ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಸದ್ಯ ಇವರು ಐಸೋಲೇಷನ್ನಲ್ಲಿದ್ದಾರೆ. ಈ ಬಗ್ಗೆ ಪಿಟಿಐ ವರದಿ ಮಾಡಿದ್ದು, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರಿಗೂ ಕೊರೊನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರೋದಾಗಿ ಹೇಳಿದೆ. ಇತ್ತೀಚೆಗಷ್ಟೆ ಸೌರವ್ ಹಿರಿಯ ಸಹೋದರ ಮತ್ತು ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸ್ನೇಹಾಶೀಷ್ ಗಂಗೂಲಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು.
ಗಂಗೂಲಿ ಅವರಿಗೆ ಕೋವಿಡ್ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದರು. ಇದೀಗ ವರದಿ ಬಂದಿದ್ದು ವರದಿ ಪಾಸಿಟಿವ್ ಕಂಡುಬಂದಿದೆ. ಇದು ಎರಡನೇ ಬಾರಿಗೆ ಗಂಗೂಲಿಗೆ ಕೊರೋನಾ ಸೋಂಕು ತಗುಲಿರುವುದು. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ತಲೆ ಸುತ್ತು, ವಾಕರಿಕೆ ಇರುವ ಕಾರಣ ಗಂಗೂಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೇಶಾದ್ಯಂತ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂದಿದ್ದರೂ ಮೂರನೇ ಅಲೆಯ ಭೀತಿ ಹೆಚ್ಚಾಗಿದೆ. ಅದರಲ್ಲೂ ಒಮೈಕ್ರಾನ್ ರೂಪಾಂತರಿಯ ಆತಂಕ ಈಗ ವಿಶ್ವದೆಲ್ಲೆಡೆಯಿದ್ದು ಭಾರತಲ್ಲಿಯೂ ಒಮಿಕ್ರಾನ್ ರೂಪಾಂತರಿ ವೈರಸ್ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಅತಂಕವಿದೆ.
India vs South Africa: ಮೂರನೇ ದಿನಕ್ಕೂ ಇದೆಯೇ ಮಳೆಯ ಕಾಟ?: ಸೆಂಚುರಿಯನ್ ವಾತಾವರಣ ಹೇಗಿದೆ?
(BCCI president Sourav Ganguly has tested positive for COVID-19)
Published On - 9:57 am, Tue, 28 December 21