Australia vs Afghanistan Test: ತಾಲಿಬಾನಿಗರಿಂದ ಮಹಿಳಾ ಕ್ರಿಕೆಟ್ ಬ್ಯಾನ್: ಆಸ್ಟ್ರೇಲಿಯಾ- ಅಫ್ಘಾನಿಸ್ತಾನ ಐತಿಹಾಸಿಕ ಟೆಸ್ಟ್ ಮುಂದೂಡಿಕೆ

| Updated By: Vinay Bhat

Updated on: Nov 05, 2021 | 11:14 AM

ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ ಅಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಐತಿಹಾಸಿಕ ಟೆಸ್ಟ್​ ಪಂದ್ಯವನ್ನು ಮುಂದೂಡಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ.

Australia vs Afghanistan Test: ತಾಲಿಬಾನಿಗರಿಂದ ಮಹಿಳಾ ಕ್ರಿಕೆಟ್ ಬ್ಯಾನ್: ಆಸ್ಟ್ರೇಲಿಯಾ- ಅಫ್ಘಾನಿಸ್ತಾನ ಐತಿಹಾಸಿಕ ಟೆಸ್ಟ್ ಮುಂದೂಡಿಕೆ
australia vs afghanistan test
Follow us on

ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗಳನ್ನು ಆಡಲು ಅವಕಾಶವಿಲ್ಲ ಎಂಬ ತಾಲಿಬಾನಿಗರ ಕಟ್ಟಪ್ಪಣೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ವಿರೋಧಿಸಿದೆ. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ನಡುವೆ ನಡೆಯಬೇಕಿದ್ದ ಐತಿಹಾಸಿಕ ಟೆಸ್ಟ್ (Australia vs Afghanistan Test) ಪಂದ್ಯವನ್ನು ಮುಂದೂಡಿದೆ. ಇದೇ ತಿಂಗಳು ಹೋಬಾರ್ಟ್​ನಲ್ಲಿ ಆಸೀಸ್-ಅಫ್ಘಾನ್ ನಡುವೆ ಟೆಸ್ಟ್ ಪಂದ್ಯ ನಡೆಯಬೇಕಿತ್ತು. ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (Cricket Australia) ಪಂದ್ಯ ಮುಂದೂಡಿ ಆದೇಶ ಹೊರಡಿಸಿದೆ.

ಈ ಹಿಂದೆ ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್, “ನಾನು ಮಹಿಳೆಯರು ಕ್ರಿಕೆಟ್ ಆಡಲು ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ, ಮಹಿಳೆಯರು ಕ್ರಿಕೆಟ್ ಆಡುವುದು ಅನಿವಾರ್ಯವಲ್ಲ. ಕ್ರಿಕೆಟ್​ನಲ್ಲಿ ಅವರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿ ಎದುರಿಸಬಹುದು. ಇಸ್ಲಾಂ ಈರೀತಿಯಾಗಿ ಮಹಿಳೆಯರನ್ನು ನೋಡಲು ಅನುಮತಿಸುವುದಿಲ್ಲ.ಇದು ಮಾಧ್ಯಮ ಯುಗ. ಫೋಟೋಗಳು ಮತ್ತು ವಿಡಿಯೋಗಳು ಇರುತ್ತವೆ. ನಂತರ ಜನರು ಇದನ್ನು ವೀಕ್ಷಿಸುತ್ತಾರೆ”ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ತಾಲಿಬಾನಿಗರಿಗೆ ವಾರ್ನಿಂಗ್ ನೀಡಿತ್ತು.“ಒಂದು ವೇಳೆ ತಾಲಿಬಾನಿಗರು ಕ್ರಿಡೆಯಲ್ಲಿ ಮಹಿಳೆಯರ ಮೇಲೆ ನಿಷೇಧ ಹೇರಿದರೆ ನಾವೂ ಅಫ್ಘಾನಿಸ್ತಾನದ ವಿರುದ್ಧ ಹೋಬರ್ಟ್​​​ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ರದ್ದು ಮಾಡಬೇಕಾಗುತ್ತದೆ. ಮಹಿಳೆಯರ ಕ್ರೀಡೆ ಅಭಿವೃದ್ಧಿಯನ್ನು ಬೆಂಬಲಿಸುವುದು ಆಸ್ಟ್ರೇಲಿಯಾದ ಕರ್ತವ್ಯವಾಗಿದೆ. ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆಗೆ ನಿಷೇಧ ಹೇರಿದ್ದು ನಿಜವೇ ಆದರೆ ನಾವೂ ಆಫ್ಘಾನಿಸ್ತಾನ ಪುರುಷರ ತಂಡದ ನಮ್ಮ ದೇಶಕ್ಕೆ ಪ್ರವಾಸವನ್ನು ರದ್ದುಗೊಳಿಸಬೇಕಾಗುತ್ತದೆ” ಎಂದು ಆಸ್ಟ್ರೇಲಿಯಾ ಖಡಕ್ ಆಗಿ ಸೂಚನೆ ನೀಡಿತ್ತು.

ಇದರ ಮುಂದುವರೆದ ಭಾಗವಾಗಿ ಸದ್ಯ ಕ್ರಿಕೆಟ್ ಆಸ್ಟ್ರೇಲಿಯಾ ಅಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಐತಿಹಾಸಿಕ ಟೆಸ್ಟ್​ ಪಂದ್ಯವನ್ನು ಮುಂದೂಡಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ. ತಾಲಿಬಾನಿಗರ ಕೆಲವು ನಿರ್ಧಾರಗಳು ಕ್ರಿಕೆಟ್ ಮೇಲೂ ಪರಿಣಾಮ ಬೀರುತ್ತಿದೆ. ತಾಲಿಬಾನ್ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ನಡುವಣ ಚೊಚ್ಚಲ ಟೆಸ್ಟ್ ಪಂದ್ಯ ರದ್ದಾಗುವುದು ಖಚಿತ.

India Probable Playing XI: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ಓರ್ವ ಆಟಗಾರ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

India vs Scotland: ಸ್ಕಾಟ್ಲೆಂಡ್ ವಿರುದ್ಧ ಮತ್ತೊಂದು ಅಗ್ನಿ ಪರೀಕ್ಷೆ: ಕೊಹ್ಲಿ ಬರ್ತ್​ ಡೇಗೆ ಗೆಲುವಿನ ಗಿಫ್ಟ್ ನೀಡುತ್ತಾ ಭಾರತ?

(Australia vs Afghanistan Test Cricket Australia confirmed on Friday it had postponed the Afghanistan Test in Hobart scheduled)