IND vs BAN: ಟೆಸ್ಟ್ ಸರಣಿಗೂ ರೋಹಿತ್ ಅನುಮಾನ..? ಕನ್ನಡಿಗ ರಾಹುಲ್​ಗೆ ಟೆಸ್ಟ್ ನಾಯಕತ್ವ

IND vs BAN: ರೋಹಿತ್​ಗೆ ಆಗಿರುವ ಇಂಜುರಿಯನ್ನು ಗಮನಿಸಿದರೆ, ಅವರು ಟೆಸ್ಟ್ ಸರಣಿ ವೇಳೆಗೆ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಬಾಂಗ್ಲಾದೇಶ ವಿರುದ್ಧ ನಡೆಯುವ ಕೊನೆಯ ಏಕದಿನ ಪಂದ್ಯ, ಆ ಬಳಿಕ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಸುದ್ದಿ.

IND vs BAN: ಟೆಸ್ಟ್ ಸರಣಿಗೂ ರೋಹಿತ್ ಅನುಮಾನ..? ಕನ್ನಡಿಗ ರಾಹುಲ್​ಗೆ ಟೆಸ್ಟ್ ನಾಯಕತ್ವ
KL Rahul
Follow us
| Updated By: ಪೃಥ್ವಿಶಂಕರ

Updated on:Dec 08, 2022 | 11:18 AM

ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ಎರಡೆರಡು ಆಘಾತಗಳು ಒಟ್ಟಿಗೆ ಎದುರಾಗಿವೆ. ಮೊದಲನೇಯದ್ದು ಬಲಿಷ್ಠ ಎನಿಸಿಕೊಂಡಿದ್ದ ರೋಹಿತ್ (Rohit Sharma) ಪಡೆ ಬಾಂಗ್ಲಾ ಎದುರು ಏಕದಿನ ಸರಣಿ ಕಳೆದುಕೊಂಡಿದೆ. ಎರಡನೇಯದ್ದು, ಎರಡನೇ ಏಕದಿನ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿರುವ ನಾಯಕ ರೋಹಿತ್ ಮುಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂಬುದು. ಅಷ್ಟೇ ಅಲ್ಲದೆ ಮೂರನೇ ಏಕದಿನ ಪಂದ್ಯದ ಜೊತೆಗೆ ರೋಹಿತ್, ಆ ಬಳಿಕ ನಡೆಯಲ್ಲಿರುವ ಟೆಸ್ಟ್ ಸರಣಿಗೂ ಲಭ್ಯರಾಗುವ ಸಾಧ್ಯತೆಗಳು ತೀರ ಕಡಿಮೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಒಂದು ವೇಳೆ ರೋಹಿತ್​ ಟೆಸ್ಟ್ ಸರಣಿಗೆ ಅಲಭ್ಯರಾದರೆ, ಅವರ ಬದಲಿಗೆ ಕೆಎಲ್ ರಾಹುಲ್ (KL Rahul) ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವರದಿಗಳು ಕೇಳಿಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid), ರಾಹುಲ್ ನಾಯಕತ್ವವಹಿಸುವ ಬಗ್ಗೆ ಸುಳಿವು ನೀಡಿದ್ದರು.

ರೋಹಿತ್​ಗೆ ಆಗಿರುವ ಇಂಜುರಿಯನ್ನು ಗಮನಿಸಿದರೆ, ಅವರು ಟೆಸ್ಟ್ ಸರಣಿ ವೇಳೆಗೆ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಬಾಂಗ್ಲಾದೇಶ ವಿರುದ್ಧ ನಡೆಯುವ ಕೊನೆಯ ಏಕದಿನ ಪಂದ್ಯ, ಆ ಬಳಿಕ ನಡೆಯುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಸುದ್ದಿ.

ರೋಹಿತ್ ಟೆಸ್ಟ್ ಸರಣಿಯಲ್ಲಿ ಆಡುವುದು ಸಸ್ಪೆನ್ಸ್

ಸಹಜವಾಗಿ ರೋಹಿತ್‌ಗೆ ಮೂಳೆ ಮುರಿತವಾಗಿಲ್ಲ ಆದರೆ ಅವರ ಗಾಯವು ತೀರ ಗಂಭೀರವಾಗಿದೆ. ಪಂದ್ಯದ ನಂತರ ಮಾತನಾಡಿದ್ದ ರೋಹಿತ್ ಕೂಡ ಇದೇ ಮಾತನ್ನು ಹೇಳಿದ್ದರು. ಆದರೆ, ಆ ಬಳಿಕ ಸುದ್ದಿಗೋಷ್ಠಿಗೆ ಬಂದಿದ್ದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ರೋಹಿತ್ ಗಾಯದಿಂದ ಬೇಗ ಚೇತರಿಸಿಕೊಳ್ಳುವ ಬಗ್ಗೆ ಅಥವಾ ಟೆಸ್ಟ್ ಸರಣಿಗೂ ಮುನ್ನ ಚೇತರಿಸಿಕೊಳ್ಳುವ ಬಗ್ಗೆ ಯಾವುದೇ ಆತ್ಮವಿಶ್ವಾಸ ತೋರಿಸದಿರುವುದು ರೋಹಿತ್ ಆಡುವ ಬಗ್ಗೆ ಅನುಮಾನ ಹುಟ್ಟುಹಾಕಿದೆ.

ಇದನ್ನೂ ಓದಿ: ಕ್ಯಾಚ್ ಹಿಡಿಯುವ ವೇಳೆ ಅವಘಡ; 4 ಹಲ್ಲುಗಳನ್ನು ಮುರಿದುಕೊಂಡ ಲಂಕಾ ಬೌಲರ್! ವಿಡಿಯೋ ನೋಡಿ

ಅಲ್ಲದೆ ರೋಹಿತ್ ಮುಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂಬುದನ್ನು ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದ ದ್ರಾವಿಡ್, ಮುಂದೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸದ್ಯ ರೋಹಿತ್ ಉತ್ತಮ ಚಿಕಿತ್ಸೆಗಾಗಿ ಮುಂಬೈಗೆ ತೆರಳುತ್ತಿದ್ದಾರೆ. ಅವರು ಅಲ್ಲಿ ತಜ್ಞರನ್ನು ಭೇಟಿ ಮಾಡುತ್ತಾರೆ. ಆ ಬಳಿಕ ಏನಾಗುತ್ತದೆ ಎಂದು ನೋಡೋಣ. ಆದರೆ, ಅವರು ಟೆಸ್ಟ್ ಪಂದ್ಯಕ್ಕೆ ಮರಳುತ್ತಾರೆ ಎಂಬುದರ ಬಗ್ಗೆ ನನಗೆ ಖಚಿತವಿಲ್ಲ ಎಂದಿದ್ದರು.

ಕೆಎಲ್ ರಾಹುಲ್​ಗೆ ನಾಯಕತ್ವ

ರಾಹುಲ್ ದ್ರಾವಿಡ್ ಅವರ ಈ ಹೇಳಿಕೆಯಿಂದ ಎರಡು ವಿಷಯ ಸ್ಪಷ್ಟವಾಗಿದೆ. ಮೊದಲು ರೋಹಿತ್ ಶರ್ಮಾ ಮುಂಬೈನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಎರಡನೆಯದಾಗಿ, ಅವರು ಟೆಸ್ಟ್ ಪಂದ್ಯಗಳನ್ನು ಆಡುವ ಬಗ್ಗೆ ಸಸ್ಪೆನ್ಸ್ ಇದೆ. ಈಗ ಈ ಎರಡು ವಿಷಯಗಳಿಗೆ ಒಂದೇ ಉತ್ತರವಿದ್ದು ಅದು ಕೆಎಲ್ ರಾಹುಲ್. ತಂಡದ ಉಪನಾಯಕನಾಗಿ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಅವರ ಮೇಲಿದೆ. ಹೀಗಾಗಿ ಮೂರನೇ ಏಕದಿನ ಪಂದ್ಯದ ನಂತರ ಟೆಸ್ಟ್ ಸರಣಿಯಲ್ಲೂ ರಾಹುಲ್ ತಂಡವನ್ನು ಮುನ್ನಡೆಸುವುದು ಪಕ್ಕಾ ಆಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Thu, 8 December 22

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ