ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ಕಾರ್ಲೋಸ್ ಬ್ರಾಥ್‌ವೇಟ್ ತಪ್ಪೊಂದನ್ನು ಮಾಡಿ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಬರ್ಮಿಂಗ್ ಹ್ಯಾಮ್ ಬೇರ್ಸ್ ಮತ್ತು ಡರ್ಬಿಶೈರ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಬರ್ಮಿಂಗ್‌ಹ್ಯಾಮ್ ತಂಡದ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಡರ್ಬಿಶೈರ್ ತಂಡದ ಸ್ಕೋರ್ ಒಂದು ವಿಕೆಟ್‌ಗೆ 111 ರನ್ ಆಗಿತ್ತು. ಇದೇ ವೇಳೆ ನಾಯಕ ಚೆಂಡನ್ನು ವೆಸ್ಟ್ ಇಂಡೀಸ್ ಕ್ರಿಕೆಟಿಗೆ ಕಾರ್ಲೋಸ್ ಬ್ರಾಥ್‌ವೇಟ್ ಕೈಗಿತ್ತರು.
13ನೇ ಓವರ್ ಎಸೆದ ಬ್ರಾಥ್‌ವೇಟ್ ಎಸೆತವನ್ನು ಬ್ಯಾಟ್ಸ್‌ಮನ್ ವೇಯ್ನ್ ಮ್ಯಾಡ್ಸೆನ್ ಬೌಲರ್ ಕಡೆಗೆ ಬಾರಿಸಿ 1 ರನ್ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ಈ ಮಧ್ಯೆ ಬ್ರಾಥ್‌ವೇಟ್ ಚೆಂಡನ್ನು ಎತ್ತಿಕೊಂಡು ವಿಕೆಟ್ ಕಡೆಗೆ ಹೊಡೆದರು. ಆದರೆ ಚೆಂಡು ನೇರವಾಗಿ ಬ್ಯಾಟ್ಸ್‌ಮನ್ ಮ್ಯಾಡ್ಸೆನ್‌ಗೆ ಬಡಿದಿದೆ. ಇದಾದ ಬಳಿಕ ಅಂಪೈರ್‌ಗಳು ಬ್ರಾಥ್‌ವೇಟ್ ನಡೆಗೆ ಬರ್ಮಿಂಗ್‌ಹ್ಯಾಮ್ ತಂಡಕ್ಕೆ 5 ರನ್‌ಗಳ ದಂಡ ವಿಧಿಸಿದರು.
ಕ್ರಿಕೆಟ್‌ನ ಕಾನೂನು ರೂಪಿಸುವ ಸಂಸ್ಥೆಯಾದ MCC ಯ ಅನ್‌ಫೇರ್ ಪ್ಲೇ ನಿಯಮಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಯಿತು. ಅದರಂತೆ ಬ್ರಾಥ್‌ವೇಟ್ ನೇರವಾಗಿ ಬ್ಯಾಟ್ಸ್‌ಮನ್ ಅನ್ನು ಗುರಿಯಾಗಿಸಿ ಚೆಂಡೆಸೆದಿದ್ದಾರೆ ಎಂದು ಎದುರಾಳಿ ತಂಡಕ್ಕೆ 5 ರನ್‌ಗಳನ್ನು ನೀಡಲಾಯಿತು. ನಿಯಮ 42.3.1 ಪ್ರಕಾರ ಆಟಗಾರ, ಅಂಪೈರ್ ಅಥವಾ ಇತರ ಯಾವುದೇ ವ್ಯಕ್ತಿಯ ಮೇಲೆ ಅವಿವೇಕದ ಮತ್ತು ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆಯುವ ಘಟನೆ ನಡೆದರೆ, ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅಲ್ಲದೆ ಇದನ್ನು ಗಮನಿಸಿದ ಅಂಪೈರ್‌ಗಳು ತಕ್ಷಣವೇ ಕ್ರಮ ಕೈಗೊಳ್ಳುವ ಅವಕಾಶವನ್ನೂ ಕೂಡ ಹೊಂದಿದ್ದಾರೆ.
ಬ್ಯಾಟ್ಸ್‌ಮನ್ ಕ್ರೀಸ್ನಲ್ಲಿದ್ದರೂ ಅವರನ್ನು ಗುರಿಯಾಗಿಸಿ ಕಾರ್ಲೋಸ್ ಬ್ರಾಥ್‌ವೈಟ್ ಚೆಂಡೆಸೆದಿದ್ದಾರೆ. ಇದನ್ನು ಅಂಪೈರ್‌ಗಳು ಅಸಡ್ಡೆ ಎಂದು ಪರಿಗಣಿಸಿ ಕಾರ್ಲೋಸ್ ಬ್ರಾಥ್‌ವೇಟ್ ಅವರ ನಡೆಗೆ ಶಿಕ್ಷೆಯ ರೂಪದಲ್ಲಿ 5 ರನ್‌ಗಳನ್ನು ನೀಡಲಾಯಿತು.
Not ideal for Carlos Brathwaite ?
A 5-run penalty was given against the Bears after this incident…#Blast22 pic.twitter.com/pXZLGcEGYa
— Vitality Blast (@VitalityBlast) June 19, 2022
ಇಂತಹ ನಡೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಬೌಲರ್‌ಗೆ ಈ ವಿಷಯದಲ್ಲಿ ಡಿಮೆರಿಟ್ ಅಂಕಗಳೊಂದಿಗೆ ದಂಡವನ್ನೂ ವಿಧಿಸಲಾಗುತ್ತದೆ. ಐಪಿಎಲ್‌ನಲ್ಲಿ ಆಟಗಾರನಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಲಾಗುತ್ತಿದೆ. ಆದರೆ ಟಿ20 ಬ್ಲಾಸ್ಟ್ ಮತ್ತು ಪಾಕಿಸ್ತಾನ್ ಸೂಪರ್ ಲೀಗ್ ಎಂಸಿಸಿ ಈ ನಿಯಮವನ್ನು ಅಳವಡಿಸಿಕೊಂಡಿವೆ. ಇದರಿಂದ ಬ್ರಾಥ್‌ವೇಟ್ ಮತ್ತು ಅವರ ತಂಡಕ್ಕೆ 5 ರನ್‌ಗಳ ಶಿಕ್ಷೆ ವಿಧಿಸಲಾಯಿತು. ಇನ್ನು ಈ ಪಂದ್ಯದಲ್ಲಿ ಬರ್ಮಿಂಗ್‌ಹ್ಯಾಮ್ ಬೇರ್ಸ್ ನೀಡಿದ 160 ರನ್‌ಗಳ ಗುರಿಯನ್ನು ಡರ್ಬಿಶೈರ್ ತಂಡವು 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಚೇಸ್ ಮಾಡುವ ಮೂಲಕ ಭರ್ಜರಿ ಜಯ ಸಾಧಿಸಿತು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:46 pm, Tue, 21 June 22