India T20 WC squad: ಟಿ20 ವಿಶ್ವಕಪ್ 2021 ರಲ್ಲಿ ಸ್ಥಾನ ಪಡೆದಿದ್ದ 6 ಆಟಗಾರರು ಈ ಬಾರಿ ಮಿಸ್: ಯಾರೆಲ್ಲ..?

| Updated By: Vinay Bhat

Updated on: Sep 13, 2022 | 9:06 AM

BCCI: ಈ ಬಾರಿ ಐಸಿಸಿ ಟಿ20 ವಿಶ್ವಕಪ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ (BCCI) ಕಳೆದ ವರ್ಷ ಆಯ್ಕೆ ಮಾಡಿದ ತಂಡದಿಂದ 6 ಆಟಗಾರರು ಕೈಬಿಟ್ಟು ಹೊಸ ಪ್ಲೇಯರ್ಸ್ ಅನ್ನು ಸೇರಿಸಿದೆ.

India T20 WC squad: ಟಿ20 ವಿಶ್ವಕಪ್ 2021 ರಲ್ಲಿ ಸ್ಥಾನ ಪಡೆದಿದ್ದ 6 ಆಟಗಾರರು ಈ ಬಾರಿ ಮಿಸ್: ಯಾರೆಲ್ಲ..?
India Squad T20 World Cup
Follow us on

ಬಹುನಿರೀಕ್ಷಿತ ಟಿ20 ವಿಶ್ವಕಪ್ (ICC T20 World Cup) ಮಹಾ ಟೂರ್ನಿಗೆ ಬಿಸಿಸಿಐ 15 ಸದಸ್ಯರ ಭಾರತ ಕ್ರಿಕೆಟ್ ತಂಡವನ್ನು (Team India) ಪ್ರಕಟ ಮಾಡಿದೆ. ಕಳೆದ ವರ್ಷ ಕೊರೊನಾ ಕಾರಣದಿಂದ ಯುಎಇನಲ್ಲಿ ನಡೆದಿದ್ದ ಟೂರ್ನಿ ಈ ಬಾರಿ ಕಾಂಗರೂಗಳ ನಾಡಿನಲ್ಲಿ ಆಯೋಜಿಸಲಾಗಿದೆ. ಆಸ್ಟ್ರೇಲಿಯಾ ವಾತವರಣಕ್ಕೆ ತಕ್ಕಂತೆ ಆಟಗಾರರು ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಟಿ20 ವಿಶ್ವಕಪ್​ನಲ್ಲಿ ಭಾರತ ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಹೀಗಾಗಿ ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ (BCCI) ಕಳೆದ ವರ್ಷ ಆಯ್ಕೆ ಮಾಡಿದ ತಂಡದಿಂದ 6 ಆಟಗಾರರು ಕೈಬಿಟ್ಟು ಹೊಸ ಪ್ಲೇಯರ್ಸ್ ಅನ್ನು ಸೇರಿಸಿದೆ.

ಐಸಿಸಿ ಟಿ20 ವಿಶ್ವಕಪ್ 2021 ರಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್, ರಾಹುಲ್ ಚಹರ್,, ವರುಣ್ ಚಕ್ರವರ್ತಿ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜಾ ಈ ಬಾರಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಇದರಲ್ಲಿ ರವೀಂದ್ರ ಜಡೇಜಾ ಇಂಜುರಿಯಿಂದಾಗಿ ತಂಡದಿಂದ ಹೊರಬಿದ್ದರೆ, ಉಳಿದ ಆಟಗರರನ್ನು ಕೈಬಿಡಲಾಗಿದೆ. ಶಮಿ ನೇರವಾಗಿ ತಂಡಕ್ಕೆ ಆಯ್ಕೆಯಾಗದೆ ಸ್ಟ್ಯಾಂಡ್‌ಬೈ ಆಟಗಾರರ ಪಟ್ಟಟಿಯಲ್ಲಷ್ಟೆ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ
Dinesh Karthik: ಟಿ20 ವಿಶ್ವಕಪ್​ಗೆ ಆಯ್ಕೆಯಾದ ತಕ್ಷಣ ದಿನೇಶ್ ಕಾರ್ತಿಕ್ ಮಾಡಿದ ಟ್ವೀಟ್ ಏನು ನೋಡಿ
ICC Award: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಜಿಂಬಾಬ್ವೆ ಆಟಗಾರ..!
ರಿಜ್ವಾನ್ ಬದಲಿಗೆ ಸರ್ಫರಾಜ್​ಗೆ ಅವಕಾಶ; ಪಾಕ್ ತಂಡದ ಅರ್ಧದಷ್ಟು ಆಟಗಾರರಿಗೆ ಕೋಕ್..!
ರಾಂಚಿ ಕ್ರಿಕೆಟ್ ಕ್ರೀಡಾಂಗಣದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಕೋಚ್; ಸ್ಥಿತಿ ಗಂಭೀರ

ಇಳಿದಂತೆ ಕಳೆದ ವರ್ಷದ ತಂಡಕ್ಕೆ ಹೋಲಿಸಿದರೆ ಈ ಬಾರಿ ದಿನೇಶ್ ಕಾರ್ತಿಕ್, ದೀಪಕ್ ಹೂಡ, ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್, ಅರ್ಶ್​ದೀಪ್ ಸಿಂಗ್ ಹಾಗೂ ಅಕ್ಷರ್ ಪಟೇಲ್15 ಸದಸ್ಯರ ತಂಡಲ್ಲಿ ಕಾಣಿಸಿಕೊಂಡಿದ್ದಾರೆ.

ಕನಸು ನನಸಾದಾಗ:

2007 ರಲ್ಲಿ ನಡೆದ ಟಿ20 ವಿಶ್ವಕಪ್​ನ ಉದ್ಘಾಟನಾ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿದ್ದ ದಿನೇಶ್ ಕಾರ್ತಿಕ್ ಈ ಬಾರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕಾರ್ತಿಕ್ ಬಹಳ ಸಮಯದ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಕಾರ್ತಿಕ್ ಟ್ವಿಟರ್​ನಲ್ಲಿ ‘ಕನಸುಗಳು ನನಸಾಗುತ್ತವೆ‘ ಎಂದು ಬರೆದು ಬ್ಲೂ ಹಾರ್ಟ್ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ. ಇದು ದಿನೇಶ್ ಕಾರ್ತಿಕ್‌ಗೆ ಮಾತ್ರವಲ್ಲ ಅವರ ಆಟವನ್ನು ಮೆಚ್ಚಿಕೊಂಡ ಅಭಿಮಾನಿಗಳಿಗೂ ಖುಷಿ ನೀಡಿದೆ.

 

ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್​ಪ್ರೀತ್ ತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್​ದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ದೀಪಕ್ ಚಹಾರ್, ರವಿ ಬಿಷ್ಣೋಯ್.

Published On - 9:06 am, Tue, 13 September 22