Asia Cup 2025: ಈ ಎರಡು ಸ್ಥಳಗಳಲ್ಲಿ ನಡೆಯಲಿದೆ ಏಷ್ಯಾಕಪ್ ಪಂದ್ಯಾವಳಿ; ಅಧಿಕೃತ ಘೋಷಣೆ

Asia Cup 2025 Schedule: 2025ರ ಏಷ್ಯಾಕಪ್ ಯುಎಇಯಲ್ಲಿ ಸೆಪ್ಟೆಂಬರ್ 9 ರಿಂದ 28 ರವರೆಗೆ ನಡೆಯಲಿದೆ. 8 ತಂಡಗಳು ಭಾಗವಹಿಸಲಿದ್ದು, ಅಬುಧಾಬಿ ಮತ್ತು ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿರುವುದರಿಂದ, ಈ ಎರಡು ತಂಡಗಳು ಕನಿಷ್ಠ ಮೂರು ಬಾರಿ ಪರಸ್ಪರ ಎದುರಿಸುವ ಸಾಧ್ಯತೆಯಿದೆ. ಪಂದ್ಯಾವಳಿಯ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಬಹಿರಂಗಪಡಿಸಿದೆ.

Asia Cup 2025: ಈ ಎರಡು ಸ್ಥಳಗಳಲ್ಲಿ ನಡೆಯಲಿದೆ ಏಷ್ಯಾಕಪ್ ಪಂದ್ಯಾವಳಿ; ಅಧಿಕೃತ ಘೋಷಣೆ
Asia Cup 2025

Updated on: Aug 02, 2025 | 10:36 PM

2025 ರ ಏಷ್ಯಾಕಪ್ (Asia Cup 2025) ಮುಂಬರುವ ಸೆಪ್ಟೆಂಬರ್ 9 ರಿಂದ 28 ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ನಡೆಯಲಿದೆ. ಒಟ್ಟು 8 ತಂಡಗಳ ನಡುವೆ ನಡೆಯಲಿರುವ ಈ ಪಂದ್ಯಾವಳಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಹಿಂದೆಯೇ ಪ್ರಕಟಿಸಿತ್ತು. ಇದೀಗ ಈ ಪಂದ್ಯಾವಳಿಯಲ್ಲಿ ನಡೆಯಲ್ಲಿರುವ 19 ಪಂದ್ಯಗಳಿಗೆ ಯಾವ ಸ್ಥಳಗಳು ಆತಿಥ್ಯ ನೀಡುತ್ತಿವೆ ಎಂಬುದನ್ನು ಸಹ ಎಸಿಸಿ ಬಹಿರಂಗಡಿಸಿದೆ. ಈ ಪಂದ್ಯಾವಳಿಯ ಎಲ್ಲಾ ಪಂದ್ಯಗಳು ಅಬುಧಾಬಿ ಹಾಗೂ ದುಬೈನಲ್ಲಿ ನಡೆಯಲ್ಲಿವೆ. ಆ ಪ್ರಕಾರ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವೆ ಸೆಪ್ಟೆಂಬರ್ 14 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ವಾಸ್ತವವಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಂದ್ಯಾವಳಿಯಲ್ಲಿ ಒಂದೇ ಗುಂಪಿನಲ್ಲಿದ್ದು, ಸೆಪ್ಟೆಂಬರ್ 21 ರಂದು ನಡೆಯಲಿರುವ ಸೂಪರ್ 4 ಸುತ್ತಿನಲ್ಲೂ ಈ ಎರಡೂ ತಂಡಗಳು ಮತ್ತೆ ಪರಸ್ಪರ ಎದುರಾಗುವ ನಿರೀಕ್ಷೆಯಿದೆ.

ಮೇಲೆ ಹೇಳಿದಂತೆ ಈ ಬಾರಿ ಒಟ್ಟು 8 ತಂಡಗಳು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಅವುಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪಾಕಿಸ್ತಾನವನ್ನು ಹೊರತುಪಡಿಸಿ, ಯುಎಇ ಮತ್ತು ಒಮಾನ್ ತಂಡಗಳು ಟೀಂ ಇಂಡಿಯಾ ಜೊತೆಗೆ ಎ ಗುಂಪಿನಲ್ಲಿ ಸೇರಿವೆ. ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳಿವೆ. ಪ್ರತಿ ತಂಡವು ತನ್ನ ಗುಂಪಿನ ಇತರ ಮೂರು ತಂಡಗಳನ್ನು ಒಮ್ಮೆ ಎದುರಿಸಲಿದೆ. ನಂತರ ಪ್ರತಿ ಗುಂಪಿನಿಂದ 2 ತಂಡಗಳು ಸೂಪರ್-4 ಸುತ್ತಿಗೆ ಹೋಗುತ್ತವೆ, ಅಲ್ಲಿ ಪ್ರತಿ ತಂಡವು ಇತರ 3 ತಂಡಗಳನ್ನು ತಲಾ ಒಮ್ಮೆ ಎದುರಿಸಲಿದೆ. ಇಲ್ಲಿ ಅಗ್ರ 2 ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಭಾರತ-ಪಾಕಿಸ್ತಾನ ಮುಖಾಮುಖಿ

ನಿರೀಕ್ಷೆಯಂತೆ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯಾವಳಿಯಲ್ಲಿ ಎರಡರ ನಡುವೆ ಒಟ್ಟು 3 ಘರ್ಷಣೆಗಳು ನಡೆಯಬಹುದು. ಎರಡೂ ತಂಡಗಳು ಮುಂದಿನ ಸುತ್ತನ್ನು ತಲುಪಿದರೆ, ಸೆಪ್ಟೆಂಬರ್ 21 ರ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ಮತ್ತೆ ಪರಸ್ಪರ ಮುಖಾಮುಖಿಯಾಗಲಿವೆ. ಇಲ್ಲಿಂದಲೂ ಎರಡೂ ತಂಡಗಳು ಫೈನಲ್ ತಲುಪುವಲ್ಲಿ ಯಶಸ್ವಿಯಾದರೆ, ಸೆಪ್ಟೆಂಬರ್ 28 ರಂದು ಟ್ರೋಫಿಗಾಗಿ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಏಷ್ಯಾಕಪ್ 2025 ರ ವೇಳಾಪಟ್ಟಿ

ದಿನಾಂಕ ಮುಖಾಮುಖಿ ಸ್ಥಳ
ಸೆಪ್ಟೆಂಬರ್ 9 ಅಫ್ಘಾನಿಸ್ತಾನ vs ಹಾಂಗ್ ಕಾಂಗ್ ಅಬುಧಾಬಿ
ಸೆಪ್ಟೆಂಬರ್ 10 ಭಾರತ vs ಯುಎಇ ದುಬೈ
ಸೆಪ್ಟೆಂಬರ್ 11 ಬಾಂಗ್ಲಾದೇಶ vs ಹಾಂಗ್ ಕಾಂಗ್ ಅಬುಧಾಬಿ
ಸೆಪ್ಟೆಂಬರ್ 12 ಪಾಕಿಸ್ತಾನ vs ಓಮನ್ ದುಬೈ
ಸೆಪ್ಟೆಂಬರ್ 13 ಬಾಂಗ್ಲಾದೇಶ vs ಶ್ರೀಲಂಕಾ ಅಬುಧಾಬಿ
ಸೆಪ್ಟೆಂಬರ್ 14 ಭಾರತ vs ಪಾಕಿಸ್ತಾನ ದುಬೈ
ಸೆಪ್ಟೆಂಬರ್ 15 ಯುಎಇ vs ಒಮಾನ್ ಅಬುಧಾಬಿ
ಸೆಪ್ಟೆಂಬರ್ 15 ಶ್ರೀಲಂಕಾ vs ಹಾಂಗ್ ಕಾಂಗ್ ದುಬೈ
ಸೆಪ್ಟೆಂಬರ್ 16 ಬಾಂಗ್ಲಾದೇಶ vs ಅಫ್ಘಾನಿಸ್ತಾನ ಅಬುಧಾಬಿ
ಸೆಪ್ಟೆಂಬರ್ 17 ಪಾಕಿಸ್ತಾನ vs ಯುಎಇ ದುಬೈ
ಸೆಪ್ಟೆಂಬರ್ 18 ಶ್ರೀಲಂಕಾ vs ಅಫ್ಘಾನಿಸ್ತಾನ ಅಬುಧಾಬಿ
ಸೆಪ್ಟೆಂಬರ್ 19 ಭಾರತ vs ಓಮನ್ ಅಬುಧಾಬಿ
ಸೆಪ್ಟೆಂಬರ್ 20 ಬಿ1 ವಿರುದ್ಧ ಬಿ2 ದುಬೈ
ಸೆಪ್ಟೆಂಬರ್ 21 ಎ ಗುಂಪಿನ ಮೊದಲ ತಂಡ vs ಎ ಗುಂಪಿನ 2ನೇ ತಂಡ ದುಬೈ
23 ಸೆಪ್ಟೆಂಬರ್ ಎ ಗುಂಪಿನ 2ನೇ ತಂಡ vs ಬಿ ಗುಂಪಿನ ಮೊದಲ ತಂಡ ಅಬುಧಾಬಿ
24 ಸೆಪ್ಟೆಂಬರ್ ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ 2ನೇ ತಂಡ ದುಬೈ
ಸೆಪ್ಟೆಂಬರ್ 25 ಎ ಗುಂಪಿನ 2ನೇ ತಂಡ vs ಬಿ ಗುಂಪಿನ 2ನೇ ತಂಡ ದುಬೈ
ಸೆಪ್ಟೆಂಬರ್ 26 ಎ ಗುಂಪಿನ ಮೊದಲ ತಂಡ vs ಬಿ ಗುಂಪಿನ ಮೊದಲ ತಂಡ ದುಬೈ
ಸೆಪ್ಟೆಂಬರ್ 28 ಅಂತಿಮ ಪಂದ್ಯ ದುಬೈ

Published On - 10:33 pm, Sat, 2 August 25