- Kannada News Photo gallery Cricket photos Asia Cup 2023 Here is all the six teams ICC ODI rankings details in kannada
ಏಷ್ಯಾಕಪ್ ಆಡುತ್ತಿರುವ ಎಲ್ಲಾ 6 ತಂಡಗಳು ಏಕದಿನ ರ್ಯಾಂಕಿಂಗ್ನಲ್ಲಿ ಯಾವ ಸ್ಥಾನದಲ್ಲಿವೆ ಗೊತ್ತಾ?
Asia Cup 2023: ಈ ಏಷ್ಯಾಕಪ್‌ನಲ್ಲಿ ಆತಿಥೇಯ ಪಾಕಿಸ್ತಾನ, ಏಳು ಬಾರಿ ವಿಜೇತ ಭಾರತ, ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಸೇರಿದಂತೆ ಆರು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲ್ಲಿವೆ. ಇನ್ನು ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲಾ 6 ತಂಡಗಳು ಏಕದಿನ ರ್ಯಾಂಕಿಂಗ್ನಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ನೋಡುವುದಾದರೆ..
Updated on: Aug 30, 2023 | 9:27 AM

ಬುಧವಾರ, ಆಗಸ್ಟ್ 30 ರಂದು ಮುಲ್ತಾನ್‌ನ ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕರ್ಟನ್ ರೈಸರ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ನೇಪಾಳವನ್ನು ಎದುರಿಸುವುದರೊಂದಿಗೆ ಏಕದಿನ ಏಷ್ಯಾಕಪ್‌ಗೆ ಚಾಲನೆ ದೊರೆಯಲಿದೆ.

ಈ ಏಷ್ಯಾಕಪ್‌ನಲ್ಲಿ ಆತಿಥೇಯ ಪಾಕಿಸ್ತಾನ, ಏಳು ಬಾರಿ ವಿಜೇತ ಭಾರತ, ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ಸೇರಿದಂತೆ ಆರು ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲ್ಲಿವೆ.

ಇನ್ನು ಏಷ್ಯಾಕಪ್‌ನಲ್ಲಿ ಭಾಗವಹಿಸುತ್ತಿರುವ ಎಲ್ಲಾ 6 ತಂಡಗಳು ಏಕದಿನ ರ್ಯಾಂಕಿಂಗ್ನಲ್ಲಿ ಯಾವ ಸ್ಥಾನದಲ್ಲಿವೆ ಎಂಬುದನ್ನು ನೋಡುವುದಾದರೆ.. ಅಪ್ಘಾನ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಪಾಕಿಸ್ತಾನ 118 ರೇಟಿಂಗ್ಸ್ನೊಂದಿಗೆ ಅಗ್ರಸ್ಥಾನದಲ್ಲಿದೆ.

ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಒಟ್ಟು 113 ರೇಟಿಂಗ್ ಮತ್ತು 4081 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಶಕೀಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ 95 ರೇಟಿಂಗ್ ಮತ್ತು 2661 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಏಷ್ಯಾಕಪ್ನ ಹಾಲಿ ಚಾಂಪಿಯನ್ ಮತ್ತು ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳ ವಿಜೇತ ಶ್ರೀಲಂಕಾ 87 ರೇಟಿಂಗ್ ಮತ್ತು 2794 ಅಂಕಗಳೊಂದಿಗೆ ಏಣಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಏತನ್ಮಧ್ಯೆ, ಇತ್ತೀಚೆಗೆ ವೈಟ್-ಬಾಲ್ ಸರ್ಕ್ಯೂಟ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ಅಫ್ಘಾನಿಸ್ತಾನ 84 ರೇಟಿಂಗ್ ಮತ್ತು 1605 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ಕೇವಲ 35 ರೇಟಿಂಗ್ ಮತ್ತು 1396 ಅಂಕ ಹೊಂದಿರುವ ನೇಪಾಳ ಏಕದಿನ ರ್ಯಾಂಕಿಂಗ್ನಲ್ಲಿ 15 ನೇ ಸ್ಥಾನದಲ್ಲಿದೆ.



















