IND A vs AUS A: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ತಂಡ ಪ್ರಕಟ; ಕೊಹ್ಲಿ ಜೊತೆ ಜಗಳ ಮಾಡಿದ್ದ ಆಟಗಾರನಿಗೆ ಸ್ಥಾನ

Australia A Squad Announced: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಸರಣಿಗೆ ಆಸ್ಟ್ರೇಲಿಯಾ ಎ ತಂಡವನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 5 ರವರೆಗೆ ನಡೆಯುವ ಈ ಸರಣಿಯಲ್ಲಿ ಎರಡು ನಾಲ್ಕು ದಿನಗಳ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳು ಲಕ್ನೋದಲ್ಲಿ ನಡೆಯಲಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದ ಸ್ಯಾಮ್ ಕಾನ್ಸ್ಟಾಸ್ ಆಸ್ಟ್ರೇಲಿಯಾ A ತಂಡದಲ್ಲಿದ್ದಾರೆ.

IND A vs AUS A: ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಎ ತಂಡ ಪ್ರಕಟ; ಕೊಹ್ಲಿ ಜೊತೆ ಜಗಳ ಮಾಡಿದ್ದ ಆಟಗಾರನಿಗೆ ಸ್ಥಾನ
Australia A Squad

Updated on: Aug 07, 2025 | 4:52 PM

ಭಾರತ ಎ ಹಾಗೂ ಆಸ್ಟ್ರೇಲಿಯಾ ಎ (Australia A vs India A) ತಂಡಗಳ ನಡುವೆ ಇದೇ ಸೆಪ್ಟೆಂಬರ್ 16 ರಿಂದ ಅಕ್ಟೋಬರ್‌ 5 ರವರೆಗೆ ನಾಲ್ಕು ದಿನಗಳ 2 ಪಂದ್ಯಗಳು ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಗೆ ಭಾರತ ಆತಿಥ್ಯವಹಿಸುತ್ತಿದ್ದು ಎಲ್ಲಾ ಪಂದ್ಯಗಳು ಲಕ್ನೋದಲ್ಲಿ ನಡೆಯಲಿವೆ. ಇದೀಗ ಈ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಈ ವರ್ಷ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಸ್ಯಾಮ್ ಕೊನ್ಸ್​​ಟಾಸ್ (Sam Konstas) ಮತ್ತು ನಾಥಮ್ ಮೆಕ್‌ಸ್ವೀನಿ ಕೂಡ ಆಸ್ಟ್ರೇಲಿಯಾ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸ್ಯಾಮ್ ಕೊನ್ಸ್​​ಟಾಸ್​ಗೆ ತಂಡದಲ್ಲಿ ಸ್ಥಾನ

ವಾಸ್ತವವಾಗಿ ಭಾರತದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದ ಕೊನ್ಸ್​​ಟಾಸ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಮೆಲ್ಬೋರ್ನ್ ಟೆಸ್ಟ್‌ನಲ್ಲಿ ತನ್ನ ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಕೊನ್ಸ್​​ಟಾಸ್, ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವ ಮೂಲಕ ಅರ್ಧಶತಕ ಬಾರಿಸಿದ್ದರು. ಅಲ್ಲದೆ ಅದೇ ಪಂದ್ಯದಲ್ಲಿ ಅವರು ವಿರಾಟ್ ಕೊಹ್ಲಿಯೊಂದಿಗೆ ಜಗಳ ಕೂಡ ಮಾಡಿಕೊಂಡಿದ್ದರು. ಇವರಿಬ್ಬರ ವಾಗ್ವಾದ ಕೂಡ ನಡೆದಿತ್ತು. ಇನ್ನು ಭಾರತ ಎ ವಿರುದ್ಧದ ಸರಣಿಗೆ ಕೊನ್ಸ್​​ಟಾಸ್ ಜೊತೆಗೆ ಮೆಕ್‌ಸ್ವೀನಿ, ಕೂಪರ್ ಕಾನೊಲಿ ಮತ್ತು ಸ್ಪಿನ್ನರ್ ಟಾಡ್ ಮರ್ಫಿ ಕೂಡ ತಂಡದಲ್ಲಿ ಆಯ್ಕೆಯಾಗಿದ್ದಾರೆ.

ಮರ್ಫಿ ಇಲ್ಲಿಯವರೆಗೆ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನಾಲ್ಕು ಪಂದ್ಯಗಳನ್ನು 2022-23ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಡಿದ್ದರು. ಆ ಸರಣಿಯಲ್ಲಿ ಮರ್ಫಿ 14 ವಿಕೆಟ್‌ಗಳನ್ನು ಕಬಳಿಸಿದ್ದರು, ಆದಾಗ್ಯೂ ಆಸ್ಟ್ರೇಲಿಯಾ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತ್ತು.

ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಸೆಪ್ಟೆಂಬರ್ 16 ರಿಂದ 19 ರವರೆಗೆ ಮತ್ತು ಸೆಪ್ಟೆಂಬರ್ 23 ರಿಂದ 26 ರವರೆಗೆ ಲಕ್ನೋದಲ್ಲಿ ಎರಡು, ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದ್ದು, ಆ ನಂತರ ಸೆಪ್ಟೆಂಬರ್ 30, ಅಕ್ಟೋಬರ್ 3 ಮತ್ತು ಅಕ್ಟೋಬರ್ 5 ರಂದು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.

ಆಸ್ಟ್ರೇಲಿಯಾ ಎ ತಂಡ ಇಂತಿದೆ

ನಾಲ್ಕು ದಿನಗಳ ಪಂದ್ಯ: ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಜ್ಯಾಕ್ ಎಡ್ವರ್ಡ್ಸ್, ಆರನ್ ಹಾರ್ಡಿ, ಕ್ಯಾಂಪ್‌ಬೆಲ್ ಕೆಲ್ಲಾವೇ, ಸ್ಯಾಮ್ ಕೊನ್ಸ್​​ಟಾಸ್, ನಾಥನ್ ಮೆಕ್‌ಸ್ವೀನಿ, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಫರ್ಗಸ್ ಓ’ನೀಲ್, ಆಲಿವರ್ ಪೀಕ್, ಜೋಶ್ ಫಿಲಿಪ್, ಕೋರಿ ರೊಚ್ಚಿಯೋಲಿ, ಲಿಯಾಮ್ ಸ್ಕಾಟ್.

ಏಕದಿನ ತಂಡ: ಕೂಪರ್ ಕಾನೊಲಿ, ಹ್ಯಾರಿ ಡಿಕ್ಸನ್, ಜ್ಯಾಕ್ ಎಡ್ವರ್ಡ್ಸ್, ಸ್ಯಾಮ್ ಎಲಿಯಟ್, ಜ್ಯಾಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ಮೆಕೆಂಜಿ ಹಾರ್ವೆ, ಟಾಡ್ ಮರ್ಫಿ, ತನ್ವೀರ್ ಸಂಘ, ಲಿಯಾಮ್ ಸ್ಕಾಟ್, ಲಾಚಿ ಶಾ, ಟಾಮ್ ಸ್ಟ್ರಾಕರ್, ವಿಲ್ ಸದರ್ಲ್ಯಾಂಡ್, ಕ್ಯಾಲಮ್ ವಿಡ್ಲರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ