ಪ್ರಸ್ತುತ ವಿಶ್ರಾಂತಿಯಲ್ಲಿರುವ ಟೀಂ ಇಂಡಿಯಾ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಮತ್ತೆ ಕ್ರಿಕೆಟ್ ಅಂಗಳಕ್ಕೆ ಕಾಲಿಡಲಿದೆ. ಆ ನಂತರ ಭಾರತ ತಂಡ ಹಲವು ಸರಣಿಗಳಲ್ಲಿ ನಿರತವಾಗಿದೆ. ಈಗಾಗಲೇ ಬಿಸಿಸಿಐ ಕೂಡ ಟೀಂ ಇಂಡಿಯಾ ಈ ವರ್ಷ ಆಡಲಿರುವ ಸರಣಿಗಳ ವೇಳಾಪಟ್ಟಿಯನ್ನು ಸಹ ಖಚಿತಪಡಿಸಿದೆ. ಇದೀಗ ಬಿಸಿಸಿಐ, ಟೀಂ ಇಂಡಿಯಾದ ಮುಂದಿನ ವರ್ಷದ ವೇಳಾಪಟ್ಟಿಯನ್ನೂ ಸಹ ಬಿಡುಗಡೆಗೊಳಿಸಲು ಪ್ರಾರಂಭಿಸಿದ್ದು, ಅದರಂತೆ ಟೀಂ ಇಂಡಿಯಾ ಮುಂದಿನ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಆ ಐದು ಟೆಸ್ಟ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಇಂದು ಪ್ರಕಟಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಜೂನ್ 20 ರಿಂದ ಲೀಡ್ಸ್‌ನಲ್ಲಿ ನಡೆಯಲಿದ್ದು, ಕೊನೆಯ ಟೆಸ್ಟ್ ಜುಲೈ 31 ರಂದು ನಡೆಯಲಿದೆ. ಇದಲ್ಲದೆ ಈ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಬರ್ಮಿಂಗ್‌ಹ್ಯಾಮ್, ಲಾರ್ಡ್ಸ್ ಮತ್ತು ಮ್ಯಾಂಚೆಸ್ಟರ್ ಕೂಡ ಆತಿಥ್ಯವಹಿಸಲಿವೆ. ಪುರುಷರ ತಂಡದ ಜೊತೆಗೆ ಭಾರತ ಮಹಿಳಾ ತಂಡ ಕೂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಐದು ಟಿ20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಟಿ20 ಸರಣಿಯು ಜೂನ್ 28 ರಿಂದ ಜುಲೈ 12 ರವರೆಗೆ ನಡೆಯಲಿದ್ದು, ಜುಲೈ 16, 19 ಮತ್ತು 22 ರಂದು ಏಕದಿನ ಸರಣಿಯ ಪಂದ್ಯಗಳು ನಡೆಯಲಿವೆ.
Announced! 🥁
A look at #TeamIndia‘s fixtures for the 5⃣-match Test series against England in 2025 🙌#ENGvIND pic.twitter.com/wS9ZCVbKAt
— BCCI (@BCCI) August 22, 2024
𝗔𝗹𝗹 𝗦𝗲𝘁!👍 👍#TeamIndia‘s schedule for the 5⃣ T20Is and 3⃣ ODIs against England in 2025 ANNOUNCED 🗓️#ENGvIND pic.twitter.com/fb0tScY8cq
— BCCI Women (@BCCIWomen) August 22, 2024
ಇಂಗ್ಲೆಂಡ್ ಪ್ರವಾಸವು ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಕಳೆದ 17 ವರ್ಷಗಳಿಂದ ಟೀಂ ಇಂಡಿಯಾ, ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿಲ್ಲ. ಟೀಂ ಇಂಡಿಯಾ 2007ರಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆಯ ಟೆಸ್ಟ್ ಸರಣಿ ಜಯಿಸಿತ್ತು.ಆ ಬಳಿಕ 2021-22ರ ಇಂಗ್ಲೆಂಡ್ ಪ್ರವಾಸದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು 2-2 ರಲ್ಲಿ ಡ್ರಾ ಮಾಡಿಕೊಂಡಿತ್ತು. ಇನ್ನು ಕಳೆದ ಪ್ರವಾಸದಲ್ಲಿ ಭಾರತ 2-1 ರ ಮುನ್ನಡೆ ಕಾಯ್ದುಕೊಂಡಿತ್ತಾದರೂ ಕೊನೆಯ ಟೆಸ್ಟ್‌ನಲ್ಲಿ ಸೋತು ಸರಣಿಯನ್ನು ಡ್ರಾ ಮಾಡಿಕೊಂಡಿತು. ಇದಲ್ಲದೇ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡೂ ಫೈನಲ್‌ಗಳಲ್ಲಿ ಟೀಂ ಇಂಡಿಯಾ ಸೋತಿರುವುದರಿಂದ ರೋಹಿತ್ ಮತ್ತು ಗಂಭೀರ್ ಜೋಡಿಗೆ ಈ ಪ್ರವಾಸ ಸುಲಭವಲ್ಲ ಎಂಬುದು ಸ್ಪಷ್ಟವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Thu, 22 August 24