Asia Cup 2025: ಏಷ್ಯಾಕಪ್​ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ, ಎಲ್ಲಿ?

IND vs Oman live Streaming: ಭಾರತ ಮತ್ತು ಓಮನ್ ನಡುವಿನ ಈ ಪಂದ್ಯವು ಸೆಪ್ಟೆಂಬರ್ 19 ರಂದು ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ ಸಂಜೆ 7:30 ಕ್ಕೆ ಟಾಸ್ ನಡೆಯಲಿದೆ. ಈ ಪಂದ್ಯವು ಅಬುದಾಬಿಯ ಶೇಖ್ ಝಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

Asia Cup 2025: ಏಷ್ಯಾಕಪ್​ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ, ಎಲ್ಲಿ?
Oman Vs India
Updated By: Vinay Bhat

Updated on: Sep 16, 2025 | 9:41 AM

ಬೆಂಗಳೂರು (ಸೆ. 16): 2025 ರ ಏಷ್ಯಾಕಪ್‌ನಲ್ಲಿ ಭಾರತ ತಂಡ (Indian Cricket Team) ಅಮೋಘ ಪ್ರದರ್ಶನ ನೀಡಿ ಅಗ್ರಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ತನ್ನ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸೂಪರ್ -4 ರಲ್ಲಿ ಸ್ಥಾನ ಪಡೆದುಕೊಂಡಿದೆ. ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು 9 ವಿಕೆಟ್‌ಗಳಿಂದ ಸೋಲಿಸಿತು. ಬಳಿಕ ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಇದೀಗ ಗುಂಪು ಹಂತದ ಕೊನೆಯ ಪಂದ್ಯಕ್ಕೆ ಸೂರ್ಯಕುಮಾರ್ ಪಡೆ ಸಜ್ಜಾಗುತ್ತಿದೆ.

ಪಂದ್ಯ ಯಾವಾಗ ಮತ್ತು ಯಾವ ಸಮಯದಲ್ಲಿ?

ಭಾರತ ತನ್ನ ಮುಂದಿನ ಪಂದ್ಯವನ್ನು ಓಮನ್ ವಿರುದ್ಧ ಆಡಲಿದೆ. ಟೀಮ್ ಇಂಡಿಯಾದ ದೀರ್ಘ ವಿರಾಮದ ಬಳಿಕ ಈ ಪಂದ್ಯವು ಸೆಪ್ಟೆಂಬರ್ 19 ಶುಕ್ರವಾರದಂದು ನಡೆಯಲಿದೆ. ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಆರಂಭವಾಗಲಿದೆ. ಪಂದ್ಯ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಅಂದರೆ ಸಂಜೆ 7:30 ಕ್ಕೆ ಟಾಸ್ ನಡೆಯಲಿದೆ. ಈ ಪಂದ್ಯವು ಅಬುದಾಬಿಯ ಶೇಖ್ ಝಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಅಲ್ಲಿ ಅಪಾರ ಪ್ರೇಕ್ಷಕರು ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ
ಏಷ್ಯಾಕಪ್​ನಲ್ಲಿ ದಿಢೀರ್ ಸೂಪರ್-4 ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ
PAK ಯುಎಇ ವಿರುದ್ಧ ಆಡದಿದ್ದರೆ ಏನಾಗುತ್ತದೆ?: ಯಾವ ತಂಡ ಸೂಪರ್ -4ಗೆ?
ಏಷ್ಯಾಕಪ್ 2025: ಪಾಕ್ ತಂಡಕ್ಕೆ ಸಂಕಷ್ಟ ತಂದ ಯುಎಇ ಗೆಲುವು
ಭಾರತ ಪಾಕಿಸ್ತಾನದ ವಿರುದ್ಧ ಆಡಿದ್ದೇಕೆ? ಕಾರಣ ತಿಳಿಸಿದ ಸಚಿವ ಕಿರಣ್ ರಿಜಿಜು

ಪಂದ್ಯದ ನೇರಪ್ರಸಾರವನ್ನು ನೀವು ಎಲ್ಲಿ ವೀಕ್ಷಿಸಬಹುದು?

ಭಾರತ vs ಓಮನ್ ಪಂದ್ಯವನ್ನು ಭಾರತದಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅಭಿಮಾನಿಗಳು ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಕಾಮೆಂಟರಿಯನ್ನು ಆನಂದಿಸಬಹುದು. ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಅಜಯ್ ಜಡೇಜಾ, ವಿವೇಕ್ ರಜ್ದಾನ್, ಅಭಿಷೇಕ್ ನಾಯರ್, ಸಬಾ ಕರೀಮ್, ಗೌರವ್ ಕಪೂರ್, ಆತಿಶ್ ತುಕ್ರಾಲ್ ಮತ್ತು ಸಮೀರ್ ಕೊಚಾರ್ ಹಿಂದಿ ಕಾಮೆಂಟರಿ ಪ್ಯಾನೆಲ್‌ನ ಭಾಗವಾಗಿದ್ದಾರೆ.

Asia Cup Seuper-4: ಏಷ್ಯಾಕಪ್​ನಲ್ಲಿ ದಿಢೀರ್ ಸೂಪರ್-4 ಗೆ ಅರ್ಹತೆ ಪಡೆದ ಟೀಮ್ ಇಂಡಿಯಾ

ಆನ್‌ಲೈನ್ ಲೈವ್ ಸ್ಟ್ರೀಮಿಂಗ್

ಕ್ರಿಕೆಟ್ ಅಭಿಮಾನಿಗಳು ಸೋನಿ ಲಿವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಆನಂದಿಸಬಹುದು.

ಎರಡೂ ತಂಡಗಳು:

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ಮನ್ ಗಿಲ್ (ಉಪನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಹರ್ಷಿತ್ ಸಿಂಗ್, ಜರುನ್.

ಮೀಸಲು ಆಟಗಾರರು: ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಯಾನ್ ಪರಾಗ್, ಧ್ರುವ್ ಜುರೆಲ್ ಮತ್ತು ಯಶಸ್ವಿ ಜೈಸ್ವಾಲ್.

ಓಮನ್ ತಂಡ: ಜತೀಂದರ್ ಸಿಂಗ್ (ನಾಯಕ), ಹಮ್ಮದ್ ಮಿರ್ಜಾ, ವಿನಾಯಕ್ ಶುಕ್ಲಾ, ಸುಫ್ಯಾನ್ ಯೂಸುಫ್, ಆಶಿಶ್ ಒಡೆಡೆರಾ, ಅಮೀರ್ ಕಲೀಮ್, ಮೊಹಮ್ಮದ್ ನದೀಮ್, ಸುಫ್ಯಾನ್ ಮೆಹಮೂದ್, ಆರ್ಯನ್ ಬಿಶ್ತ್, ಕರಣ್ ಸೋನಾವಾಲೆ, ಜಿಕ್ರಿಯಾ ಇಸ್ಲಾಂ, ಹಸ್ನೇನ್ ಅಲಿ, ಶಾಹಮ್ಮದ್, ಮೊಹಮ್ಮದ್, ಶಾಕೆ ಅಹ್ಮದ್, ಸಮಯ್ ಶ್ರೀವಾಸ್ತವ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 am, Tue, 16 September 25