ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲ್ಲಿರುವ 2023 ರ ಏಷ್ಯನ್ ಗೇಮ್ಸ್ಗೆ (Asian Games) ಶ್ರೀಲಂಕಾ ಕ್ರಿಕೆಟ್ ಮಂಡಳಿ ಶ್ರೀಲಂಕಾ (Sri Lanka) ಎ ತಂಡವನ್ನು ಪ್ರಕಟಿಸಿದೆ. ಈ ಬಹು-ರಾಷ್ಟ್ರೀಯ ಈವೆಂಟ್‌ನಲ್ಲಿ ಪುರುಷರ ಮತ್ತು ಮಹಿಳೆಯರ ಎರಡೂ ತಂಡಗಳು ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಭಾಗವಹಿಸುತ್ತವೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಪುರುಷರ ಮತ್ತು ಮಹಿಳೆಯರ ತಂಡಗಳಲ್ಲಿ ತಲಾ 15 ಆಟಗಾರರನ್ನು ಆಯ್ಕೆ ಮಾಡಿದ್ದು, ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಪುರುಷರ ತಂಡದ ನಾಯಕತ್ವವನ್ನು ಸಹನ್ ಆರ್ಚಿಗೆ (Sahan Arachchige) ವಹಿಸಲಿದ್ದು, ಚಾಮರಿ ಅಟಾಪಟು ಮಹಿಳಾ ತಂಡದ ನಾಯತ್ವವಹಿಸಿಕೊಳ್ಳಲಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಏಕದಿನ ವಿಶ್ವಕಪ್ ಆರಂಭವಾಗುತ್ತಿರುವ ಕಾರಣ ಈ ಕ್ರೀಡಾಕೂಟಕ್ಕೆ ಪಾಕಿಸ್ತಾನ, ಭಾರತ ಮತ್ತು ಈಗ ಶ್ರೀಲಂಕಾದಂತಹ ತಂಡಗಳು ತಮ್ಮ ಎರಡನೇ ಶ್ರೇಣಿಯ ತಂಡಗಳನ್ನು ಕಳುಹಿಸಲು ನಿರ್ಧರಿಸಿವೆ. ಹೀಗಾಗಿ ಈ ಮೂರು ದೇಶಗಳ ಪುರುಷರ ತಂಡಗಳಲ್ಲಿ ಪ್ರಮುಖ ಆಟಗಾರರು ಕಾಣಿಸಿಕೊಳ್ಳುತ್ತಿಲ್ಲ.
Asian Games: 67 ವರ್ಷ, 32 ಕ್ರೀಡೆ; ಏಷ್ಯನ್ ಸಮರದಲ್ಲಿ ಭಾರತ ಎಷ್ಟು ಪದಕ ಗೆದ್ದಿದೆ ಗೊತ್ತಾ?
The Sri Lanka Cricket Selection Committee selected the following men’s (Sri Lanka ‘A’) and women’s squad to take part in the Asian Games 2023 to be held in Hangzhou, China, from September 23 to October 8.#AsianGames pic.twitter.com/fOV9reZmwV
— Sri Lanka Cricket 🇱🇰 (@OfficialSLC) September 18, 2023
ಏಷ್ಯನ್ ಗೇಮ್ಸ್ ಪುರುಷರ ಶ್ರೀಲಂಕಾ ಕ್ರಿಕೆಟ್ ತಂಡ: ಸಹನ್ ಆರ್ಚಿಗೆ (ಕ್ಯಾಪ್ಟನ್), ಲಸಿತ್ ಕ್ರಾಸ್ಪುಲ್ಲೆ, ಶೆವೊನ್ ಡೇನಿಯಲ್, ಅಶೇನ್ ಬಂಡಾರ, ಅಹಾನ್ ವಿಕ್ರಮಸಿಂಘೆ, ಲಹಿರು ಉದಾರ (ವಿಕೆಟ್ ಕೀಪರ್), ರವಿಂದು ಫೆರ್ನಾಂಡೋ, ರನಿತಾ ಲಿಯಾನರಾಚ್ಚಿ, ನುವಾನಿಡು ಫೆರ್ನಾಂಡೋ, ಸಚಿತ ಜಯತಿಲಕ, ವಿಜಯಕಾಂತ್ ವ್ಯಾಸಕಾಂತ್, ನಿಮೇಶ್ ವಿಮುಕ್ತಿ, ಲಹಿರು ಸಮರಕೋನ್, ನುವಾನ್ ತುಷಾರ, ಇಸಿತಾ ವಿಜೆಸುಂದರ.
ಏಷ್ಯನ್ ಕ್ರೀಡಾಕೂಟಕ್ಕಾಗಿ ಮಹಿಳಾ ಶ್ರೀಲಂಕಾ ಕ್ರಿಕೆಟ್ ತಂಡ: ಚಾಮರಿ ಅಟಾಪಟು (ನಾಯಕ), ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ನೀಲಾಕ್ಷಿ ಡಿ ಸಿಲ್ವಾ, ಕವಿಶಾ ದಿಲ್ಹಾರಿ, ಇಮೇಶಾ ದುಲಾನಿ, ಅನುಷ್ಕಾ ಸಂಜೀವನಿ, ಓಷದಿ ರಣಸಿಂಘೆ, ಸುಗಂಧಿಕಾ ಕುಮಾರಿ, ಇನೋಕಾ ರಣವೀರ, ಉದೇಶಿಕಾ ಪ್ರಬೋಧನಿ, ಹಾಸಿನಿ ಕುಶಿನಿ ನುರಂಗಾನನ್, ಹಾಸಿನಿ ನುರಂಗಾನನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:49 am, Tue, 19 September 23