IND vs PAK: ಭಾರತದ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಘೋಷಿಸಿದ ಪಾಕಿಸ್ತಾನ್

| Updated By: ಝಾಹಿರ್ ಯೂಸುಫ್

Updated on: Sep 09, 2023 | 9:20 PM

India vs Pakistan: ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಪಾಕ್ ವೇಗಿಗಳು ಸೇರಿ ಆಲೌಟ್ ಮಾಡಿದ್ದರು. ಅಂದರೆ ಶಾಹೀನ್ ಅಫ್ರಿದಿ (4 ವಿಕೆಟ್), ನಸೀಮ್ ಶಾ (3 ವಿಕೆಟ್) ಹಾಗೂ ಹ್ಯಾರಿಸ್ ರೌಫ್ (3 ವಿಕೆಟ್) ಜೊತೆಗೂಡಿ 10 ವಿಕೆಟ್ ಉರುಳಿಸಿದ್ದರು. ಇದೇ ಕಾರಣದಿಂದಾಗಿ ಇದೀಗ ಪಾಕ್ ತಂಡವು ನಾಲ್ವರು ವೇಗದ ಬೌಲರ್​ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.

IND vs PAK: ಭಾರತದ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಘೋಷಿಸಿದ ಪಾಕಿಸ್ತಾನ್
Pakistan
Follow us on

ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ಭಾನುವಾರ ನಡೆಯಲಿರುವ ಈ ಪಂದ್ಯಕ್ಕಾಗಿ ಪಾಕಿಸ್ತಾನ್ ತಂಡವು ಪ್ಲೇಯಿಂಗ್ ಇಲೆವೆನ್​ ಅನ್ನು ಘೋಷಿಸಿದೆ. ಆದರೆ ಈ ಬಾರಿ ಆಡುವ ಬಳಗದಲ್ಲಿ ಒಂದು ಬದಲಾವಣೆ ಮಾಡಿಕೊಂಡಿರುವುದು ವಿಶೇಷ. ಅಂದರೆ ಮೊದಲ ಸುತ್ತಿನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಮೊಹಮ್ಮದ್ ನವಾಝ್ ಅವರನ್ನು ಈ ಬಾರಿ ಕೈ ಬಿಡಲಾಗಿದೆ.

ನವಾಝ್ ಬದಲಿಗೆ ವೇಗದ ಬೌಲರ್ ಆಲ್​ರೌಂಡರ್ ಫಯೀಮ್ ಅಶ್ರಫ್​ಗೆ ಸ್ಥಾನ ನೀಡಲಾಗಿದೆ. ಈ ಒಂದು ಬದಲಾವಣೆಯನ್ನು ಹೊರತುಪಡಿಸಿದರೆ ಈ ಹಿಂದೆ ಕಣಕ್ಕಿಳಿದಿದ್ದ ಆಟಗಾರರನ್ನೇ ಭಾನುವಾರದ ಪಂದ್ಯಕ್ಕೂ ಮುಂದುವರೆಸಲಾಗಿದೆ.

ಆಡುವ ಬಳಗದಲ್ಲಿ ನಾಲ್ವರು ವೇಗಿಗಳು..!

ಟೀಮ್ ಇಂಡಿಯಾ ವಿರುದ್ಧದ ಈ ಪಂದ್ಯದಲ್ಲಿ ಪಾಕಿಸ್ತಾನ್ ಪರ ನಾಲ್ವರು ವೇಗಿಗಳು ಕಣಕ್ಕಿಳಿಯಲಿದ್ದಾರೆ. ಇಲ್ಲಿ ತಂಡದ ಪ್ರಮುಖ ವೇಗಿಯಾಗಿ ಶಾಹೀನ್ ಅಫ್ರಿದಿ ಕಾಣಿಸಿಕೊಳ್ಳಲಿದ್ದು, ಇವರೊಂದಿಗೆ ಯುವ ವೇಗಿ ನಸೀಮ್ ಶಾ ಹಾಗೂ ವೇಗದ ಅಸ್ತ್ರ ಹ್ಯಾರಿಸ್ ರೌಫ್ ಚೆಂಡೆಸಲಿದ್ದಾರೆ.

ಇನ್ನು ನಾಲ್ಕನೇ ವೇಗಿಯಾಗಿ ಫಯೀಮ್ ಅಶ್ರಫ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಸ್ಪಿನ್ನರ್​ಗಳಾಗಿ ಶಾದಾಬ್ ಖಾನ್ ಹಾಗೂ ಇಫ್ತಿಕರ್ ಅಹ್ಮದ್ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಭಾರತದ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ಪಾಕ್ ವೇಗಿಗಳು ಸೇರಿ ಆಲೌಟ್ ಮಾಡಿರುವುದು. ಅಂದರೆ ಶಾಹೀನ್ ಅಫ್ರಿದಿ (4 ವಿಕೆಟ್), ನಸೀಮ್ ಶಾ (3 ವಿಕೆಟ್) ಹಾಗೂ ಹ್ಯಾರಿಸ್ ರೌಫ್ (3 ವಿಕೆಟ್) ಜೊತೆಗೂಡಿ 10 ವಿಕೆಟ್ ಉರುಳಿಸಿದ್ದರು. ಇದೇ ಕಾರಣದಿಂದಾಗಿ ಇದೀಗ ಪಾಕ್ ತಂಡವು ನಾಲ್ವರು ವೇಗದ ಬೌಲರ್​ಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.

  1. ಬಾಬರ್ ಆಝಂ (ನಾಯಕ)
  2. ಶಾದಾಬ್ ಖಾನ್ (ಉಪನಾಯಕ)
  3. ಫಖರ್ ಝಮಾನ್
  4. ಇಮಾಮ್ ಉಲ್ ಹಕ್
  5. ಸಲ್ಮಾನ್ ಅಲಿ ಆಘಾ
  6. ಇಫ್ತಿಕರ್ ಅಹ್ಮದ್
  7. ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್)
  8. ಫಯೀಮ್ ಅಶ್ರಫ್
  9. ನಸೀಮ್ ಶಾ
  10. ಶಾಹೀನ್ ಅಫ್ರಿದಿ
  11. ಹ್ಯಾರಿಸ್ ರೌಫ್.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್ ವಿಶ್ವ ದಾಖಲೆ ಮುರಿದ ಡೇವಿಡ್ ವಾರ್ನರ್

ಪಾಕಿಸ್ತಾನ್ ತಂಡ: ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).