ಕ್ಯಾಚ್ ಹಿಡಿಯುವ ವೇಳೆ ಅವಘಡ; 4 ಹಲ್ಲುಗಳನ್ನು ಮುರಿದುಕೊಂಡ ಲಂಕಾ ಬೌಲರ್! ವಿಡಿಯೋ ನೋಡಿ

| Updated By: ಪೃಥ್ವಿಶಂಕರ

Updated on: Dec 08, 2022 | 10:58 AM

ಕೂಡಲೇ ಕರುಣಾರತ್ನೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಶಸ್ತ್ರಚಿಕಿತ್ಸೆಗಾಗಿ ಅವರನ್ನು ತಕ್ಷಣ ಗಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ.

ಕ್ಯಾಚ್ ಹಿಡಿಯುವ ವೇಳೆ ಅವಘಡ; 4 ಹಲ್ಲುಗಳನ್ನು ಮುರಿದುಕೊಂಡ ಲಂಕಾ ಬೌಲರ್! ವಿಡಿಯೋ ನೋಡಿ
ಕ್ಯಾಚ್ನ ಹಿಡಿಯುವ ವೇಳೆ ಹಲ್ಲು ಮುರಿದುಕೊಂಡ ಲಂಕಾ ಆಟಗಾರ
Follow us on

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಆದರೆ, ಕೆಲವೊಮ್ಮೆ ಕ್ಯಾಚ್ ಹಿಡಿಯುವ ವೇಳೆ ಆಟಗಾರನ ಎಡವಟ್ಟಿನಿಂದ ಆಗುವ ಅನಾಹುತಗಳಿಗೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ. ಈಗ ಅಂತಹದ್ದೇ ಘಟನೆಯೊಂದು ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ (lanka premier league) ನಡೆದಿದೆ. ಈ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಶ್ರೀಲಂಕಾ ಕ್ರಿಕೆಟಿಗ ಚಮಿಕಾ ಕರುಣಾರತ್ನೆಗೆ (Chamika Karunaratne) ಗಂಭೀರ ಗಾಯವಾಗಿದ್ದು, ಈ ಅವಘಡದಲ್ಲಿ ಕರುಣಾರತ್ನೆ ಅವರ 4 ಹಲ್ಲುಗಳು ಮುರಿದಿವೆ. ನವೆಂಬರ್ 7 ರಂದು ನಡೆದ ಈ ಪಂದ್ಯದಲ್ಲಿ ಚಾಮಿಕಾ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿ ಏನೋ ಆದರು. ಆದರೆ ಈ ಪ್ರಯತ್ನದಲ್ಲಿ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಬೇಕಾಯಿತು.

ನಾಲ್ಕನೇ ಓವರ್​ನಲ್ಲಿ ಈ ಅವಘಡ

ವಾಸ್ತವವಾಗಿ, ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಗಾಲ್ ಗ್ಲಾಡಿಯೇಟರ್ಸ್ ಮತ್ತು ಕ್ಯಾಂಡಿ ಫಾಲ್ಕನ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಅವಘಡ ಸಂಭವಿಸಿದೆ. ಈ ವೇಳೆ ಚಾಮಿಕಾ ಕರುಣಾರತ್ನೆ ಕ್ಯಾಂಡಿ ಫಾಲ್ಕನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಗಾಲೆ ಗ್ಲಾಡಿಯೇಟರ್ಸ್ ಮೊದಲು ಬ್ಯಾಟ್ ಮಾಡಲಾರಂಭಿಸಿತು. ಕ್ಯಾಂಡಿ ಫಾಲ್ಕನ್ಸ್ ತಂಡದ ಪರ ಕೆರಿಬಿಯನ್ ಬೌಲರ್ ಬ್ರೈತ್‌ವೈಟ್ ಅವರ ಇನ್ನಿಂಗ್ಸ್‌ನ ನಾಲ್ಕನೇ ಓವರ್​ನಲ್ಲಿ ಈ ಅವಘಡ ಸಂಭವಿಸಿತು. ಓವರ್​ನ ಮೊದಲ ಎಸೆತವನ್ನು ಎದುರಿಸಿದ ನುವಿಂದು ಫೆರ್ನಾಂಡೋ ಗಾಳಿಯಲ್ಲಿ ಬಿಗ್ ಶಾಟ್ ಆಡಿದರು.

ಇದನ್ನೂ ಓದಿ: Rohit Sharma Record: ಬ್ಯಾಂಡೇಜ್‌ ತೊಟ್ಟು ಮೈದಾನಕ್ಕಿಳಿದು ಸಿಕ್ಸರ್​ಗಳ ದಾಖಲೆ ಬರೆದ ರೋಹಿತ್ ಶರ್ಮಾ

4 ಹಲ್ಲುಗಳು ಮುರಿದಿವೆ

ಈ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಚಮಿಕಾ ಕರುಣಾರತ್ನೆ ಓಡಿ ಬಂದು ಅದ್ಭುತ ಕ್ಯಾಚ್ ತೆಗೆದುಕೊಂಡಿದ್ದಾರೆ. ಆದರೆ ಕ್ಯಾಚ್ ಹಿಡಿಯುವ ವೇಳೆ ಚೆಂಡು ಅವರ ಬಾಯಿಯ ಮೇಲೆ ಬಿದ್ದಿದೆ. ಚೆಂಡು ಬಿದ್ದ ರಭಸಕ್ಕೆ ಕರುಣರತ್ನೆ ಅವರ ಮುಂಭಾಗದ 4 ಹಲ್ಲುಗಳು ಮುರಿದಿವೆ. ಆರಂಭದಲ್ಲಿ ಈ ಘಟನೆ ಬಗ್ಗೆ ಏನು ಅರಿಯದ ಆಟಗಾರರು ಸಂಭ್ರಮಿಸಲು ಆರಂಭಿಸಿದ್ದಾರೆ. ಆದರೆ ಆ ನಂತರ ಕರುಣಾರತ್ನೆ ಅವರ ಬಾಯಿಯಿಂದ ಧಾರಕಾರವಾಗಿ ರಕ್ತ ಸುರಿಯುವುದನ್ನು ನೋಡಿ ಸಹ ಆಟಗಾರರು ದಂಗಾಗಿ ಹೋಗಿದ್ದಾರೆ.

ಕೂಡಲೇ ಕರುಣಾರತ್ನೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಶಸ್ತ್ರಚಿಕಿತ್ಸೆಗಾಗಿ ಅವರನ್ನು ತಕ್ಷಣ ಗಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ ವೈದ್ಯರ ಪ್ರಕಾರ, ಕರುಣಾರತ್ನೆ ಅವರು ಲಂಕಾ ಪ್ರೀಮಿಯರ್ ಲೀಗ್‌ನ ಕೆಲವು ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:58 am, Thu, 8 December 22