IND vs SL: ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಬಿದ್ದಿದ್ಯಾಕೆ? ಅಧಿಕೃತ ಮಾಹಿತಿ ನೀಡಿದ ಬಿಸಿಸಿಐ

| Updated By: ಪೃಥ್ವಿಶಂಕರ

Updated on: Jan 09, 2023 | 5:30 PM

IND vs SL: ಏಕದಿನ ಸರಣಿಯ ಮೊದಲ ಪಂದ್ಯದ ಸಲುವಾಗಿ ಟೀಂ ಇಂಡಿಯಾ ಆಟಗಾರರು ಗುವಾಹಟಿ ತಲುಪಿದ್ದರು. ಆದರೆ ಬುಮ್ರಾ ಮಾತ್ರ ತಂಡದೊಂದಿಗೆ ಪ್ರಯಾಣ ಬೆಳೆಸಿರಲಿಲ್ಲ.

IND vs SL: ಜಸ್ಪ್ರೀತ್ ಬುಮ್ರಾ ತಂಡದಿಂದ ಹೊರಬಿದ್ದಿದ್ಯಾಕೆ? ಅಧಿಕೃತ ಮಾಹಿತಿ ನೀಡಿದ ಬಿಸಿಸಿಐ
ಜಸ್ಪ್ರೀತ್ ಬುಮ್ರಾ
Follow us on

ಶ್ರೀಲಂಕಾ ವಿರುದ್ಧದ (India Vs Sri Lanka) ಏಕದಿನ ಸರಣಿಯಿಂದ ಜಸ್ಪ್ರೀತ್ ಬುಮ್ರಾ (Jasprit Bumrah) ಹೊರಗುಳಿಯಲ್ಲಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಐ (BCCI) ಸೋಮವಾರ ಖಚಿತಪಡಿಸಿದೆ. ಇದರೊಂದಿಗೆ ಬುಮ್ರಾ ಅವರನ್ನು ಕೈಬಿಡಲು ಕಾರಣವನ್ನೂ ಮಂಡಳಿ ನೀಡಿದೆ. ವಾಸ್ತವವಾಗಿ, ಈ ಹಿಂದೆ, ಬಿಸಿಸಿಐ ಕೊನೆಯ ಸಂದರ್ಭದಲ್ಲಿ ಬುಮ್ರಾರನ್ನು ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ಆಯ್ಕೆಯಾದ ಕೇವಲ 6 ದಿನಗಳ ನಂತರ ಬುಮ್ರಾರನ್ನು ತಂಡದಿಂದ ಹೊರಗಿಡುವ ನಿರ್ಧಾರಕ್ಕೆ ಬಿಸಿಸಿಐ ಬಂದಿದೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಬುಮ್ರಾ ಅವರನ್ನು ಹೊರಗಿಡಲಾಗಿದೆ ಎಂದು ಹೇಳಿಕೆ ನೀಡಿರುವ ಬಿಸಿಸಿಐ, ಹೊರಗಿಡಲು ಏನು ಕಾರಣ ಎಂಬುದನ್ನು ವಿವರಿಸಿದೆ.

ಬಿಸಿಸಿಐ ತನ್ನ ಹೇಳಿಕೆಯಲ್ಲಿ, “ಶ್ರೀಲಂಕಾ ವಿರುದ್ಧದ ಮುಂಬರುವ 3 ಪಂದ್ಯಗಳ ಏಕದಿನ ಸರಣಿಯಿಂದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೊರಗುಳಿಯಲಿದ್ದಾರೆ. ಏಕದಿನ ಸರಣಿಗೆ ಮುನ್ನ ಗುವಾಹಟಿಯಲ್ಲಿ ತಂಡವನ್ನು ಸೇರಿಕೊಳ್ಳಬೇಕಾಗಿದ್ದ ಬುಮ್ರಾ, ಚೇತರಿಸಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಆಯ್ಕೆ ಸಮಿತಿಯು ಬುಮ್ರಾ ಬದಲಿಗೆ ಬೇರೆ ಯಾವ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡುವ ಯೋಚನೆ ನಡೆಸಿಲ್ಲ ಎಂದು ಹೇಳಿದೆ.

ಇದೀಗ ಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಬುಮ್ರಾ, ಜನವರಿ 18 ರಂದು ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ವೈಟ್-ಬಾಲ್ ಹೋಮ್ ಸರಣಿಗೆ ಲಭ್ಯವಿರುತ್ತಾರಾ? ಹಾಗೂ ಫೆಬ್ರವರಿ 9 ರಂದು ಪ್ರಾರಂಭವಾಗುವ ನಾಲ್ಕು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ತಂಡದ ಪರ ಕಣಕ್ಕಿಳಿಯುತ್ತಾರಾ ಎಂಬುದರ ಕುರಿತು ಈಗ ಪ್ರಶ್ನೆ ಮೂಡಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಸಿಎಸ್​ಕೆ ಆಲ್​ರೌಂಡರ್..!

ಬುಮ್ರಾಗೆ ಕಾಡುತ್ತಿರುವ ಇಂಜುರಿ ಸಮಸ್ಯೆ

ಏಕದಿನ ಸರಣಿಯ ಮೊದಲ ಪಂದ್ಯದ ಸಲುವಾಗಿ ಟೀಂ ಇಂಡಿಯಾ ಆಟಗಾರರು ಗುವಾಹಟಿ ತಲುಪಿದ್ದರು. ಆದರೆ ಬುಮ್ರಾ ಮಾತ್ರ ತಂಡದೊಂದಿಗೆ ಪ್ರಯಾಣ ಬೆಳೆಸಿರಲಿಲ್ಲ. ಬಳಿಕ ಬುಮ್ರಾ ಏಕದಿನ ಸರಣಿಯನ್ನು ಆಡುವುದಿಲ್ಲ ಎಂಬ ಸುದ್ದಿ ಬರಲಾರಂಭಿಸಿತು. ಈಗ ಸಂಜೆಯ ಹೊತ್ತಿಗೆ ಬಿಸಿಸಿಐ ಕೂಡ ಇದನ್ನು ಖಚಿತಪಡಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಕ್ರಿಕೆಟ್​ನಿಂದ ದೂರ ಉಳಿದಿರುವ ಬುಮ್ರಾಗೆ ಬೆನ್ನುನೋವಿನಿಂದಾಗಿ ವಿಶ್ವಕಪ್ ಸಹ ಆಡಲು ಸಾಧ್ಯವಾಗಲಿಲ್ಲ.

ಮೂವರನ್ನು ಒಟ್ಟಿಗೆ ನೋಡಲು ಕಾತರರಾಗಿದ್ದ ಫ್ಯಾನ್ಸ್

ಇಂಜುರಿಯಿಂದಾಗಿ ಎನ್​ಸಿಎ ಸೇರಿಕೊಂಡಿದ್ದ ಬುಮ್ರಾ, ಅಲ್ಲಿ ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಬುಮ್ರಾ ಫಿಟ್ ಎಂದು ಎನ್​ಸಿಎ ಸರ್ಟಿಫಿಕೆಟ್ ನೀಡಿತ್ತು. ಇದರ ನಂತರವೇ ಮಂಡಳಿಯು ಬುಮ್ರಾ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಂಡಿತು. ಆದರೆ ಈಗ ಅವರಿಗೆ ಸ್ವಲ್ಪ ಸಮಯ ನೀಡಲು ನಿರ್ಧರಿಸಿದೆ. ಇದರೊಂದಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಬುಮ್ರಾ ಬಹುಕಾಲದ ನಂತರ ಒಟ್ಟಿಗೆ ಏಕದಿನ ಪಂದ್ಯ ಆಡುವುದನ್ನು ನೋಡಲು ಕಾತರರಾಗಿದ್ದ ಅಭಿಮಾನಿಗಳ ನಿರೀಕ್ಷೆಯೂ ಹುಸಿಯಾಗಿದೆ. ಕಳೆದ 3 ವರ್ಷಗಳಲ್ಲಿ, ಈ ಮೂವರು ಇದುವರೆಗೆ ಏಕದಿನ ಪಂದ್ಯಗಳಲ್ಲಿ ಒಮ್ಮೆ ಮಾತ್ರ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ