Rishabh Pant: ಪ್ರಬುದ್ಧತೆಯ ಕೊರತೆಯಿದೆ; ರಿಷಭ್ ಪಂತ್ ಮೇಲೆ ಹರಿಹಾಯ್ದ ಪಾಕ್ ಮಾಜಿ ಆಟಗಾರ
Rishabh Pant: ಪಂತ್ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಅವರು ಇಲ್ಲಿಯವರೆಗೆ ವಿಫಲರಾಗಿದ್ದಾರೆ. ಪಂತ್ ವಿಕೆಟ್ ನೀಡುವ ರೀತಿ ನಿಜಕ್ಕೂ ತುಂಬಾ ದುಃಖ ತಂದಿದೆ ಎಂದು ಕನೇರಿಯಾ ಹೇಳಿದ್ದಾರೆ.
ರಿಷಭ್ ಪಂತ್ ವಿಶ್ವ ಕ್ರಿಕೆಟ್ ಅನ್ನು ಆಳುವಷ್ಟು ಪ್ರತಿಭೆಯನ್ನು ಹೊಂದಿದ್ದಾರೆ. ಪಂತ್ ಪಂದ್ಯದ ದಿಕ್ಕನ್ನು ಕ್ಷಣಮಾತ್ರದಲ್ಲಿ ತಿರುಗಿಸುವ ಶಕ್ತಿಯನ್ನು ಹೊಂದಿದ್ದಾರೆ. ಆದರೆ ಅವರು ಔಟಾಗುವ ವಿಧಾನವು ಕ್ರಿಕೆಟ್ ಅಭಿಮಾನಿಗಳು ಮತ್ತು ತಜ್ಞರನ್ನು ಆಗಾಗ್ಗೆ ಅಸಮಾಧಾನಗೊಳಿಸುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿಯಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಮೂರನೇ ಏಕದಿನ ಪಂದ್ಯದಲ್ಲಿ ಮೊದಲ ಎಸೆತದಲ್ಲಿ ರಿಷಬ್ ಪಂತ್ ಔಟಾದರು. ಬಿಗ್ ಶಾಟ್ ಆಡುವ ಯತ್ನದಲ್ಲಿ ಅವರು ತಮ್ಮ ವಿಕೆಟ್ ಕಳೆದುಕೊಂಡರು. ಇವರ ವರ್ತನೆ ನೋಡಿ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ತೀವ್ರವಾಗಿ ಟೀಕಿಸಿದ್ದಾರೆ. ಪಂತ್ ಭಾರತ ತಂಡದ ನಂಬಿಕೆಯನ್ನು ಪದೇ ಪದೇ ಮುರಿಯುತ್ತಿದ್ದಾರೆ ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ.
ಡ್ಯಾನಿಶ್ ಕನೇರಿಯಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ನಾನು ಪಂತ್ ಬಗ್ಗೆ ತುಂಬಾ ನಿರಾಶೆಗೊಂಡಿದ್ದೇನೆ. ODI ಸರಣಿಯಲ್ಲಿ ಪಂತ್ರನ್ನು 4 ನೇ ಸ್ಥಾನಕ್ಕೆ ಕಳುಹಿಸಲಾಯಿತು, ಆದರೆ ತಂಡವು ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದು ಈ ಆರ್ಡರ್ನಲ್ಲಿ ಆಡಿಸಬಹುದಿತ್ತು. ಆದರೆ ತಂಡವು ಪಂತ್ ಮೇಲೆ ನಂಬಿಕೆ ಇಟ್ಟಿದೆ. ಹೀಗಾಗಿ ಅವರು ಜವಾಬ್ದಾರಿಯನ್ನು ಹೊರಬೇಕಿತ್ತು. ಆದರೆ ಪಂತ್ ಮುಂದೆ ಹೋಗಿ ಮೊದಲ ಎಸೆತದಲ್ಲಿಯೇ ಶಾಟ್ ಆಡಿದರು. ಇದು ಅತ್ಯಂತ ಬೇಜವಾಬ್ದಾರಿ ವರ್ತನೆ ಎಂದಿದ್ದಾರೆ.
ಪಂತ್ಗೆ ಪ್ರಬುದ್ಧತೆಯ ಕೊರತೆ – ಕನೇರಿಯಾ ಮುಂದುವರೆದು ಮಾತನಾಡಿದ ಡ್ಯಾನಿಶ್ ಕನೇರಿಯಾ, ಕೇಪ್ ಟೌನ್‌ನಲ್ಲಿ ಅದೇ ಸಮಯದಲ್ಲಿ ವಿಕೆಟ್ ಬಿದ್ದಿತ್ತು. ಜೊತೆಗೆ ಮಾಜಿ ನಾಯಕ ಕೊಹ್ಲಿ ಕೂಡ ಕ್ರೀಸ್‌ನ ಇನ್ನೊಂದು ತುದಿಯಲ್ಲಿ ನಿಂತಿದ್ದರು. ಹೀಗಾಗಿ ಆ ಸಮಯದಲ್ಲಿ ಪಂತ್, ಕೊಹ್ಲಿ ಕೊತೆಗೂಡಿ ಪಾಲುದಾರಿಕೆಯನ್ನು ರಚಿಸಬೇಕಿತ್ತು. ಆದರೆ ನಿಜವಾಗಿಯೂ ಪಂತ್ ತುಂಬಾ ಕಳಪೆ ಬ್ಯಾಟಿಂಗ್ ಮಾಡಿದರು. ನಾನು ಅವನ ಬಗ್ಗೆ ತುಂಬಾ ನಿರಾಶೆಗೊಂಡಿದ್ದೇನೆ. ಪಂತ್ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಡ್ಯಾನಿಶ್ ಕನೇರಿಯಾ ಹೇಳಿದ್ದಾರೆ. ಈ ವಿಷಯದಲ್ಲಿ ಅವರು ಇಲ್ಲಿಯವರೆಗೆ ವಿಫಲರಾಗಿದ್ದಾರೆ. ಪಂತ್ ವಿಕೆಟ್ ನೀಡುವ ರೀತಿ ನಿಜಕ್ಕೂ ತುಂಬಾ ದುಃಖ ತಂದಿದೆ ಎಂದು ಕನೇರಿಯಾ ಹೇಳಿದ್ದಾರೆ. ಅವರು ಸರಣಿಯುದ್ದಕ್ಕೂ ಉತ್ತಮವಾಗಿ ಆಡಿದರು. ಪಂತ್ ದೊಡ್ಡ ಆಟಗಾರ ಆದರೆ ಅಂತಹ ಅವಕಾಶವನ್ನು ಬಳಸಿಕೊಳ್ಳದಿರುವುದು ವಿಚಿತ್ರವಾಗಿದೆ. ಅವರು ತಮ್ಮ ಪ್ರಬುದ್ಧತೆಯನ್ನು ಹೆಚ್ಚಿಸಿಕೊಳ್ಳಬೇಕು. ನೀವು ನಿಮ್ಮ ದೇಶಕ್ಕಾಗಿ ಆಡುವಾಗ, ನೀವು ಜವಾಬ್ದಾರಿಯುತವಾಗಿ ಆಡಬೇಕು ಎಂದಿದ್ದಾರೆ.
ಏಕದಿನ ಸರಣಿಯ 3 ಪಂದ್ಯಗಳಲ್ಲಿ ರಿಷಬ್ ಪಂತ್ 33.66 ಸರಾಸರಿಯಲ್ಲಿ 101 ರನ್ ಗಳಿಸಿದ್ದಾರೆ. ಕೇಪ್ ಟೌನ್‌ನಲ್ಲಿ ಪಂತ್ ಗೋಲ್ಡನ್ ಡಕ್‌ನಲ್ಲಿ ಔಟಾದರು.ಡಿರಬಹುದು. ಈಗ ವೆಸ್ಟ್ ಇಂಡೀಸ್ ಸರಣಿ ಮುಂದಿದ್ದು, ಪಂತ್ ಈಗ ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:IND vs SA: 21 ವರ್ಷಗಳ ದಾಖಲೆ ಪುಡಿಪುಡಿ! ಶತಕ ವಂಚಿತರಾದರೂ ಗುರು ದ್ರಾವಿಡ್ ದಾಖಲೆ ಮುರಿದ ಪಂತ್