Asia Cup 2023: ಬಾಂಗ್ಲಾ ತಂಡದ ಮತ್ತೊಬ್ಬ ಸ್ಟಾರ್ ಬ್ಯಾಟರ್ ಏಷ್ಯಾಕಪ್‌ನಿಂದ ಔಟ್..!
Asia Cup 2023: ಏಷ್ಯಾಕಪ್ ಸನಿಹವಾಗುತ್ತಿದ್ದಂತೆ ಬಾಂಗ್ಲಾದೇಶ ತಂಡದ ಸಂಕಷ್ಟಗಳ ಪಟ್ಟಿ ಏರುತ್ತಲೆ ಸಾಗುತ್ತಿದೆ. ಈ ಮೊದಲು ಬಾಂಗ್ಲಾ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಇಂಜುರಿಯಿಂದಾಗಿ ಇಡೀ ಲೀಗ್ನಿಂದ ಹೊರಬಿದ್ದಿದ್ದರು. ಆ ಬಳಿಕ ವೇಗಿ ಇಬಾದತ್ ಹುಸೈನ್ ಕೂಡ ಇಂಜುರಿಯಿಂದ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ತಂಡದ ಸ್ಟಾರ್ ಓಪನರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
1 / 8
ಏಷ್ಯಾಕಪ್ ಸನಿಹವಾಗುತ್ತಿದ್ದಂತೆ ಬಾಂಗ್ಲಾದೇಶ ತಂಡದ ಸಂಕಷ್ಟಗಳ ಪಟ್ಟಿ ಏರುತ್ತಲೆ ಸಾಗುತ್ತಿದೆ. ಈ ಮೊದಲು ಬಾಂಗ್ಲಾ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಇಂಜುರಿಯಿಂದಾಗಿ ಇಡೀ ಲೀಗ್ನಿಂದ ಹೊರಬಿದ್ದಿದ್ದರು. ಆ ಬಳಿಕ ವೇಗಿ ಇಬಾದತ್ ಹುಸೈನ್ ಕೂಡ ಇಂಜುರಿಯಿಂದ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ತಂಡದ ಸ್ಟಾರ್ ಓಪನರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
2 / 8
ವರದಿ ಪ್ರಕಾರ, ಬಾಂಗ್ಲಾದೇಶದ ವಿಕೆಟ್‌ಕೀಪರ್-ಬ್ಯಾಟರ್ ಲಿಟ್ಟನ್ ದಾಸ್ ವೈರಲ್ ಜ್ವರದಿಂದ ಬಳಲುತ್ತಿದ್ದು, ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಈ ಬಲಗೈ ಬ್ಯಾಟರ್ ಬದಲಿಯಾಗಿ ಮತ್ತೊಬ್ಬ ಬಲಗೈ ಬ್ಯಾಟರ್ ಅನಾಮುಲ್ ಹಕ್ ಬಿಜೋಯ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
3 / 8
ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದ್ದು, ಅನಾರೋಗ್ಯದಿಂದಾಗಿ ಆರಂಭಿಕ ಬ್ಯಾಟರ್ ಲಿಟನ್ ದಾಸ್ ಲೀಗ್ನಿಂದ ಹೊರಗುಳಿದಿದ್ದಾರೆ. ಅವರ ಬದಲಿಯಾಗಿ ಬಂದಿರುವ ಅನಾಮುಲ್ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಹೀಗಾಗಿ ಲಿಟನ್ ಅಲಭ್ಯತೆಯನ್ನು ವಿಕೆಟ್ ಕೀಪಿಂಗ್ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್ ಸ್ಥಾನವನ್ನು ಅನಾಮುಲ್ ತುಂಬಲಿದ್ದಾರೆ ಎಂದು ತಿಳಿಸಿದೆ.
4 / 8
ಪ್ರಾಥಮಿಕವಾಗಿ ಆರಂಭಿಕರಾಗಿ ಅಥವಾ ಅಗ್ರ-ಮೂರರಲ್ಲಿ ಬ್ಯಾಟ್ ಮಾಡುವ ಬಿಜೋಯ್ ಬಾಂಗ್ಲಾದೇಶ ಪರ 44 ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿದಂತೆ 1254 ರನ್ ಬಾರಿಸಿದ್ದಾರೆ. ಬಿಜೋಯ್ ಬಾಂಗ್ಲಾ ಪರ ತಮ್ಮ ಕೊನಯೆ ಏಕದಿನ ಪಂದ್ಯವನ್ನು ಡಿಸೆಂಬರ್ 2022 ರಲ್ಲಿ ಭಾರತದ ವಿರುದ್ಧ ಆಡಿದ್ದರು.
5 / 8
ಇನ್ನು ಬಾಂಗ್ಲಾ ತಂಡದಿಂದ ಹೊರಬಿದ್ದಿರುವ ಲಿಟನ್ ದಾಸ್ ತಂಡದ ಸ್ಟಾರ್ ಬ್ಯಾಟರ್ ಆಗಿದ್ದು, 2022 ರಿಂದ 25 ಇನ್ನಿಂಗ್ಸ್‌ಗಳನ್ನಾಡಿರುವ ಲಿಟನ್ ಬರೋಬ್ಬರಿ 878 ರನ್ ಬಾರಿಸಿದ್ದಾರೆ. ಅಲ್ಲದೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡದ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ.
6 / 8
ಆಗಸ್ಟ್ 31 ರ ಗುರುವಾರದಂದು ಬಾಂಗ್ಲಾ ತಂಡ ತಮ್ಮ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾವನ್ನು ಎದುರಿಸಲಿದೆ. ಹೀಗಾಗಿ ಶಾಕಿಬ್ ಅಲ್ ಹಸನ್ ನೇತೃತ್ವದ ಬಾಂಗ್ಲಾ ತಂಡವು ಈ ಪಂದ್ಯಕ್ಕೂ ಮುನ್ನ ಲಿಟನ್ ಸ್ಥಾನವನ್ನು ತುಂಬಬಲ್ಲ ಆಟಗಾರರನ್ನು ಹುಡುಕಬೇಕಾಗಿದೆ.
7 / 8
ಇನ್ನು ಬಾಂಗ್ಲಾ ತಂಡ ಈ ಏಷ್ಯಾಕಪ್ನಲ್ಲಿ ಆರು ಬಾರಿಯ ಏಷ್ಯಾಕಪ್ ಚಾಂಪಿಯನ್ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಲಿಟ್ಟನ್ ಅನುಪಸ್ಥಿತಿಯಲ್ಲಿ, ರನ್ ಗಳಿಸುವ ಜವಾಬ್ದಾರಿಯು ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ ಅವರ ಹೆಗಲ ಮೇಲಿರುತ್ತದೆ.
8 / 8
ಬಾಂಗ್ಲಾದೇಶ ನೂತನ ತಂಡ: ಶಕೀಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೋಯ್, ಮುಶ್ಫಿಕುರ್ ರಹೀಮ್, ಅಫೀಫ್ ಹೊಸೈನ್ ಧ್ರುಬೋ, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ನಸುಮ್ ಅಹ್ಮದ್, ಶಕ್ಮಿಕ್ ಹಸನ್ ತಂಝೀದ್, ಹಸನ್ ತಮೀಮ್, ತಂಝಿಮ್ ಹಸನ್ ಸಾಕಿಬ್, ಅನಾಮುಲ್ ಹಕ್ ಬಿಜೋಯ್