ, ಲಂಕಾ ತಂಡದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾಗಿ ಪರಿಣಮಿಸಿದ್ದರು. ಈ ಎಡಗೈ ಸ್ಪಿನ್ನರ್ ಭಾರತದ ವಿರುದ್ಧ 40 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದರು.

IND vs SL Asia Cup 2023 final: ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ನಡೆಯದಿದ್ದರೆ ಯಾವ ತಂಡಕ್ಕೆ ಸಿಗಲಿದೆ ಚಾಂಪಿಯನ್ ಪಟ್ಟ?

ಸ್ಟಾರ್ ಆಟಗಾರರನ್ನೇ ಬೇಟೆಯಾಡಿದ್ದ ದುನಿತ್

ಆ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರರನ್ನೇ ಬಲಿಪಶುಗಳನ್ನಾಗಿ ಮಾಡಿಕೊಂಡಿದ್ದರು ವೆಲಾಲಗೆ. ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶುಭ್​ಮನ್ ಗಿಲ್​ರಂತಹ ಆಟಗಾರರಿಗೆ ದುನಿತ್ ಪೆವಿಲಿಯನ್ ಹಾದಿ ತೋರಿಸಿದ್ದರು. ಗಿಲ್ ಮತ್ತು ರೋಹಿತ್ ಅವರನ್ನು ದುನಿತ್ ಬೌಲ್ ಮಾಡಿದ ರೀತಿಯನ್ನು ನೋಡಿದರೆ ಸಾಕು ಅವರು ಎಂತಹ ಬೌಲರ್‌ ಎಂಬುದನ್ನು ತೋರಿಸುತ್ತದೆ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದಲ್ಲಿ ತಲಾ ಶತಕ ಸಿಡಿಸಿ ಮಿಂಚಿದ್ದ ವಿರಾಟ್ ಮತ್ತು ರಾಹುಲ್ ಅವರನ್ನು ದುನಿತ್ ಸುಲಭವಾಗಿ ಕೆಡ್ಡಾಕ್ಕೆ ಕೆಡುವಿದ್ದರು.

ಆದರೆ ಟೀಂ ಇಂಡಿಯಾಕ್ಕೆ ಕೊಂಚ ಸಮಾಧಾನಕರ ಸುದ್ದಿಯಿಂದರೆ ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ಈ ಸ್ಪಿನ್ನರ್ ಕೇವಲ ಒಂದು ವಿಕೆಟ್ ಪಡೆದಿದ್ದರು. ಆದರೆ ಆ ವಿಕೆಟ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅವರದ್ದಾಗಿತ್ತು.

ಟೀಂ ಇಂಡಿಯಾ ಹೇಗೆ ಸಿದ್ಧವಾಗಿದೆ?

ಕೊಹ್ಲಿ ಸಾಮಾನ್ಯವಾಗಿ ಎಡಗೈ ಸ್ಪಿನ್ನರ್‌ಗಳ ಎದುರು ತೊಂದರೆಗೀಡಾಗುವುದನ್ನು ನಾವು ಈ ಹಿಂದೆ ಸಾಕಷ್ಟು ಬಾರಿ ನೋಡಿದ್ದೇವೆ. ಫೈನಲ್‌ನಲ್ಲಿ ಭಾರತಕ್ಕೆ ವಿಕೆಟ್‌ನಲ್ಲಿ ಕೊಹ್ಲಿ ಉಪಸ್ಥಿತಿಯು ಮುಖ್ಯವಾಗಿದೆ. ಹೀಗಿರುವಾಗ ಈ ಮಹತ್ವದ ಪಂದ್ಯದಲ್ಲಿ ವೆಲ್ಲಲಾಗೆ ವಿಕೆಟ್ ನೀಡದಿರಲು ಕೊಹ್ಲಿ ಬಯಸಿದ್ದಾರೆ. ಕಳೆದ ಪಂದ್ಯದ ಕಹಿ ನೆನಪುಗಳು ಟೀಂ ಇಂಡಿಯಾದ ಮನದಲ್ಲಿ ಖಂಡಿತಾ ತಾಜಾ ಆಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ದುನಿತ್ ಅವರನ್ನು ಎದುರಿಸಲು ಸಂಪೂರ್ಣ ತಯಾರಿಯೊಂದಿಗೆ ಬರಲಿದೆ.

ಆದರೆ, ಶನಿವಾರ ಟೀಂ ಇಂಡಿಯಾ ಅಭ್ಯಾಸ ನಡೆಸಲಿಲ್ಲ. ಹೀಗಿರುವಾಗ ಮತ್ತೊಮ್ಮೆ ಫೈನಲ್ ಪಂದ್ಯ ಭಾರತಕ್ಕೆ ತಲೆನೋವಾಗಿ ಪರಿಣಮಿಸುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆರ್. ಪ್ರೇಮದಾಸ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಈ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲಕರವಾಗಿರುವುದು ರೋಹಿತ್ ಪಡೆಯನ್ನು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ