Ranji Trophy: 20 ಫೋರ್, 10 ಸಿಕ್ಸರ್: ದೇಶೀಯ ಅಂಗಳದಲ್ಲಿ ಶಾರೂಖ್ ಖಾನ್ ಸ್ಪೋಟಕ ಶತಕ

Shahrukh Khan: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 452 ರನ್ ಗಳಿಸಿತ್ತು. ತಂಡದ ಪರ ಟೀಮ್ ಇಂಡಿಯಾ ಅಂಡರ್-19 ನಾಯಕ ಯಶ್ ಧುಲ್ ಭರ್ಜರಿ ಶತಕ ಸಿಡಿಸಿದ್ದರು.

Ranji Trophy: 20 ಫೋರ್, 10 ಸಿಕ್ಸರ್: ದೇಶೀಯ ಅಂಗಳದಲ್ಲಿ ಶಾರೂಖ್ ಖಾನ್ ಸ್ಪೋಟಕ ಶತಕ
Shahrukh Khan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 19, 2022 | 4:12 PM

ರಣಜಿ ಟ್ರೋಫಿಯಲ್ಲಿ ಸ್ಪೋಟಕ ಶತಕಗಳ ಸುರಿಮಳೆಯಾಗುತ್ತಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಶಾರೂಖ್ ಖಾನ್. ತಮಿಳುನಾಡು-ದೆಹಲಿ ನಡುವಣ ಪಂದ್ಯದಲ್ಲಿ ಶಾರೂಖ್ ಖಾನ್ ಸ್ಪೋಟಕ ಸೆಂಚುರಿ ಬಾರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ದೆಹಲಿ ನೀಡಿದ 452 ರನ್​ಗಳ ಬೃಹತ್ ಗುರಿಗೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ತಮಿಳುನಾಡು ಪರ ಶಾರೂಖ್ ಶತಕ ಬಾರಿಸಿ ಮಿಂಚಿದರು. ವಿಶೇಷ ಎಂದರೆ ಇದು ಇದು ರಣಜಿ ಟ್ರೋಫಿಯಲ್ಲಿ ಶಾರುಖ್ ಖಾನ್ ಬಾರಿಸಿದ ಮೊದಲ ಶತಕವಾಗಿದೆ. ಇದಕ್ಕೂ ಮುನ್ನ ಅವರು ಈ ದೇಶೀಯ ಟೂರ್ನಿಯಲ್ಲಿ ಕೇವಲ 2 ಅರ್ಧಶತಕಗಳನ್ನು ಬಾರಿಸಿದ್ದರು. ಕ್ರೀಸ್​ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶಾರೂಖ್ ದೆಹಲಿ ಬೌಲರುಗಳ ಬೆಂಡೆತ್ತಿದರು. ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಶಾರೂಖ್ ಖಾನ್ 89 ಎಸೆತಗಳಲ್ಲಿ ಶತಕ ಪೂರೈಸಿದರು.

ಶಾರುಖ್ ಖಾನ್ ಶತಕಕ್ಕೂ ಮುನ್ನ ತಮಿಳುನಾಡಿನ ಮತ್ತೋರ್ವ ಬ್ಯಾಟ್ಸ್​ಮನ್ ಬಾಬಾ ಇಂದ್ರಜಿತ್ ಅವರು ಕೂಡ ಸೆಂಚುರಿ ಸಿಡಿಸಿದ್ದರು. ಇಂದ್ರಜಿತ್ 149 ಎಸೆತಗಳಲ್ಲಿ 117 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 2 ಸಿಕ್ಸರ್‌ಗಳು ಮೂಡಿಬಂದಿತ್ತು. ಇದೀಗ ಮೂರನೇ ದಿನದಾಟ ಮುಂದುವರೆದಿದ್ದು ಶಾರೂಖ್ ಖಾನ್ 148 ಎಸೆತಗಳಲ್ಲಿ 194 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ವೇಳೆ ಅವರ ಬ್ಯಾಟ್​ನಿಂದ ಸಿಡಿದದ್ದು ಬರೋಬ್ಬರಿ 20 ಫೋರ್ ಹಾಗೂ 10 ಸಿಕ್ಸರ್​ಗಳು. ಅಷ್ಟೇ ಅಲ್ಲದೆ ತಮಿಳುನಾಡು ತಂಡವು 7 ವಿಕೆಟ್ ನಷ್ಟಕ್ಕೆ 474 ರನ್​ಗಳಿಸಿದೆ.

ದೆಹಲಿಯ ಮೊದಲ ಇನಿಂಗ್ಸ್: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ ಮೊದಲ ಇನಿಂಗ್ಸ್‌ನಲ್ಲಿ 452 ರನ್ ಗಳಿಸಿತ್ತು. ತಂಡದ ಪರ ಟೀಮ್ ಇಂಡಿಯಾ ಅಂಡರ್-19 ನಾಯಕ ಯಶ್ ಧುಲ್ ಭರ್ಜರಿ ಶತಕ ಸಿಡಿಸಿದ್ದರು. ಇದೀಗ ದೆಹಲಿ ನೀಡಿದ ಕಠಿಣ ಸವಾಲಿಗೆ ತಮಿಳುನಾಡು ತಂಡದ ಭರ್ಜರಿ ಪ್ರತ್ಯುತ್ತರ ನೀಡುತ್ತಿದೆ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(Ranji Trophy: Tamil Nadu Shahrukh Khan is hammering Delhi with 150 in just 113 balls)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್