ಚೀನಾದ ಹ್ಯಾಂಗ್‌ಝೌನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ (Asian Games 2023) ಪುರುಷರ ಟಿ20 ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಕಣಕ್ಕಿಳಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಹಾಗೂ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಜೈಸ್ವಾಲ್ ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದರೆ, ಗಾಯಕ್ವಾಡ್ ನಾಯಕನ ಆಟ ಆಡುತ್ತಿದ್ದಾರೆ.
ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನೇ ಕಣಕ್ಕಿಳಿಸಿದೆ. ಓಪನರ್ಗಳಾಗಿ ಗಾಯಕ್ವಾಡ್, ಜೈಸ್ವಾಲ್ ಇದ್ದರೆ ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಆಡಲಿದ್ದಾರೆ. ನಂತರದ ಸ್ಥಾನದಲ್ಲಿ ಜಿತೇಶ್ ಶರ್ಮಾ, ರಿಂಕು ಸಿಂಗ್, ಶಿವಂ ದುವೆ, ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಲಿದ್ದಾರೆ, ಜೊತೆಗೆ ರವಿಶ್ರೀನಿವಾಸನ್ ಸಾಯಿ ಕಿಶೋರ್, ರವಿ ಬಿಷ್ಟೋಯಿ, ಆವೇಶ್ ಖಾನ್ ಹಾಗೂ ಅರ್ಶ್ದೀಪ್ ಸಿಂಗ್ ಸ್ಥಾನ ಪಡೆದುಕೊಂಡಿದ್ದಾರೆ.
ವಿಶ್ವಕಪ್ ಗೆಲ್ಲಬೇಕಿದ್ದರೆ ಆಲ್ರೌಂಡರ್ಗಳ ಪಾತ್ರ ನಿರ್ಣಾಯಕ
ಇತ್ತ ನೇಪಾಳ ಕೂಡ ಬಲಿಷ್ಠವಾಗಿದೆ. ಗುಂಪು ಹಂತದಲ್ಲಿ ಮಂಗೋಲಿಯಾ ವಿರುದ್ಧದ ಬರೋಬ್ಬರಿ 314 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ ನೇಪಾಳ ತಂಡವನ್ನು ಭಾರತ ಕ್ವಾರ್ಟರ್-ಫೈನಲ್‌ನ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ವಿಶ್ವ ದಾಖಲೆಗಳನ್ನು ಮಾಡಿತ್ತು. ಅತಿ ವೇಗದ ಶತಕ, ವೇಗದ ಅರ್ಧಶತಕ, ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸ್ಕೋರ್, ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ಸಂಖ್ಯೆಯ ಸಿಕ್ಸರ್‌ಗಳು ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯವೊಂದರಲ್ಲಿ ರನ್‌ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವಿನ ದಾಖಲೆ ಹೀಗೆ ನೇಪಾಳ ತಂಡ ಇತಿಹಾಸ ಸೃಷ್ಟಿಸಿತ್ತು.
ನೇಪಾಳ ಪ್ಲೇಯಿಂಗ್ ಇಲೆವೆನ್: ಕುಶಾಲ್ ಭರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ಸಂದೀಪ್ ಜೋರಾ, ಗುಲ್ಸನ್ ಝಾ, ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಸೋಂಪಾಲ್ ಕಮಿ, ಕರಣ್ ಕೆಸಿ, ಅಬಿನಾಶ್ ಬೋಹರಾ, ಸಂದೀಪ್ ಲಾಮಿಚಾನೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ