AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ

Asian Games 2026: ಏಷ್ಯಾದ ಅತ್ಯಂತ ದೊಡ್ಡ ಕ್ರೀಡಾ ಹಬ್ಬ 'ಏಷ್ಯನ್ ಗೇಮ್ಸ್ 2026' ಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಈ ಬಾರಿಯ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪ್ರಿಯರಿಗೆ ಭರಪೂರ ಮನರಂಜನೆ ಸಿಗಲಿದೆ. ಏಕೆಂದರೆ, ಈ ಬಾರಿ ಒಟ್ಟು 18 ತಂಡಗಳು ಪದಕದ ಬೇಟೆಗಾಗಿ ಅಖಾಡಕ್ಕಿಳಿಯಲಿವೆ.

ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ
Asian Games
ಝಾಹಿರ್ ಯೂಸುಫ್
|

Updated on: Aug 26, 2026 | 10:17 AM

Share

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ (T20) ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡಿದೆ. ಜಪಾನ್‌ನ ನಿಸ್ಶಿನ್‌ನಲ್ಲಿರುವ ‘ಕೊರೊಗಿ ಅಥ್ಲೆಟಿಕ್ ಪಾರ್ಕ್’ ಮೈದಾನದಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 3ರ ವರೆಗೆ ಈ ಪಂದ್ಯಗಳು ನಡೆಯಲಿವೆ.

ಭಾರತೀಯ ಪುರುಷರ ಮತ್ತು ಮಹಿಳೆಯರ ತಂಡಗಳು ನೇರವಾಗಿ ಕ್ವಾರ್ಟರ್-ಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದು, ಹೀಗಾಗಿ ಎರಡೂ ತಂಡಗಳು ದ್ವಿತೀಯ ಸುತ್ತಿನ ಮೂಲಕ ಟೂರ್ನಿ ಆರಂಭಿಸಲಿದೆ. ಈ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ​ ವೇಳಾಪಟ್ಟಿ:

ದಿನಾಂಕ  ಸಮಯ ( IST) ಮುಖಾಮುಖಿ
ಸೆಪ್ಟೆಂಬರ್ 17 

ಬೆಳಗ್ಗೆ 05:30 ಕ್ವಾರ್ಟರ್-ಫೈನಲ್ 1: ಬಾಂಗ್ಲಾದೇಶ್ vs ಚೀನಾ

ಬೆಳಗ್ಗೆ 10:30 ಕ್ವಾರ್ಟರ್-ಫೈನಲ್ 2: ಪಾಕಿಸ್ತಾನ್ vs ಥೈಲ್ಯಾಂಡ್
ಸೆಪ್ಟೆಂಬರ್ 18 

ಬೆಳಗ್ಗೆ 05:30 ಕ್ವಾರ್ಟರ್-ಫೈನಲ್ 3: ಶ್ರೀಲಂಕಾ vs ಮಲೇಷ್ಯಾ

ಬೆಳಗ್ಗೆ 10:30 ಕ್ವಾರ್ಟರ್-ಫೈನಲ್ 4: ಭಾರತ vs ಜಪಾನ್
ಸೆಪ್ಟೆಂಬರ್ 20

ಬೆಳಗ್ಗೆ 05:30 ಸೆಮಿ-ಫೈನಲ್ 1 (QF2 ವಿಜೇತರು vs QF3 ವಿಜೇತರು)

ಬೆಳಗ್ಗೆ 10:30 ಸೆಮಿ-ಫೈನಲ್ 2 (QF1 ವಿಜೇತರು vs QF4 ವಿಜೇತರು)
ಸೆಪ್ಟೆಂಬರ್ 22 

ಬೆಳಗ್ಗೆ 05:30 ಕಂಚಿನ ಪದಕದ ಪಂದ್ಯ

ಬೆಳಗ್ಗೆ 10:30 ಫೈನಲ್ ಪಂದ್ಯ 

ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ವೇಳಾಪಟ್ಟಿ:

ಏಷ್ಯನ್ ಗೇಮ್ಸ್​ ಪುರುಷರ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಒಟ್ಟು 10 ತಂಡಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಐಸಿಸಿ ರ‍್ಯಾಂಕಿಂಗ್ ಆಧಾರದ ಮೇಲೆ ವೇಳಾಪಟ್ಟಿಯನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಏಷ್ಯಾದ ಬಲಿಷ್ಠ ತಂಡಗಳಾದ ಭಾರತ, ಪಾಕಿಸ್ತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶ್ ನೇರವಾಗಿ 2ನೇ ಹಂತವಾದ ಕ್ವಾರ್ಟರ್-ಫೈನಲ್‌ಗೆ (ನಾಕೌಟ್) ಅರ್ಹತೆ ಪಡೆದಿವೆ.

ಉಳಿದ 6 ಕಡಿಮೆ ಅನುಭವವಿರುವ ತಂಡಗಳನ್ನು (ಅಫ್ಘಾನಿಸ್ತಾನ್, ನೇಪಾಳ, ಜಪಾನ್, ಒಮಾನ್, ಮಲೇಷ್ಯಾ, ಹಾಂಗ್ ಕಾಂಗ್) ಗ್ರೂಪ್ A ಮತ್ತು B ಎಂದು ಎರಡು ಗುಂಪುಗಳಾಗಿ ವಿಂಗಡಿಸಿ ಮೊದಲ ಹಂತದಲ್ಲಿ ಪ್ರಿಲಿಮಿನರಿ ಲೀಗ್ ಪಂದ್ಯಗಳನ್ನು ಆಡಿಸಲಾಗುತ್ತದೆ. ಈ ಲೀಗ್ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆಯುವ ತಂಡಗಳು ಮಾತ್ರ 2ನೇ ಹಂತಕ್ಕೆ ಮುನ್ನಡೆದು, ಅಲ್ಲಿ ಈಗಾಗಲೇ ಸಜ್ಜಾಗಿರುವ ಬಲಿಷ್ಠ ತಂಡಗಳ ವಿರುದ್ಧ ಪದಕಕ್ಕಾಗಿ ನಾಕೌಟ್ ಪಂದ್ಯಗಳಲ್ಲಿ ಸೆಣಸಾಡಲಿವೆ.

ಗ್ರೂಪ್ ಹಂತದ ಪಂದ್ಯಗಳು:

ದಿನಾಂಕ  ಸಮಯ (IST) ಮುಖಾಮುಖಿ
ಸೆಪ್ಟೆಂಬರ್ 24

ಬೆಳಗ್ಗೆ 05:30 ಅಫ್ಘಾನಿಸ್ತಾನ್ vs ಜಪಾನ್ (ಗ್ರೂಪ್ A)

ಬೆಳಗ್ಗೆ 10:30 ಹಾಂಗ್ ಕಾಂಗ್ vs ಮಲೇಷ್ಯಾ (ಗ್ರೂಪ್ B)
ಸೆಪ್ಟೆಂಬರ್ 25

ಬೆಳಗ್ಗೆ 05:30 ಹಾಂಗ್ ಕಾಂಗ್ vs ಒಮಾನ್ (ಗ್ರೂಪ್ B)

ಬೆಳಗ್ಗೆ 10:30 ಅಫ್ಘಾನಿಸ್ತಾನ್ vs ನೇಪಾಳ (ಗ್ರೂಪ್ A)
ಸೆಪ್ಟೆಂಬರ್ 26

ಬೆಳಗ್ಗೆ 05:30 ಜಪಾನ್ vs ನೇಪಾಳ (ಗ್ರೂಪ್ A)

ಬೆಳಗ್ಗೆ 10:30 ಮಲೇಷ್ಯಾ vs ಒಮಾನ್ (ಗ್ರೂಪ್ B)

ನಾಕೌಟ್ ಹಂತದ ಪಂದ್ಯಗಳು:

ದಿನಾಂಕ ಸಮಯ (IST) ಮುಖಾಮುಖಿ
ಸೆಪ್ಟೆಂಬರ್ 28 

ಬೆಳಗ್ಗೆ 05:30 ಕ್ವಾರ್ಟರ್-ಫೈನಲ್ 1: ಪಾಕಿಸ್ತಾನ್ vs ಗ್ರೂಪ್ B ನ 2ನೇ ಸ್ಥಾನಿ

ಬೆಳಗ್ಗೆ 10:30 ಕ್ವಾರ್ಟರ್-ಫೈನಲ್ 2: ಭಾರತ vs ಗ್ರೂಪ್ A ನ 2ನೇ ಸ್ಥಾನಿ
ಸೆಪ್ಟೆಂಬರ್ 29 

ಬೆಳಗ್ಗೆ 05:30 ಕ್ವಾರ್ಟರ್-ಫೈನಲ್ 3: ಶ್ರೀಲಂಕಾ vs ಗ್ರೂಪ್ A ನ ವಿಜೇತರು

ಬೆಳಗ್ಗೆ 10:30 ಕ್ವಾರ್ಟರ್-ಫೈನಲ್ 4: ಬಾಂಗ್ಲಾದೇಶ್ vs ಗ್ರೂಪ್ B ನ ವಿಜೇತರು
ಅಕ್ಟೋಬರ್ 01 

ಬೆಳಗ್ಗೆ 05:30 ಸೆಮಿ-ಫೈನಲ್ 1 (QF1 ವಿಜೇತರು vs QF4 ವಿಜೇತರು)

ಬೆಳಗ್ಗೆ 10:30 ಸೆಮಿ-ಫೈನಲ್ 2 (QF2 ವಿಜೇತರು vs QF3 ವಿಜೇತರು)
ಅಕ್ಟೋಬರ್ 03 

ಬೆಳಗ್ಗೆ 05:30 ಕಂಚಿನ ಪದಕದ ಪಂದ್ಯ 

ಬೆಳಗ್ಗೆ 10:30 ಫೈನಲ್ ಪಂದ್ಯ

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ
ವಿಜಯಪುರದಲ್ಲಿ ಕಚ್ಚಾ ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ: ಮುಗಿಬಿದ್ದ ಜನ