ಹದಿನೈನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ (Asia Cup 2022) ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಭಾರತ, ಪಾಕಿಸ್ತಾನ, (India Pakistan) ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡಗಳು ಸೂಪರ್ 4 ಹಂತಕ್ಕೆ ತಲುಪಿದ್ದು ಪಂದ್ಯಗಳು ನಡೆಯುತ್ತಿದೆ. ಇಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri Lanka) ಮುಖಾಮುಖಿ ಆಗಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತ ಭಾರತಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಇಂದಿನ ಮ್ಯಾಚ್ ಸೇರಿ ಏಷ್ಯಾಕಪ್ನಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದೆ. ಈ ಎಲ್ಲ ಪಂದ್ಯ ರೋಚಕತೆ ಸೃಷ್ಟಿಸಿದ. ಹಾಗಾದರೆ ಈ ಪಂದ್ಯ ವೀಕ್ಷಿಸಲು ಟಿಕೆಟ್ ಬುಕ್ ಮಾಡುವುದು ಹೇಗೆ?, ಟಿಕೆಟ್ ಬೆಲೆ ಎಷ್ಟು ಎಂಬುದನ್ನು ನೋಡೋಣ.
ಟಿಕೆಟ್ ಬುಕ್ ಮಾಡುವುದು ಹೇಗೆ?:
platinumlist.net ಈ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಗೂಗಲ್ ಅಕೌಂಟ್ ಅಥವಾ ಫೇಸ್ಬುಕ್ ಖಾತೆ ಮೂಲಕ ಒಳ ಪ್ರವೇಶಿಸಿ.
ನಿಮ್ಮ ನಂಬರ್ ದೇಶದ ಸಂಖ್ಯೆಯನ್ನು ನಮೋದಿಸಬೇಕು.
ನಂತರ ಹೋಮ್ ಪೇಜ್ ತೆರೆಯುತ್ತದೆ.
ಟಾಪ್ ಈವೆಂಟ್ ಕೆಟಗರಿ ಮೇಲೆ ಕ್ಲಿಕ್ ಮಾಡಿ ಏಷ್ಯಾಕಪ್ ಆಯ್ಕೆ ಮಾಡಿರಿ.
ಈಗ ದುಬೈ ಅಥವಾ ಶಾರ್ಜಾ ಸ್ಟೇಡಿಯಂ ಆಯ್ಕೆ ಮಾಡಬೇಕು.
ಪಂದ್ಯವನ್ನು ಆಯ್ಕೆ ಮಾಡಿದ ನಂತರ ಆಸನವನ್ನು ಸೆಲೆಕ್ಟ್ ಮಾಡಿ.
ನಂತರ ನಿಮ್ಮ ವಿವರಗಳಲ್ಲಿ ಬರೆದು ಪೇಮೆಂಟ್ ಮಾಡಿ.
ಟಿಕೆಟ್ ಬುಕ್ ಮಾಡಿದ ನಂತರ ಅದನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಟಿಕೆಟ್ ದರ ಎಷ್ಟು?:
ಏಷ್ಯಾಕಪ್ ಟಿಕೆಟ್ ದರ ಪಂದ್ಯದಿಂದ ಪಂದ್ಯಕ್ಕೆ ಬದಲಾವಣೆ ಆಗುತ್ತಿರುತ್ತದೆ. ಬುಕ್ ಮಾಡುವ ಸಮಯದಲ್ಲಿ ಮಾತ್ರ ಖಚಿತ ಬೆಲೆ ತಿಳಿಯಬಹುದು. ಟಿಕೆಟ್ ದರ 21.05 USD ಯಿಂದ ಹಿಡಿದು 7,367.25 USD ವರೆಗೆ ಇದೆ. ಭಾರತದ ಬೆಲೆಯ ಪ್ರಕಾರ 1,500 ರೂ. ಯಿಂದ 30,000 ರೂ. ವರೆಗೆ ಟಿಕೆಟ್ ದರವಿದೆ.
ಸೂಪರ್ 4 ಹಂತದ ವೇಳಾಪಟ್ಟಿ:
ಸೆಪ್ಟೆಂಬರ್ 6, ಶ್ರೀಲಂಕಾ vs ಭಾರತ – ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
ಸೆಪ್ಟೆಂಬರ್ 7, ಪಾಕಿಸ್ತಾನ vs ಅಫ್ಘಾನಿಸ್ತಾನ್ – ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
ಸೆಪ್ಟೆಂಬರ್ 8, ಭಾರತvs ಅಫ್ಘಾನಿಸ್ತಾನ್– ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
ಸೆಪ್ಟೆಂಬರ್ 9, ಶ್ರೀಲಂಕಾ vs ಪಾಕಿಸ್ತಾನ – ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
ಸೆಪ್ಟೆಂಬರ್ 11, ಫೈನಲ್ ಪಂದ್ಯ – ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ.
Published On - 11:12 am, Tue, 6 September 22