Asian Games: 67 ವರ್ಷ, 32 ಕ್ರೀಡೆ; ಏಷ್ಯನ್ ಸಮರದಲ್ಲಿ ಭಾರತ ಎಷ್ಟು ಪದಕ ಗೆದ್ದಿದೆ ಗೊತ್ತಾ?

Asian Games: 1951 ರಿಂದ 2018 ರವರೆಗೆ ಆಡಿದ 18 ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತ ಒಟ್ಟು 672 ಪದಕಗಳನ್ನು ಗೆದ್ದಿದೆ. ಇದರಲ್ಲಿ 155 ಚಿನ್ನ, 201 ಬೆಳ್ಳಿ ಮತ್ತು 316 ಕಂಚಿನ ಪದಕಗಳು ಸೇರಿವೆ. ಭಾರತ ಗೆದ್ದ ಈ ಎಲ್ಲಾ ಪದಕಗಳು 32 ಕ್ರೀಡೆಗಳ ಫಲಿತಾಂಶವಾಗಿದೆ.

Asian Games: 67 ವರ್ಷ, 32 ಕ್ರೀಡೆ; ಏಷ್ಯನ್ ಸಮರದಲ್ಲಿ ಭಾರತ ಎಷ್ಟು ಪದಕ ಗೆದ್ದಿದೆ ಗೊತ್ತಾ?
ಏಷ್ಯನ್ ಗೇಮ್ಸ್
Follow us
ಪೃಥ್ವಿಶಂಕರ
|

Updated on: Sep 19, 2023 | 9:04 AM

19 ನೇ ಆವೃತ್ತಿಯ ಏಷ್ಯನ್ ಗೇಮ್ಸ್ (Asian Games) ಚೀನಾದ ಹ್ಯಾಂಗ್‌ಝೌ ನಗರದಲ್ಲಿ ಇದೇ ಸೆಪ್ಟೆಂಬರ್ 23 ರಿಂದ ಆರಂಭವಾಗಲಿದೆ. ಹಾಗೆಯೇ ಕ್ರೀಡಾಕೂಟದ ಸಮಾರೋಪ ಸಮಾರಂಭವು ಅಕ್ಟೋಬರ್ 8 ರಂದು ನಡೆಯಲಿದೆ. ಎಲ್ಲಾ ಸ್ಪರ್ಧೆಗಳು ಚೀನಾದ ಹ್ಯಾಂಗ್‌ಝೌನಲ್ಲಿನ 56 ಸ್ಥಳಗಳಲ್ಲಿ ನಡೆಯಲಿವೆ. ಈ ಕ್ರೀಡಾಕೂಟಕ್ಕೆ ಭಾರತ 655 ಅಥ್ಲೀಟ್‌ಗಳ ಅತಿದೊಡ್ಡ ತಂಡವನ್ನು ಕಳುಹಿಸುತ್ತದೆ. ಇನ್ನು 67 ವರ್ಷಗಳ ಇತಿಹಾಸವಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪ್ರದರ್ಶನ ಹೇಗಿತ್ತು? ಏಷ್ಯಾದ ದೇಶಗಳ ನಡುವೆ ನಡೆಯುವ ಈ ಕ್ರೀಡಾಕೂಟಗಳಲ್ಲಿ ಭಾರತ ತನ್ನ ಪ್ರಾಬಲ್ಯದ ಕಥೆಯನ್ನು ಬರೆಯುವಲ್ಲಿ ಎಲ್ಲಿ ನಿಂತಿದೆ?. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

1951 ರಿಂದ 2018 ರವರೆಗೆ ಆಡಿದ 18 ಏಷ್ಯನ್ ಗೇಮ್ಸ್‌ಗಳಲ್ಲಿ ಭಾರತ ಒಟ್ಟು 672 ಪದಕಗಳನ್ನು ಗೆದ್ದಿದೆ. ಇದರಲ್ಲಿ 155 ಚಿನ್ನ, 201 ಬೆಳ್ಳಿ ಮತ್ತು 316 ಕಂಚಿನ ಪದಕಗಳು ಸೇರಿವೆ. ಭಾರತ ಗೆದ್ದ ಈ ಎಲ್ಲಾ ಪದಕಗಳು 32 ಕ್ರೀಡೆಗಳ ಫಲಿತಾಂಶವಾಗಿದೆ. ಆದರೆ, ಪ್ರಶ್ನೆ ಏನೆಂದರೆ, ಯಾವ ಕ್ರೀಡೆಗಳಲ್ಲಿ ಭಾರತೀಯರು ಎಷ್ಟು ಗೆಲುವು ಸಾಧಿಸಿದ್ದಾರೆ? ಯಾವ ಕ್ರೀಡೆಯಲ್ಲಿ ಭಾರತ ಮೇಲುಗೈ ಸಾಧಿಸಿದೆ? ಯಾವ ಕ್ರೀಡೆಯಲ್ಲಿ ಭಾರತ ಹಿಂದಿದೆ? ಭಾರತದ ಭಾಗವಹಿಸುವ 32 ಕ್ರೀಡೆಗಳಲ್ಲಿ ಅದು ಗೆದ್ದ ಪದಕಗಳು ಎಷ್ಟು ಎಂಬುದರ ವಿವರ ಇಲ್ಲಿದೆ.

ಏಷ್ಯನ್ ಗೇಮ್ಸ್‌ ತಂಡಕ್ಕೆ ಆರ್​ಸಿಬಿ ಆಟಗಾರನ ಎಂಟ್ರಿ! ಮಹಿಳಾ ತಂಡದಲ್ಲೂ ಬದಲಾವಣೆ

32 ಕ್ರೀಡೆಗಳಲ್ಲಿ ಭಾರತದ ಸಾಧನೆ ಏನು?

ಏಷ್ಯನ್ ಗೇಮ್ಸ್‌ನಲ್ಲಿ ಭಾರತ 79 ಚಿನ್ನ, 88 ಬೆಳ್ಳಿ ಮತ್ತು 87 ಕಂಚು ಸೇರಿದಂತೆ ಅಥ್ಲೆಟಿಕ್ಸ್‌ನಲ್ಲಿ ಗರಿಷ್ಠ 254 ಪದಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಕುಸ್ತಿಯು ಭಾರತದ ಅತ್ಯಂತ ಯಶಸ್ವಿಯಾದ ಎರಡನೇ ಕ್ರೀಡೆಯಾಗಿದ್ದು, ಇದರಲ್ಲಿ ಭಾರತ 11 ಚಿನ್ನ ಸೇರಿದಂತೆ 59 ಪದಕಗಳನ್ನು ಗೆದ್ದಿದೆ. ಶೂಟಿಂಗ್ ಮತ್ತು ಬಾಕ್ಸಿಂಗ್‌ನಲ್ಲಿ ತಲಾ 9 ಚಿನ್ನದೊಂದಿಗೆ 58 ಮತ್ತು 57 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಟೆನಿಸ್ ಮತ್ತು ಕಬಡ್ಡಿಯಲ್ಲಿ ತಲಾ 9 ಚಿನ್ನದ ಪದಕಗಳನ್ನು ಗೆದ್ದಿದ್ದು, ಒಟ್ಟಾರೆ ಪದಕಗಳ ಸಂಖ್ಯೆಗಳನ್ನು ನೋಡುವುದಾದರೆ ಟೆನಿಸ್‌ನಲ್ಲಿ 32 ಮತ್ತು ಕಬಡ್ಡಿಯಲ್ಲಿ 11 ಪದಕಗಳು ಭಾರತಕ್ಕೆ ಲಭಿಸಿವೆ.

ಕ್ಯೂ ಕ್ರೀಡೆಯಲ್ಲಿ ಭಾರತ 5 ಚಿನ್ನ ಸೇರಿದಂತೆ 15 ಪದಕಗಳನ್ನು ಗೆದ್ದಿದೆ. ಫೀಲ್ಡ್ ಹಾಕಿಯಲ್ಲಿ 4 ಚಿನ್ನ ಸೇರಿದಂತೆ 21 ಪದಕಗಳು ಬಂದಿವೆ. ಕುದುರೆ ಸವಾರಿ, ಗಾಲ್ಫ್ ಮತ್ತು ಬೋರ್ಡ್ ಆಟಗಳಲ್ಲಿ ಭಾರತ ತಲಾ 3 ಚಿನ್ನದೊಂದಿಗೆ ಕ್ರಮವಾಗಿ 12, 6 ಮತ್ತು 7 ಪದಕಗಳನ್ನು ಗೆದ್ದಿದೆ. ರೋಯಿಂಗ್, ಡೈವಿಂಗ್ ಮತ್ತು ಫುಟ್‌ಬಾಲ್‌ನಲ್ಲಿ ತಲಾ 2 ಚಿನ್ನವನ್ನು ಭಾರತ ಗೆದ್ದಿದೆ. ಆದಾಗ್ಯೂ, ಗೆದ್ದ ಒಟ್ಟು ಪದಕಗಳ ಸಂಖ್ಯೆ ರೋಯಿಂಗ್‌ನಲ್ಲಿ 21 ಮತ್ತು ಡೈವಿಂಗ್​ನಲ್ಲಿ 5 ಮತ್ತು ಫುಟ್‌ಬಾಲ್‌ನಲ್ಲಿ 3 ಪದಕಗಳು ಲಭಿಸಿವೆ. ಸೇಲಿಂಗ್, ಆರ್ಚರಿ, ಸ್ಕ್ವಾಷ್, ಈಜು ಮತ್ತು ವಾಟರ್ ಪೊಟೊ 5 ಪಂದ್ಯಗಳಲ್ಲಿ ಭಾರತ ಕೇವಲ ತಲಾ 1 ಚಿನ್ನ ಗೆದ್ದಿದೆ. ಒಟ್ಟಾರೆ ಸೇಲಿಂಗ್‌ನಲ್ಲಿ 20, ಆರ್ಚರಿಯಲ್ಲಿ 10, ಸ್ಕ್ವಾಷ್‌ನಲ್ಲಿ 13, ಈಜುನಲ್ಲಿ 9 ಮತ್ತು ವಾಟರ್‌ಪೋಲೊದಲ್ಲಿ 3 ಪದಕಗಳನ್ನು ಭಾರತ ಗೆದ್ದಿದೆ.

13 ಕ್ರೀಡೆಗಳಲ್ಲಿ ಪದಕ ಗೆದ್ದರೂ ಚಿನ್ನ ಸಿಕ್ಕಿಲ್ಲ

ಇದಲ್ಲದೆ ಬ್ಯಾಡ್ಮಿಂಟನ್, ವೇಟ್‌ಲಿಫ್ಟಿಂಗ್, ಟೇಬಲ್ ಟೆನಿಸ್ ಮತ್ತು ಜಿಮ್ನಾಸ್ಟಿಕ್ಸ್ ಸೇರಿದಂತೆ ಭಾರತದ ಚಿನ್ನದ ಪದಕದ ಖಾತೆ ಇನ್ನೂ ತೆರೆದಿಲ್ಲ. 32 ಕ್ರೀಡೆಗಳಲ್ಲಿ, ಈ 4 ಸೇರಿದಂತೆ ಒಟ್ಟು 13 ಕ್ರೀಡೆಗಳಿವೆ, ಇದರಲ್ಲಿ ಭಾರತವು ಪದಕ ಗೆದ್ದಿದೆ ಆದರೆ ಅದರ ಬಣ್ಣ ಚಿನ್ನದ್ದಾಗಿಲ್ಲ.

ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದಿಂದ ಸುಮಾರು 650 ಆಟಗಾರರು 40 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಪದಕದ ನಿರೀಕ್ಷೆಗಳು ಹೆಚ್ಚಾಗಿವೆ. ಈ ನಿರೀಕ್ಷೆ ನಿಜವಾದರೆ 1986ರಲ್ಲಿ ಸಿಯೋಲ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಂತರ ಇದೇ ಮೊದಲ ಬಾರಿಗೆ ಪದಕ ಪಟ್ಟಿಯಲ್ಲಿ ಭಾರತ ಟಾಪ್ 5ರಲ್ಲಿ ಕಾಣಿಸಿಕೊಳ್ಳಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ