17ನೇ ಆವೃತ್ತಿಯ ಐಪಿಎಲ್ ಫೈನಲ್ ಕದನ ಈಗಾಗಲೇ ಶುರುವಾಗಿದೆ. ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಟ್ರೋಫಿ ಮುಡಿಗೇರಿಸಿಕೊಳ್ಳಲು ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕಾದಾಡುತ್ತಿವೆ. ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿಯೇ ಮಿಚೆಲ್ ಸ್ಟಾರ್ಕ್, ಅಭಿಷೇಕ್ ಶರ್ಮಾರ ವಿಕೆಟ್ ಪತನವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ ವ್ಯಕ್ತಪಡಿಸಿದ್ದು, ಕೋಲ್ಕತ್ತಾವನ್ನು ವಿಜೇತರೆಂದು ಘೋಷಿಸಿದ್ದಾರೆ.
ಒಂದಾದರೊಂದರಂತೆ ವಿಕೆಟ್‌ಗಳನ್ನು ಕಬಳಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭವಿಷ್ಯವನ್ನು ನೆಟ್ಟಿಗರು ನುಡಿದಿದ್ದಾರೆ. ಇದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಭಿನಂದಿಸಿದ್ದಾರೆ. ಬಳಿಕ ಕೆಲವೇ ಸಮಯದಲ್ಲಿ “ಅಭಿನಂದನೆಗಳು KKR” ಗೂಗಲ್ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ.
Gautam Gambhir silenced Pat Cummins 🤫
Congratulations KKR 👑#KKRvsSRH #ShreyasIyer pic.twitter.com/hJ7R0oK6Ab
— Saurabh kumar (@Saurabhk0096) May 21, 2024
ಹೈದರಾಬಾದ್ ಓಪನರ್ ಟ್ರಾವಿಸ್ ಹೆಡ್ ಅನ್ನು ವೈಭವ್ ಅರೋರಾ ಗೋಲ್ಡನ್ ಡಕ್ ಮಾಡಿದರು. ಹೈದರಾಬಾದ್ ತಂಡವನ್ನು ಸಂಪೂರ್ಣ ಕಟ್ಟಿಹಾಕಲು ಜೊತೆಗೆ ರಾಹುಲ್ ತ್ರಿಪಾಠಿಯನ್ನು ತೆಗೆದುಹಾಕಲು ಸ್ಟಾರ್ಕ್ ಮರಳಿದರು.
ಇದನ್ನೂ ಓದಿ: IPL 2024 Final: RCB, CSK, MI ಇಲ್ಲದ ಮೂರನೇ ಫೈನಲ್
ಪವರ್‌ಪ್ಲೇಯೊಳಗೆ 3 ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಬರ್ತ್‌ಡೇ ಬಾಯ್ ನಿತೀಶ್ ಕುಮಾರ್ ರೆಡ್ಡಿ ತಮ್ಮ ಬ್ಯಾಟಿಂಗ್ನೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡ ಆಶಿಸಿತ್ತು. ಹರ್ಷಿತ್ ರಾಣಾ ಅವರ ವೇಗದ ಎಸೆತದಿಂದ ನಿತೀಶ್ ಕೂಡ ಔಟ್ ಆದರು.
KKR vs SRH MATCH 💥
Congratulations KKR what a start 💥Mitchell Starc has taken early wickets of Travis Head and Rahul Tripathi.
Meanwhile Gautam Gambhir sir 🙏 #KKRvsSRH #IPLFinal #IPLFinals pic.twitter.com/2UAuK6qkLd
— Ashutosh Srivastava (@Sri_Ashutosh008) May 26, 2024
ಸನ್‌ರೈಸರ್ಸ್ ಹೈದರಾಬಾದ್ ಈ ಹಿಂದೆ 2016 ರಲ್ಲಿ ಒಮ್ಮೆ ಸ್ಪರ್ಧೆಯನ್ನು ಗೆದ್ದಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ 2012 ಮತ್ತು 2014 ರಲ್ಲಿ ಪಂದ್ಯಾವಳಿಯನ್ನು ಗೆದ್ದು ಎರಡು ಬಾರಿ ಚಾಂಪಿಯನ್ ಆಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.