AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಂ ಇಂಡಿಯಾ ಜೆರ್ಸಿಗೆ ಹೊಸ ಸ್ಪಾನ್ಸರ್‌, ಯಾವ ಕಂಪನಿ? ಪ್ರತಿ ಪಂದ್ಯಕ್ಕೆ ಎಷ್ಟು ಹಣ ಗೊತ್ತಾ?

ಇತ್ತೀಚಿಗೆ ಕೇಂದ್ರ ಸರ್ಕಾರ ಆನ್‌ಲೈನ್‌ ಗೇಮಿಗ್ ಆಪ್‌ ನಿಷೇಧಿಸಿದ್ದು, ಇದರ ನೇರ ಪರಿಣಾಮ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕರ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ ಹೊಂದಿದ್ದ ಆನ್‌ಲೈನ್‌ ಗೇಮಿಂಗ್‌ ಕಂಪನಿ ಡ್ರೀಮ್‌ ಇಲೆವೆನ್‌ ಹಾಗೂ ಬಿಸಿಸಿಐ ನಡುವಿನ ಒಪ್ಪಂದ ಕಡಿತವಾಗಿದೆ. ಇದರ ಪರಿಣಾಮ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಯಾವುದೇ ಪ್ರಾಯೋಜಕರು ಇಲ್ಲದೆ ಆಡುತ್ತಿರುವಾಗಲೇ ಇದೀಗ ಹೊಸ ಸ್ಪಾನ್ಸರ್ ಸಿಕ್ಕಿದ್ದಾರೆ. ಹಾಗಾದ್ರೆ, ಟೀಂ ಇಂಡಿಯಾ ಜರ್ಸಿಯ ಪ್ರಯೋಜಕತ್ವ ಪಡೆದ ಕಂಪನಿ ಯಾವುದು? ಪ್ರತಿ ಮ್ಯಾಚ್​ ಗೆ ಎಷ್ಟು ಹಣ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಟೀಂ ಇಂಡಿಯಾ ಜೆರ್ಸಿಗೆ ಹೊಸ ಸ್ಪಾನ್ಸರ್‌, ಯಾವ ಕಂಪನಿ? ಪ್ರತಿ ಪಂದ್ಯಕ್ಕೆ ಎಷ್ಟು ಹಣ ಗೊತ್ತಾ?
Team India
ರಮೇಶ್ ಬಿ. ಜವಳಗೇರಾ
|

Updated on:Sep 16, 2025 | 8:05 PM

Share

ಕೇಂದ್ರ ಸರ್ಕಾರ ಆನ್ ಲೈನ್ ಗೇಮ್ ನಿಷೇಧ ಬೆನ್ನಲ್ಲೇ ಡ್ರೀಮ್‌ 11 ಹಾಗೂ ಬಿಸಿಸಿಐ ನಡುವಿನ ಒಪ್ಪಂದ ಕಡಿತವಾಗಿದ್ದು, ಇದೀಗ ಟೀಂ ಇಂಡಿಯಾದ (Indian cricket team) ಹೊಸ ಜೆರ್ಸಿ ಸ್ಪಾನ್ಸರ್‌ (new jersey sponsor )ಸಿಕ್ಕಿದ್ದಾರೆ. ಹೌದು… ಡ್ರೀಮ್11 ಸ್ಥಾನವನ್ನು ಪ್ರಮುಖ ಟೈರ್‌ ಉತ್ಪಾದಕ ಕಂಪನಿ ಅಪೊಲೊ ಟೈಯರ್ಸ್ (Apollo Tyres) ತನ್ನದಾಗಿಸಿಕೊಂಡಿದೆ. ರಿಯಲ್ ಮನಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದರಿಂದ ಡ್ರೀಮ್ 11 ಅನಿವಾರ್ಯವಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕೆ ಬಿಸಿಸಿಐ ಬಿಡ್‌ ಕರೆದಿತ್ತು. ಈ ಬಿಡ್‌ ವೇಳೆ ಹಲವು ಕಂಪನಿಗಳು ಆಸಕ್ತಿಯನ್ನು ಹೊಂದಿದ್ದವು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)  ಅಪೋಲೋ ಟೈರ್ಸ್ ಕಂಪನಿಯನ್ನು ಆಯ್ಕೆ ಮಾಡಿಕೊಂಡಿದೆ. ಈ ಒಪ್ಪಂದ 2027ರವರೆಗೆ ಮುಂದುವರಿಯುವ ದಾಖಲೆಯ ಒಪ್ಪಂದವಾಗಿದ್ದು, ಪ್ರತಿ ಪಂದ್ಯಕ್ಕೆ 4.5 ಕೋಟಿ ರೂಪಾಯಿಗಳಿಗೆ ಒಪ್ಪಂದವಾಗಿದೆ.

ಪ್ರಾಯೋಜಕತ್ವದ ಸ್ಪರ್ಧೆಯಲ್ಲಿ ಕ್ಯಾನ್ವಾ ಮತ್ತು ಜೆಕೆ ಟೈಯರ್ ಕಂಪನಿಗಳೂ ಇದ್ದವು. ಆದರೆ ಅಂತಿಮವಾಗಿ ಅಪೊಲೊ ಟೈಯರ್ಸ್ ಸ್ಪಾನ್ಸರ್‌ ಹಕ್ಕುಗಳನ್ನು ಗೆದ್ದುಕೊಂಡಿದೆ. ಬಿರ್ಲಾ ಓಪಸ್ ಪೇಂಟ್ಸ್ ಕೂಡ ಆಸಕ್ತಿ ತೋರಿಸಿತ್ತಾದರೂ, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಕಂಪನಿ ಭಾಗವಹಿಸಿರಲಿಲ್ಲ. ಇದರಿಂದ ಅಂತಿಮವಾಗಿ ಡ್ರೀಮ್11 ಸ್ಥಾನವನ್ನು ಪ್ರಮುಖ ಟೈರ್‌ ಉತ್ಪಾದಕ ಕಂಪನಿ ಅಪೊಲೊ ಟೈಯರ್ಸ್ ತನ್ನದಾಗಿಸಿಕೊಂಡಿದ್ದು, ಪ್ರತಿ ಪಂದ್ಯಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಬರೋಬ್ಬರಿ ಸುಮಾರು 4.5 ಕೋಟಿ ರೂ. ಪಾವತಿಸಲಿದೆ.

ಇದನ್ನೂ ಓದಿ: Asia Cup 2025: ಏಷ್ಯಾಕಪ್​ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ, ಎಲ್ಲಿ?

ಇದು ಡ್ರೀಮ್ 11 ನೀಡುತ್ತಿದ್ದ 4 ಕೋಟಿ ರೂ.ಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. 2027ರಲ್ಲಿ ಈ ಒಪ್ಪಂದ ಇರಲಿದ್ದು, ಅಲ್ಲಿಯವರೆಗೆ ಒಟ್ಟಾರೆಯಾಗಿ ಬಿಸಿಸಿಐಗೆ ಸುಮಾರು 600 ಕೋಟಿ ರೂ. ಜೆರ್ಸಿ ಪ್ರಾಯೋಜಕತ್ವದಿಂದಲೇ ಹರಿದು ಬರಲಿದೆ. ಇದರಿಂದ ಬಿಸಿಸಿ ಜಾಕ್ ಪಾಟ್ ಹೊಡೆದಿದೆ.

ಕೇಂದ್ರ ಸರ್ಕಾರವು ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ 2025 ಜಾರಿಗೆ ತಂದಿರುವುದರಿಂದ 2025 ರ ಏಷ್ಯಾ ಕಪ್‌ಗೆ ಮುನ್ನ Dream11 ಮತ್ತು BCCI ಒಪ್ಪಂದವನ್ನು ಮಧ್ಯದಲ್ಲಿಯೇ ಕಡಿತವಾಗಿಯಿತು. ಇದರ ನಂತರ, BCCI ಹೊಸ ಟೆಂಡರ್‌ಗಳನ್ನು ಆಹ್ವಾನಿಸಿತು. ಭಾರತೀಯ ಕ್ರಿಕೆಟ್ ಜೆರ್ಸಿ ಒಪ್ಪಂದವು BCCIಗೆ ಹೆಚ್ಚು ಆದಾಯವನ್ನು ತಂದುಕೊಡುತ್ತದೆ. ಹಾಗೇ ಅಪೋಲೋ ಟಯರ್ಸ್‌ ಗ್ರಾಹಕರನ್ನು ಆಕರ್ಷಿಸಲು ಈ ಒಪ್ಪಂದ ಸಹಾಯಕವಾಗಿದೆ.

Published On - 8:02 pm, Tue, 16 September 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!