ಬಿಗ್ ಬ್ಯಾಷ್ ಲೀಗ್‌ನಲ್ಲಿ (BBL 2021-22) ಅತ್ಯುತ್ತಮ ಬ್ಯಾಟಿಂಗ್, ಬೌಲಿಂಗ್ ಮತ್ತು ಅದ್ಭುತ ಕ್ಯಾಚ್ಗಳ ಮೂಲಕ ಆಟಗಾರರು ಎಲ್ಲರ ಗಮನ ಸೆಳೆಯುತ್ತಿದೆ. ಆದರೆ ಬುಧವಾರ ನಡೆದ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು ಕೋಚ್ ಎಂಬುದೇ ವಿಶೇಷ. ಹೌದು, ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಚಾಲೆಂಜರ್ ಪಂದ್ಯದಲ್ಲಿ, ಸಿಡ್ನಿ ಸಿಕ್ಸರ್ಸ್ ಪರ ಸಹಾಯಕ ಕೋಚ್ ಕೂಡ ಕಣಕ್ಕಿಳಿದಿದ್ದರು. ಪಂದ್ಯ ಆರಂಭಕ್ಕೂ ಮುನ್ನ ಸಿಡ್ನಿ ಸಿಕ್ಸರ್ಸ್ ಓಪನರ್ ಮತ್ತು ವಿಕೆಟ್ ಕೀಪರ್ ಜೋಶ್ ಫಿಲಿಪೆಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಪ್ಲೇಯಿಂಗ್ 11 ನಿಂದ ಕೈ ಬಿಡುವುದು ಅನಿವಾರ್ಯವಾಗಿತ್ತು. ಆದರೆ ಬದಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಯಾರು ಇರಲಿಲ್ಲ. ಹೀಗಾಗಿ ತಂಡದ ಸಹಾಯಕ ಕೋಚ್ ಜೇ ಲ್ಯಾಂಟನ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ನೀಡಲಾಯಿತು.
ಅಂದಹಾಗೆ ಜೇ ಲ್ಯಾಂಟನ್ ಯಂಗ್ ಅ್ಯಂಡ್ ಎನರ್ಜಿಟಿಕ್ ಕೋಚ್ ಎಂಬುದು ಇಲ್ಲಿ ವಿಶೇಷ. ಅಂದರೆ ಲ್ಯಾಂಟನ್ ಅವರಿಗೆ ಕೇವಲ 31 ವರ್ಷ ಅಷ್ಟೇ. ಅವರು ಕಳೆದ ಸೀಸನ್ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಡ್ನಿ ಥಂಡರ್ ಪರ 5 ಪಂದ್ಯಗಳನ್ನು ಆಡಿದ್ದರು. ಆದರೆ ಕಳಪೆ ಪ್ರದರ್ಶನದಿಂದಾಗಿ ಈ ಬಾರಿ ಯಾವುದೇ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಅದರಂತೆ ಸಿಡ್ನಿ ಸಿಕ್ಸರ್ ತಂಡದ ಸಹಾಯಕ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಅದೃಷ್ಟ ಎಂಬಂತೆ ಕೋಚ್ ಆದ ಮೇಲೆ ತಂಡದಲ್ಲಿ ಅವಕಾಶ ಸಿಕ್ಕಿದೆ. ಜೋಶ್ ಫಿಲಿಪೆ ಸ್ಥಾನದಲ್ಲಿ ಸಿಡ್ನಿ ಸಿಕ್ಸರ್ ತಂಡದ ಆಟಗಾರನಾಗಿ ಜೇ ಲ್ಯಾಂಟನ್ ಕಣಕ್ಕಿಳಿದಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಅಡಿಲೇಡ್ ಸ್ಟ್ರೈಕರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು. 168 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸಿಡ್ನಿ ಸಿಕ್ಸರ್ ತಂಡವು 6 ವಿಕೆಟ್ ಕಳೆದುಕೊಂಡು 170 ರನ್ಗಳಿಸುವ ಮೂಲಕ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಜೋಶ್ ಫಿಲಿಫೆ ಭರ್ಜರಿಯಾಟ:
ಚಾಲೆಂಜರ್ ಪಂದ್ಯಕ್ಕೂ ಮುನ್ನ ಜೋಶ್ ಫಿಲಿಪೆ ನಿರ್ಗಮಿಸಿದ್ದು ಸಿಡ್ನಿ ಸಿಕ್ಸರ್ಸ್‌ಗೆ ಭಾರಿ ಹಿನ್ನಡೆ ಎಂದೇ ಹೇಳಬಹುದು. ಏಕೆಂದರೆ ಫಿಲಿಪೆ ಸಿಡ್ನಿ ಸಿಕ್ಸರ್ಸ್ ಪರ ಈ ಸೀಸನ್ನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 429 ರನ್ ಗಳಿಸಿದ್ದರು. ಭರ್ಜರಿ ಫಾರ್ಮ್ನಲ್ಲಿದ್ದ ಫಿಲಿಪೆ 140 ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ಕೊರೋನಾ ಕಾರಣದಿಂದ ಜೋಶ್ ಫಿಲಿಪೆ ಹೊರಬಿದ್ದಿದ್ದು ತಂಡಕ್ಕೆ ಹಿನ್ನಡೆಯಾಗಿದೆ.
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(BBL 2021-22: Josh Philippe gets COVID 19, Assistant coach Jay Lenton Played for Sydney Sixers)
Published On - 4:47 pm, Wed, 26 January 22