Virat Kohli: ಇದಪ್ಪಾ ಕ್ರೇಜ್ ಅಂದ್ರೆ: ಪಾಕಿಸ್ತಾನ್ ಸ್ಟೇಡಿಯಂನಲ್ಲಿ ರಾರಾಜಿಸಿದ ವಿರಾಟ್ ಕೊಹ್ಲಿ ಪೋಸ್ಟರ್

| Updated By: ಝಾಹಿರ್ ಯೂಸುಫ್

Updated on: Feb 19, 2022 | 10:24 PM

Virat Kohli: ಪಾಕ್​ನಲ್ಲಿ ಕಿಂಗ್​​ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿ ಫೋಟೋಗಳು ಹಾಗೂ ಕೊಹ್ಲಿ ಕುರಿತಾದ ಪೋಸ್ಟರ್​ಗಳು ಕಾಣಿಸಿಕೊಳ್ಳುತ್ತಿವೆ.

Virat Kohli: ಇದಪ್ಪಾ ಕ್ರೇಜ್ ಅಂದ್ರೆ: ಪಾಕಿಸ್ತಾನ್ ಸ್ಟೇಡಿಯಂನಲ್ಲಿ ರಾರಾಜಿಸಿದ ವಿರಾಟ್ ಕೊಹ್ಲಿ ಪೋಸ್ಟರ್
Virat Kohli
Follow us on

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಲ್ಲೂ ಸಾಕಷ್ಟು ಅಭಿಮಾನಿಗಳಿರುವುದು ವಿಶೇಷ. ಹೌದು, ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಇದೀಗ ಕೊಹ್ಲಿಯದ್ದೇ ಕಾರು ಬಾರು. ಪಂದ್ಯದ ವೇಳೆ ಅಭಿಮಾನಿಗಳು ವಿರಾಟ್ ಕೊಹ್ಲಿ ಪೋಸ್ಟರ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನೀವು ಕೂಡ ಪಿಎಸ್​​ಎಲ್ ಆಡಬೇಕೆಂದು ಮನವಿ ಮಾಡುತ್ತಿದ್ದಾರೆ. ಇದೀಗ ಪಾಕಿಸ್ತಾನದ ಸ್ಟೇಡಿಯಂನಲ್ಲಿ ಕಂಡು ಬಂದಿರುವ ಕಿಂಗ್ ಕೊಹ್ಲಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪಿಎಸ್​ಎಲ್​ ಟೂರ್ನಿಯಲ್ಲಿನ ಮುಲ್ತಾನ್ ಸುಲ್ತಾನ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ನಡುವಿನ ಪಂದ್ಯದ ವೇಳೆ ಕೊಹ್ಲಿಯ ಪೋಸ್ಟರ್​ಗಳು ರಾರಾಜಿಸಿದ್ದವು. ಮುಲ್ತಾನ್‌ನ ಬ್ಯಾಟ್ಸ್‌ಮನ್‌ಗಳಾದ ಶಾನ್ ಮಸೂದ್ ಮತ್ತು ಮೊಹಮ್ಮದ್ ರಿಜ್ವಾನ್ ಅರ್ಧಶತಕಗಳೊಂದಿಗೆ ಕ್ರೀಸ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆಯುತ್ತಿದ್ದರು. ಈ ನಡುವೆ ಕ್ರೀಡಾಂಗಣದಲ್ಲಿ ಪಾಕ್ ಕ್ರಿಕೆಟ್​ ಅಭಿಮಾನಿಗಳು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪೋಸ್ಟರ್ ಗಳನ್ನೂ ತೋರಿಸಿ ಸಂಭ್ರಮಿಸುತ್ತಿದ್ದರು. ಅಷ್ಟೇ ಅಲ್ಲದೆ ಈ ಪೋಸ್ಟರ್‌ನಲ್ಲಿ ಅಭಿಮಾನಿಯೊಬ್ಬ ಪಾಕಿಸ್ತಾನದಲ್ಲಿ ನಿಮ್ಮ ಶತಕವನ್ನು ನೋಡಬೇಕೆಂದು ಎಂದು ಬರೆಕೊಂಡಿದ್ದಾನೆ.

ಕೊಹ್ಲಿಯ 71ನೇ ಶತಕಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದರು. ಕೊಹ್ಲಿಯ ಬ್ಯಾಟ್​ನಿಂದ ಶತಕ ಮೂಡಿಬಂದು 2 ವರ್ಷಗಳಾಗಿವೆ. 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ ನೈಟ್ ಟೆಸ್ಟ್ ಪಂದ್ಯದಲ್ಲಿ ಅವರು ಕೊನೆಯ ಶತಕ ಬಾರಿಸಿದ್ದರು. ಮತ್ತೊಂದೆಡೆ ಭಾರತ ತಂಡವು 2008 ರಿಂದ ಪಾಕಿಸ್ತಾನಕ್ಕೆ ಭೇಟಿ ನೀಡಿಲ್ಲ. ಹಲವು ವರ್ಷಗಳಿಂದ ಇಬ್ಬರ ನಡುವೆ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಇದಾಗ್ಯೂ ಪಾಕ್​ನಲ್ಲಿ ಕಿಂಗ್​​ ಕೊಹ್ಲಿ ಅಪಾರ ಅಭಿಮಾನಿಗಳಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇದೀಗ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿ ಫೋಟೋಗಳು ಹಾಗೂ ಕೊಹ್ಲಿ ಕುರಿತಾದ ಪೋಸ್ಟರ್​ಗಳು ಕಾಣಿಸಿಕೊಳ್ಳುತ್ತಿವೆ. ಒಟ್ಟಿನಲ್ಲಿ ವಿರಾಟ್ ಕೊಹ್ಲಿಯ ಭಾರತೀಯ ಅಭಿಮಾನಿಗಳು ಬಯಸುತ್ತಿರುವಂತೆ ಪಾಕ್ ಫ್ಯಾನ್ಸ್​ ಕೂಡ 71ನೇ ಶತಕಕ್ಕಾಗಿ ಕಾತುರದಿಂದ ಕಾಯುತ್ತಿರುವುದಂತು ಸ್ಪಷ್ಟ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(‘Craze beyond borders’: Virat Kohli’s poster seen in Pakistan Super League game)

Published On - 3:33 pm, Sat, 19 February 22