ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Pakistan vs Australia) ನಡುವಿನ ವಿಶ್ವಕಪ್ (ICC World Cup 2023) ಅಭ್ಯಾಸ ಪಂದ್ಯದಲ್ಲಿ ಕಾಂಗರೂಗಳು 14 ರನ್‌ಗಳ ರೋಚಕ ಗೆಲುವು ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 351 ರನ್ ಕಲೆಹಾಕಿತು. ತಂಡದ ಪರ ಅರ್ಧಶತಕ ಇನ್ನಿಂಗ್ಸ್ ಆಡಿದ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಮತ್ತು ಕ್ಯಾಮರೂನ್ ಗ್ರೀನ್ ತಂಡವನ್ನು 350 ರನ್‌ಗಳ ಗಡಿ ದಾಟಿಸಿದರು. ಈ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 337 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಬಾಬರ್ ಪಡೆ ಆಡಿದ ಎರಡೂ ಪಂದ್ಯಗಳಲ್ಲಿ ಸೋಲುಂಡರೆ, ಇತ್ತ ಆಸ್ಟ್ರೇಲಿಯಾ ತಾನು ಆಡಿದ ಎರಡೂ ಅಭ್ಯಾಸ ಪಂದ್ಯಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಅಲೆಕ್ಸ್ ಕ್ಯಾರಿ ಹೊರತುಪಡಿಸಿ ಎಲ್ಲಾ ಆಟಗಾರರು 30 ಕ್ಕೂ ಹೆಚ್ಚು ರನ್ ಗಳಿಸಿದರು. ಡೇವಿಡ್ ವಾರ್ನರ್ 48 ರನ್, ಲಬುಶೇನ್ 40 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 77 ರನ್, ಕ್ಯಾಮರೂನ್ ಗ್ರೀನ್ 50 ರನ್, ಜೋಶ್ ಇಂಗ್ಲಿಷ್ 48 ರನ್‌ಗಳ ಇನ್ನಿಂಗ್ಸ್ ಆಡಿದರು. ಇನ್ನು ಈ ಪಂದ್ಯದಲ್ಲಿ ತೀರ ದುಬಾರಿಯಾದ ಪಾಕಿಸ್ತಾನದ ಬೌಲಿಂಗ್, ಆಸೀಸ್ ಬ್ಯಾಟರ್ಗಳು ಸರಾಗವಾಗಿ ರನ್ ಕಲೆಹಾಕಲು ನೆರವಾದರು. ಪಾಕ್ ಪರ ಉಸಾಮಾ ಮಿರ್ ಪಾಕ್ ಪರ ಅತಿ ಹೆಚ್ಚು 2 ವಿಕೆಟ್ ಪಡೆದರೆ, ಇದರೊಂದಿಗೆ ಇತರ ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು.
ಬೃಹತ್ ಟಾರ್ಗೆಟ್ ನೀಡಿಯೂ ಸೋತ ಪಾಕಿಸ್ತಾನ; ಸೋಲಿನೊಂದಿಗೆ ವಿಶ್ವಕಪ್ ಪ್ರಯಾಣ ಆರಂಭ..!
ಇನ್ನು ಆಸ್ಟ್ರೇಲಿಯಾ ನೀಡಿದ 350 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಕೆಟ್ಟ ಆರಂಭ ಸಿಕ್ಕಿತು. ಕೇವಲ 83 ರನ್ ಗಳಿಸುವಷ್ಟರಲ್ಲಿ ತಂಡ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಬಳಿಕ ಇಫ್ತಿಕರ್ ಅಹ್ಮದ್ 83 ರನ್ ಹಾಗೂ ಬಾಬರ್ ಅಜಮ್ 90 ರನ್ ಬಾರಿಸಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಆದರೆ ಈ ವೇಳೆ ಇಫ್ತಿಕರ್ ಅಹ್ಮದ್ ಇತರ ಆಟಗಾರರಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಮೈದಾನ ತೊರೆದರೆ, ಸ್ವಲ್ಪ ಸಮಯದ ನಂತರ ಬಾಬರ್ ಆಝಂ ಇಂಜುರಿಯಿಂದಾಗಿ ಪೆವಿಲಿಯನ್ ಸೇರಿಕೊಂಡರು. ಆ ನಂತರ ಕಾಂಗರೂಗಳು ಇಡೀ ತಂಡವನ್ನು ಆಲೌಟ್ ಮಾಡುವ ಮೂಲಕ ಪಂದ್ಯವನ್ನು ಗೆದ್ದು ಬೀಗಿದರು.
ಪಾಕಿಸ್ತಾನ ತಂಡ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಆಝಂ, ಸೌದ್ ಶಕೀಲ್, ಮೊಹಮ್ಮದ್ ಹ್ಯಾರಿಸ್, ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಫಖರ್ ಜಮಾನ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಉಸಾಮಾ ಮಿರ್, ಮೊಹಮ್ಮದ್ ರಿಜ್ವಾನ್, ಹಸನ್ ಅಲಿ , ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂ.
ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಮಾರ್ನಸ್ ಲಬುಶೇನ್, ಮಾರ್ಕಸ್ ಸ್ಟೋನಿಸ್, ಶಾನ್ ಅಬಾಟ್, ಟ್ರಾವಿಸ್ ಹೆಡ್, ಆಡಮ್ ಝಂಪಾ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ