Asia Cup 2025: ಭಾರತ-ಪಾಕಿಸ್ತಾನ ಹ್ಯಾಂಡ್‌ಶೇಕ್ ವಿವಾದದಲ್ಲಿ ಹೊಸ ತಿರುವು: ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್‌ಗೆ ವಿಶ್ರಾಂತಿ
India-Pakistan handshake controversy: 2025 ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತನ್ನ ಮುಂದಿನ ಪಂದ್ಯವನ್ನು UAE ವಿರುದ್ಧ ಆಡಬೇಕಾಗಿದೆ. ಈ ಪಂದ್ಯದಲ್ಲಿ ಆಂಡಿ ಪೈಕ್ರಾಫ್ಟ್ ರೆಫರಿಯ ಪಾತ್ರವನ್ನು ನಿರ್ವಹಿಸಬೇಕಾಗಿತ್ತು ಆದರೆ ಅವರಿಗೆ 'ವಿಶ್ರಾಂತಿ' ನೀಡಬಹುದು. ಪಾಕಿಸ್ತಾನವು ಯಾವುದೇ ಬೆಲೆ ತೆತ್ತಾದರೂ ಇಂದಿನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿದೆ.

ಬೆಂಗಳೂರು (ಸೆ. 17): 2025 ರ ಏಷ್ಯಾಕಪ್‌ನ ಆರನೇ ಪಂದ್ಯದಲ್ಲಿ ಕಳೆದ ಭಾನುವಾರ ಭಾರತ ತಂಡ (Indian Cricket Team) ಪಾಕಿಸ್ತಾನವನ್ನು ಎದುರಿಸಿತು. ಆ ಪಂದ್ಯದಲ್ಲಿ, ಭಾರತೀಯ ತಂಡದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ. ಪಂದ್ಯ ಪ್ರಾರಂಭವಾಗುವ ಮೊದಲು ಟಾಸ್ ಸಮಯದಲ್ಲಿ ಎರಡೂ ತಂಡಗಳ ನಾಯಕರ ನಡುವೆ ಯಾವುದೇ ಹಸ್ತಲಾಘವ ಇರಲಿಲ್ಲ. ಪಂದ್ಯ ಮುಗಿದ ಬಳಿಕವೂ ಇದು ನಡೆಯಲಿಲ್ಲ. ಇದರ ನಂತರ, ಪಿಸಿಬಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾಕಪ್‌ನಿಂದ ತೆಗೆದುಹಾಕಲು ಐಸಿಸಿಯನ್ನು ಸಂಪರ್ಕಿಸಿತು. ಆದರೆ, ಐಸಿಸಿ ಅವರ ಬೇಡಿಕೆಯನ್ನು ತಿರಸ್ಕರಿಸಿದೆ.
ಯುಎಇ-ಪಾಕಿಸ್ತಾನ ಪಂದ್ಯದಲ್ಲಿ ಪೈಕ್ರಾಫ್ಟ್ ಇರುತ್ತಾರೆಯೇ?
ಪಾಕಿಸ್ತಾನದ ಮುಂದಿನ ಪಂದ್ಯಕ್ಕೆ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ ಕೂಡ ರೆಫರಿ. ಪಾಕಿಸ್ತಾನದ ಮುಂದಿನ ಪಂದ್ಯ ಇಂದು ಯುಎಇ ವಿರುದ್ಧ ನಡೆಯಲಿದೆ. ಹೀಗಿರುವಾಗ ಈ ಪಂದ್ಯದಲ್ಲಿ ಪೈಕ್ರಾಫ್ಟ್ ರೆಫರಿಯ ಪಾತ್ರವನ್ನು ನಿರ್ವಹಿಸುವುದಿಲ್ಲ ಎಂಬ ವರದಿಗಳು ಬರುತ್ತಿವೆ. ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ನಂಬುವುದಾದರೆ, ಅವರಿಗೆ ‘ವಿಶ್ರಾಂತಿ’ ನೀಡಲಾಗಿದೆ. ಪಾಕಿಸ್ತಾನ ಬುಧವಾರ ನಿಗದಿಯಾಗಿದ್ದ ತನ್ನ ಪಂದ್ಯಪೂರ್ವ ಪತ್ರಿಕಾಗೋಷ್ಠಿಯನ್ನು ಸಹ ರದ್ದುಗೊಳಿಸಿದೆ.
ಪಾಕಿಸ್ತಾನ ಈ ಪಂದ್ಯಾವಳಿಯಲ್ಲಿ ಆಡಲಿದೆ ಆದರೆ ಯುಎಇ ವಿರುದ್ಧದ ಪಂದ್ಯದಲ್ಲಿ ಆಂಡಿ ಪೈಕ್ರಾಫ್ಟ್ ರೆಫರಿಯಾಗಿರುವುದಿಲ್ಲ ಎಂದು ಪಿಸಿಬಿ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಉಳಿದ ಪಂದ್ಯಗಳಲ್ಲಿ ಪೈಕ್ರಾಫ್ಟ್ ರೆಫರಿಯಾಗುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪಿಸಿಬಿ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಎಂಸಿಸಿ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಿಸಿಬಿ ಐಸಿಸಿಗೆ ಮ್ಯಾಚ್ ರೆಫರಿಯ ವಿರುದ್ಧ ದೂರು ದಾಖಲಿಸಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಏಷ್ಯಾ ಕಪ್‌ನಿಂದ ಮ್ಯಾಚ್ ರೆಫರಿಯನ್ನು ತಕ್ಷಣ ತೆಗೆದುಹಾಕಬೇಕೆಂದು ಪಿಸಿಬಿ ಒತ್ತಾಯಿಸಿದೆ. ಆದಾಗ್ಯೂ, ನಂತರ ಅವರು ಈ ಪೋಸ್ಟ್ ಅನ್ನು ತೆಗೆದುಹಾಕಿದರು.
Asia Cup 2025: ಏಷ್ಯಾಕಪ್ನಲ್ಲಿ ಭಾರತದ ಮುಂದಿನ ಪಂದ್ಯ ಯಾವಾಗ, ಯಾರ ವಿರುದ್ಧ, ಎಲ್ಲಿ?
ಸೂಪರ್-4 ಹಂತಕ್ಕೆ ತಲುಪಲು ಪಾಕಿಸ್ತಾನ ಇಂದಿನ ಪಂದ್ಯ ಗೆಲ್ಲಬೇಕೇ?
ಮಂಗಳವಾರ ಐಸಿಸಿ ಅಕಾಡೆಮಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಅಭ್ಯಾಸ ನಡೆಸಿದವು. ಎರಡೂ ತಂಡಗಳ ಸಮಯ ವಿಭಿನ್ನವಾಗಿದ್ದರೂ ಸುಮಾರು ಒಂದು ಗಂಟೆ ಒಂದೇ ಸ್ಥಳದಲ್ಲಿತ್ತು. ಭಾರತ ಈಗಾಗಲೇ ಸೂಪರ್ ಫೋರ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಮತ್ತೊಂದೆಡೆ, ಪಾಕಿಸ್ತಾನವು ಯಾವುದೇ ಬೆಲೆ ತೆತ್ತಾದರೂ ತನ್ನ ಕೊನೆಯ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಯುಎಇಯನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಮುಂದಿನ ಭಾನುವಾರ ಮತ್ತೊಮ್ಮೆ ಭಾರತ ತಂಡವನ್ನು ಎದುರಿಸಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




