Dilruwan Perera: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾ ಸ್ಪಿನ್ನರ್ ದಿಲ್ರುವಾನ್

Dilruwan Perera: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಶ್ರೀಲಂಕಾ ಸ್ಪಿನ್ನರ್ ದಿಲ್ರುವಾನ್
Dilruwan Perera

Dilruwan Perera retirement: ದಿಲ್ರುವಾನ್ ಪೆರೇರಾ 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಏಳು ವರ್ಷಗಳ ನಂತರ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು.

TV9kannada Web Team

| Edited By: Zahir PY

Jan 26, 2022 | 5:07 PM

ಶ್ರೀಲಂಕಾದ ಕ್ರಿಕೆಟಿಗ ದಿಲ್ರುವಾನ್ ಪೆರೇರಾ (Dilruwan Perera) ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿರುವ ದಿಲ್ರುವಾನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಇದಾಗ್ಯೂ ದೇಶಿಯ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ದಿಲ್ರುವಾನ್ ಪೆರೇರಾ ಎಲ್ಲಾ ಮೂರು ಸ್ವರೂಪಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದರು. ಲಂಕಾ ಪರ 43 ಟೆಸ್ಟ್, 13 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದರು. ಈ ವೇಳೆ ಒಟ್ಟು 1456 ರನ್ ಹಾಗೂ 177 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಭಾರತದ ವಿರುದ್ಧ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇದಾಗ್ಯೂ ಟೀಮ್ ಇಂಡಿಯಾ ವಿರುದ್ದ ಹೆಚ್ಚಿನ ಯಶಸ್ಸು ಸಿಕ್ಕಿರಲಿಲ್ಲ. ಭಾರತದ ವಿರುದ್ದ ಆಡಿದ 6 ಟೆಸ್ಟ್​ ಪಂದ್ಯಗಳಿಂದ ಗಳಿಸಿದ್ದು ಕೇವಲ 10 ವಿಕೆಟ್ ಮಾತ್ರ.

ವಿಶೇಷ ಎಂದರೆ ಭಾರತದ ವಿರುದ್ದ ಶ್ರೀಲಂಕಾದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದ ದಿಲ್ರುವಾನ್ ಪೆರೇರಾ ಪಡೆದಿದ್ದು ಕೇವಲ 2 ವಿಕೆಟ್ ಮಾತ್ರ. ಅಷ್ಟೇ ಅಲ್ಲದೆ ದಿಲ್ರುವಾನ್ ಸ್ಪಿನ್​ ಅನ್ನು ಟೀಮ್ ಇಂಡಿಯಾ ಬ್ಯಾಟರ್​ಗಳು ನಿರಾಯಾಸವಾಗಿ ಎದುರಿಸಿದ್ದರು. ಇದಕ್ಕೆ ಸಾಕ್ಷಿಯೇ ಟೀಮ್ ಇಂಡಿಯಾ ವಿರುದ್ದ ಮೂರು ಟೆಸ್ಟ್‌ಗಳಲ್ಲಿ ಪೆರೇರಾ 68, 202 ಮತ್ತು 199 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಇನ್ನು ಭಾರತದ ವಿರುದ್ಧ ಒಂದು ಏಕದಿನ ಪಂದ್ಯವಾಡಿದ ದಿಲ್ರುವಾನ್ ಕೇವಲ ಒಂದು ವಿಕೆಟ್ ಮಾತ್ರ ಕಬಳಿಸಿದ್ದರು.

ದಿಲ್ರುವಾನ್ ಪೆರೇರಾ 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಏಳು ವರ್ಷಗಳ ನಂತರ ಶಾರ್ಜಾದಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಈ ವೇಳೆ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 95 ರನ್‌ಗಳ ಇನ್ನಿಂಗ್ಸ್ ಆಡಿ ಎಲ್ಲರ ಗಮನ ಸೆಳೆದಿದ್ದರು. ಒಟ್ಟಾರೆ ಅಂತಾರಾಷ್ಟ್ರೀಯ ಕೆರಿಯರ್​ನಲ್ಲಿ 43 ಟೆಸ್ಟ್‌ ಪಂದ್ಯಗಳಿಂದ ದಿಲ್ರುವಾನ್ ಪೆರೇರಾ ಒಟ್ಟು 161 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಗಾಲೆ ಟೆಸ್ಟ್‌ ಪಂದ್ಯವೊಂದರಲ್ಲಿ 78ಕ್ಕೆ 10 ವಿಕೆಟ್ ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಕಳೆದ ವರ್ಷ ಕೂಡ ಶ್ರೀಲಂಕಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ 39 ವರ್ಷದ ದಿಲ್ರುವಾನ್ ಪೆರೇರಾ ಇದೀಗ ನಿವೃತ್ತಿ ಘೋಷಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್​ ಮಂಡಳಿ ಆಟಗಾರರ ಆಯ್ಕೆಗಾಗಿ ಕಠಿಣ ಫಿಟ್​ನೆಸ್ ನೀತಿಯನ್ನು ಜಾರಿಗೊಳಿಸಿದ್ದು, ಹೀಗಾಗಿ ಫಿಟ್​ನೆಸ್ ಸಮಸ್ಯೆಯನ್ನು ಎದುರಿಸುತ್ತಿರುವ ಆಟಗಾರರು ನಿವೃತ್ತಿಯತ್ತ ಮುಖ ಮಾಡುತ್ತಿದ್ದಾರೆ.

ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ

ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್

(Dilruwan Perera retirement: Sri Lanka off spinner retires fron international cricket)

Follow us on

Related Stories

Most Read Stories

Click on your DTH Provider to Add TV9 Kannada