AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ?

ಏಷ್ಯಾ ಕ್ರಿಕೆಟ್ ಕೌನ್ಸಿಲ್ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿ ವೇಳಾಪಟ್ಟಿ ಪ್ರಕಟಿಸಿದೆ. ಕತಾರ್‌ನಲ್ಲಿ ನವೆಂಬರ್ 19-29ರವರೆಗೆ 50 ಓವರ್ ಮಾದರಿಯಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡದೊಂದಿಗೆ, ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ಹೈವೋಲ್ಟೇಜ್ ಪಂದ್ಯ ನವೆಂಬರ್ 22ರಂದು ನಡೆಯಲಿದೆ. ಎಂಟು ತಂಡಗಳು ಭಾಗವಹಿಸಲಿವೆ.

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ವೇಳಾಪಟ್ಟಿ ಪ್ರಕಟ; ಭಾರತ-ಪಾಕ್ ಪಂದ್ಯ ಯಾವಾಗ?
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026
ಪೃಥ್ವಿಶಂಕರ
|

Updated on: Oct 24, 2026 | 5:41 PM

Share

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇಂದು ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಟೂರ್ನಿಯ ಎರಡನೇ ಆವೃತ್ತಿಗೆ ಕತಾರ್ ಆತಿಥ್ಯ ವಹಿಸಲಿದ್ದು, ನವೆಂಬರ್ 19ರಿಂದ 29ರವರೆಗೆ ದೋಹಾದ ಎರಡು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಕಳೆದ ವರ್ಷ ನಡೆದ ಮೊದಲ ಆವೃತ್ತಿಯಲ್ಲಿ ಪಾಕಿಸ್ತಾನ ಎ ತಂಡ ಚಾಂಪಿಯನ್ ಆಗಿತ್ತು. ಹೀಗಾಗಿ ಈ ಬಾರಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಪಾಕಿಸ್ತಾನ ಎ ತಂಡ ಕಣಕ್ಕಿಳಿಯಲಿದೆ.

ಈ ಬಾರಿಯ ಟೂರ್ನಿಯಲ್ಲಿ ಮಹತ್ವದ ಬದಲಾವಣೆಯೂ ಇದೆ. ಕಳೆದ ಆವೃತ್ತಿಯನ್ನು ಟಿ20 ಮಾದರಿಯಲ್ಲಿ ನಡೆಸಲಾಗಿತ್ತು. ಆದರೆ, ಈ ಬಾರಿ ಪಂದ್ಯಾವಳಿ 50 ಓವರ್‌ಗಳ ಮಾದರಿಯಲ್ಲಿ ನಡೆಯಲಿದೆ. ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಯಾವ ತಂಡ ಯಾವ ಗುಂಪಿನಲ್ಲಿದೆ?

ಗುಂಪು ಎ

  • ಶ್ರೀಲಂಕಾ ಎ
  • ಬಾಂಗ್ಲಾದೇಶ ಎ
  • ಅಫ್ಘಾನಿಸ್ತಾನ ಎ
  • ಹಾಂಗ್ ಕಾಂಗ್

ಗುಂಪು ಬಿ

  • ಭಾರತ ಎ
  • ಪಾಕಿಸ್ತಾನ ಎ
  • ನೇಪಾಳ
  • ಯುಎಇ

ಲೀಗ್ ಹಂತದಲ್ಲಿ ಪ್ರತಿ ತಂಡವು ತನ್ನ ಗುಂಪಿನ ಉಳಿದ ಮೂರು ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ. ಈ ಹಂತದಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. ಎರಡೂ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ.

ಭಾರತ-ಪಾಕ್ ಹೈವೋಲ್ಟೇಜ್ ಕದನ

ಈ ಟೂರ್ನಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪಂದ್ಯ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಮುಖಾಮುಖಿ. ಈ ಹೈವೋಲ್ಟೇಜ್ ಪಂದ್ಯ ನವೆಂಬರ್ 22ರಂದು ಮಧ್ಯಾಹ್ನ 3:30ಕ್ಕೆ ನಡೆಯಲಿದೆ. ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಎರಡೂ ತಂಡಗಳ ನಡುವಿನ ಪೈಪೋಟಿ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ.

ಭಾರತ ಎ ತಂಡ ನವೆಂಬರ್ 20ರಂದು ತನ್ನ ಮೊದಲ ಪಂದ್ಯದಲ್ಲಿ ನೇಪಾಳವನ್ನು ಎದುರಿಸಲಿದೆ. ಬಳಿಕ ನವೆಂಬರ್ 22ರಂದು ಪಾಕಿಸ್ತಾನ ಎ ವಿರುದ್ಧ ಕಣಕ್ಕಿಳಿಯಲಿದ್ದು, ನವೆಂಬರ್ 24ರಂದು ಯುಎಇ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯ ಆಡಲಿದೆ.

2 ಏಷ್ಯಾಕಪ್ ಟ್ರೋಫಿಗಳು ಭಾರತಕ್ಕೆ ಬರುವುದು ಯಾವಾಗ? ಬಿಸಿಸಿಐ ಹೇಳಿದ್ದಿದು

ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026: ಸಂಪೂರ್ಣ ವೇಳಾಪಟ್ಟಿ

  • ನವೆಂಬರ್ 19: ಬಾಂಗ್ಲಾದೇಶ ಎ vs ಹಾಂಗ್ ಕಾಂಗ್: ಬೆಳಗ್ಗೆ 11:30
  • ನವೆಂಬರ್ 19: ಶ್ರೀಲಂಕಾ ಎ vs ಅಫ್ಘಾನಿಸ್ತಾನ ಎ: ಮಧ್ಯಾಹ್ನ 3:30
  • ನವೆಂಬರ್ 20: ಪಾಕಿಸ್ತಾನ ಎ vs ಯುಎಇ: ಬೆಳಗ್ಗೆ 11:30
  • ನವೆಂಬರ್ 20: ಭಾರತ ಎ vs ನೇಪಾಳ: ಮಧ್ಯಾಹ್ನ 3:30
  • ನವೆಂಬರ್ 21: ಶ್ರೀಲಂಕಾ ಎ vs ಹಾಂಗ್ ಕಾಂಗ್: ಬೆಳಗ್ಗೆ 11:30
  • ನವೆಂಬರ್ 21: ಬಾಂಗ್ಲಾದೇಶ ಎ vs ಅಫ್ಘಾನಿಸ್ತಾನ ಎ: ಮಧ್ಯಾಹ್ನ 3:30
  • ನವೆಂಬರ್ 22: ಯುಎಇ vs ನೇಪಾಳ: ಬೆಳಗ್ಗೆ 11:30
  • ನವೆಂಬರ್ 22: ಭಾರತ ಎ vs ಪಾಕಿಸ್ತಾನ ಎ: ಮಧ್ಯಾಹ್ನ 3:30
  • ನವೆಂಬರ್ 23: ಅಫ್ಘಾನಿಸ್ತಾನ ಎ vs ಹಾಂಗ್ ಕಾಂಗ್: ಬೆಳಗ್ಗೆ 11:30
  • ನವೆಂಬರ್ 23: ಶ್ರೀಲಂಕಾ ಎ vs ಬಾಂಗ್ಲಾದೇಶ ಎ: ಮಧ್ಯಾಹ್ನ 3:30
  • ನವೆಂಬರ್ 24: ಭಾರತ ಎ vs ಯುಎಇ: ಬೆಳಗ್ಗೆ 11:30
  • ನವೆಂಬರ್ 24: ಪಾಕಿಸ್ತಾನ ಎ vs ನೇಪಾಳ: ಮಧ್ಯಾಹ್ನ 3:30
  • ನವೆಂಬರ್ 26: ಸೆಮಿಫೈನಲ್ 1 (A1 vs B2): ಮಧ್ಯಾಹ್ನ 3:30
  • ನವೆಂಬರ್ 27: ಸೆಮಿಫೈನಲ್ 2 (B1 vs A2): ಮಧ್ಯಾಹ್ನ 3:30
  • ನವೆಂಬರ್ 29: ಫೈನಲ್ ಪಂದ್ಯ: ಮಧ್ಯಾಹ್ನ 3:30
  • ನವೆಂಬರ್ 29ರಂದು ಫೈನಲ್ ಪಂದ್ಯ

ನವೆಂಬರ್ 29ರಂದು ಫೈನಲ್

ಲೀಗ್ ಹಂತದ ಪಂದ್ಯಗಳು ನವೆಂಬರ್ 24ರಂದು ಮುಕ್ತಾಯಗೊಳ್ಳಲಿವೆ. ಬಳಿಕ ನವೆಂಬರ್ 26ರಂದು ಮೊದಲ ಸೆಮಿಫೈನಲ್ ಹಾಗೂ ನವೆಂಬರ್ 27ರಂದು ಎರಡನೇ ಸೆಮಿಫೈನಲ್ ನಡೆಯಲಿದೆ. ಟೂರ್ನಿಯ ಫೈನಲ್ ಪಂದ್ಯ ನವೆಂಬರ್ 29ರಂದು ದೋಹಾದ ವೆಸ್ಟ್ ಎಂಡ್ ಪಾರ್ಕ್‌ನಲ್ಲಿ ನಡೆಯಲಿದೆ. ಈ ಬಾರಿಯ ಟೂರ್ನಿಯಲ್ಲಿ ಎಲ್ಲರ ಗಮನ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಕದನದ ಮೇಲಿದೆ. ಹಾಲಿ ಚಾಂಪಿಯನ್ ಪಾಕಿಸ್ತಾನ ಎ ತಂಡಕ್ಕೆ ಭಾರತ ಎ ತಂಡ ಯಾವ ರೀತಿಯಲ್ಲಿ ಪೈಪೋಟಿ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಎರಡೂ ತಂಡಗಳ ಯುವ ಆಟಗಾರರು ತಮ್ಮ ಸಾಮರ್ಥ್ಯ ತೋರಿಸಲು ಈ ಟೂರ್ನಿ ಉತ್ತಮ ವೇದಿಕೆಯಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ಭೀಕರ ಬರದಿಂದ ಬತ್ತಿದ ಭತ್ತದ ನಾಡು: ಇಡೀ ರಾಜ್ಯಕ್ಕೆ ಅಕ್ಕಿ ದರ ಏರಿಕೆಯ ಬಿಸಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ರೆಸ್ಯೂಮ್​​ನಲ್ಲಿ ಕನ್ನಡ ಇದ್ರೆ ರಿಜೆಕ್ಟ್​: ಅಳಲು ತೋಡಿಕೊಂಡ ಯುವತಿ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಂಗಾರು ಮಳೆ ಅಬ್ಬರಕ್ಕೆ ಹಚ್ಚ ಹಸಿರಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
2 ವರ್ಷ 10 ತಿಂಗಳ ಕಂದನಿಂದ ತಬಲಾ ವಾದನ
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
40 ದಿನ ನಂತರ ಪತ್ತೆಯಾದ ಕೆಆರ್‌ಐಡಿಎಲ್ ಎಇಇ ಪರ್ವೀಜ್​ಗೆ ಈಗ ಪೊಲೀಸರ ಗ್ರಿಲ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಡೈಮಂಡ್ ಟಾಸ್ಕ್​ ವಿಷಯದಲ್ಲಿ ಪಂಚಾಯ್ತಿ ಮಾಡಲು ಬಂದ ಸುದೀಪ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಐಷಾರಾಮಿ ಪ್ರವಾಸಿ ರೈಲಿನಲ್ಲಿ ಪ್ರಯಾಣಿಸಿ ಖುಷಿ ಹಂಚಿಕೊಂಡ ಸಿಎಂ ಡಿಕೆಶಿ !
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಮಾವಿನಕೆರೆ ರಂಗನಾಥಸ್ವಾಮಿಗೆ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!
ಆರ್.ಆರ್ ನಗರದ ಪಟ್ಟಣಗೆರೆ ಬಳಿ ಚಾಟ್ಸ್​ ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ!