Ranji Trophy: 68 ಎಸೆತಗಳಲ್ಲಿ ಶತಕ ಸಿಡಿಸಿದ ಎಸ್ಆರ್ಹೆಚ್ ಆಟಗಾರ; ಆದರೂ ಪಂತ್ ದಾಖಲೆ ಮುರಿಯಲಾಗಲಿಲ್ಲ
Abdul Samad: ಆದಾಗ್ಯೂ, ಅಬ್ದುಲ್ ಸಮದ್, ರಿಷಬ್ ಪಂತ್ ಹೊಂದಿದ್ದ ರಣಜಿ ಟ್ರೋಫಿಯಲ್ಲಿ ವೇಗದ ಶತಕವನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು. ಪಂತ್ 2016ರಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದರು.
ರಣಜಿ ಟ್ರೋಫಿ (Ranji Trophy)ಗೂ ಟಿ20 ಕ್ರಿಕೆಟ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ ಐಪಿಎಲ್ 15ನೇ ಸೀಸನ್ (15th season of IPL) ಮುಂದಿರುವ ಕಾರಣ ಅದಕ್ಕೂ ಮುನ್ನ ಆಟಗಾರರಿಗೆ ಅಬ್ಬರಿಸಲು ಇದೊಂದೇ ಅವಕಾಶ. ಅವರು ಸುದೀರ್ಘ ಸ್ವರೂಪಗಳಲ್ಲಿ ಆಡುವ ರಣಜಿ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್‌ನ ಪರಿಮಳವನ್ನು ಬೆರೆಸುತ್ತಿದ್ದಾರೆ. ಐಪಿಎಲ್ 2022 ರಲ್ಲಿ 4 ಕೋಟಿ ರೂ.ಗೆ ಉಳಿಸಿಕೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ಆಲ್ ರೌಂಡರ್ ಅಬ್ದುಲ್ ಸಮದ್ (Abdul Samad)ಕೂಡ ಪುದುಚೇರಿ ವಿರುದ್ಧ ಇದೇ ರೀತಿಯ ಇನ್ನಿಂಗ್ಸ್ ಆಡಿದ್ದಾರೆ. ಐಪಿಎಲ್ 15ನೇ ಸೀಸನ್ನಲ್ಲಿ ಸಮದ್ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಜಮ್ಮು ಮತ್ತು ಕಾಶ್ಮೀರ ಪರ ರಣಜಿ ಟ್ರೋಫಿಯಲ್ಲಿ ವಿಧ್ವಂಸಕ ಪ್ರದರ್ಶನ ತೋರಿದ್ದರು.
ರಣಜಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡಿದ ಮೊದಲ ಇನ್ನಿಂಗ್ಸ್‌ನಲ್ಲಿ ಸಮದ್ 78 ಎಸೆತಗಳಲ್ಲಿ 19 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಒಳಗೊಂಡಂತೆ 103 ರನ್ ಗಳಿಸಿದರು. ಈ ಇನ್ನಿಂಗ್ಸ್ ಸಮಯದಲ್ಲಿ, ಸಮದ್ 68 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು ಮತ್ತು ರಣಜಿ ಟ್ರೋಫಿಯ ಇತಿಹಾಸದಲ್ಲಿ ವೇಗದ ಶತಕವನ್ನು ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.
ಪಂತ್ ಹೆಸರಿನಲ್ಲಿ ದಾಖಲೆ
ಆದಾಗ್ಯೂ, ಅಬ್ದುಲ್ ಸಮದ್, ರಿಷಬ್ ಪಂತ್ ಹೊಂದಿದ್ದ ರಣಜಿ ಟ್ರೋಫಿಯಲ್ಲಿ ವೇಗದ ಶತಕವನ್ನು ಮುರಿಯುವ ಅವಕಾಶವನ್ನು ಕಳೆದುಕೊಂಡರು. ಪಂತ್ 2016ರಲ್ಲಿ ಕೇವಲ 48 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಜಾರ್ಖಂಡ್ ವಿರುದ್ಧ 67 ಎಸೆತಗಳಲ್ಲಿ 135 ರನ್‌ಗಳ ಇನ್ನಿಂಗ್ಸ್ ಆಡುವಾಗ ಅವರು ಈ ಸಾಧನೆ ಮಾಡಿದರು. ಪಂತ್ ಅವರ ವೇಗದ ಇನ್ನಿಂಗ್ಸ್‌ನಲ್ಲಿ 14 ಸಿಕ್ಸರ್ ಮತ್ತು 8 ಬೌಂಡರಿಗಳು ಸೇರಿದ್ದವು.
ರಣಜಿಯಲ್ಲಿ ಅತಿ ವೇಗದ ಶತಕ ಸಿಡಿಸಿದ 5 ಬ್ಯಾಟ್ಸ್‌ಮನ್‌ಗಳು
ರಣಜಿ ಟ್ರೋಫಿಯಲ್ಲಿ ಅತಿ ವೇಗದ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಅಬ್ದುಲ್ ಸಮದ್ ಎರಡನೇ ಬ್ಯಾಟ್ಸ್‌ಮನ್. ಅದೇ ಸಮಯದಲ್ಲಿ, ಅಗ್ರ 5 ಶತಕಗಳಲ್ಲಿ ಪಂತ್ ಹೆಸರು ಎರಡು ಬಾರಿ ದಾಖಲಾಗಿದೆ. ಅವರು ವೇಗದ ಶತಕ ಗಳಿಸಿದ ಬ್ಯಾಟ್ಸ್‌ಮನ್ ಮಾತ್ರವಲ್ಲ, ಇದಲ್ಲದೇ 5ನೇ ವೇಗದ ಶತಕವೂ ಅವರ ಹೆಸರಿನಲ್ಲಿದೆ.
ರಿಷಬ್ ಪಂತ್ 48 ಬಾಲ್ Vs ಜಾರ್ಖಂಡ್ 2016
ಅಬ್ದುಲ್ ಸಮದ್ 68 ಬಾಲ್ Vs ಪುದುಚೇರಿ 2022
ನಮನ್ ಓಜಾ 69 ಬಾಲ್ Vs ಕರ್ನಾಟಕ 2015
ಏಕಲವ್ಯ ದ್ವಿವೇದಿ 72 ಬಾಲ್ Vs ರೈಲ್ವೇ 2015
ರಿಷಬ್ ಪಂತ್ 82 ಬಾಲ್ Vs ಜಾರ್ಖಂಡ್ 2016
ಸಮದ್ J&K ನಿಂದ IPL ಆಡುವ ನಾಲ್ಕನೇ ಕ್ರಿಕೆಟಿಗ
ಸಮದ್ ಅವರನ್ನು ಐಪಿಎಲ್ 2021 ರಲ್ಲಿ 20 ಲಕ್ಷ ರೂಪಾಯಿಗಳಿಗೆ ಹೈದರಾಬಾದ್ ಖರೀದಿಸಿತು, ಆದರೆ ಈ ಬಾರಿ ಅವರನ್ನು 4 ಕೋಟಿಗೆ ಉಳಿಸಿಕೊಂಡಿದೆ. ಅಬ್ದುಲ್ ಸಮದ್ ಜಮ್ಮು ಮತ್ತು ಕಾಶ್ಮೀರದಿಂದ ಐಪಿಎಲ್‌ನಲ್ಲಿ ಆಡುತ್ತಿರುವ ನಾಲ್ಕನೇ ಕ್ರಿಕೆಟಿಗರಾಗಿದ್ದಾರೆ. ಅವರು ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಐಪಿಎಲ್‌ನ 23 ಪಂದ್ಯಗಳಲ್ಲಿ 223 ರನ್ ಗಳಿಸಿದ್ದಾರೆ.
ಇದನ್ನೂ ಒದಿ:IND vs WI: ಭಾರತಕ್ಕೆ ಡಬಲ್ ಶಾಕ್! ಕೊಹ್ಲಿ ಜೊತೆಗೆ ಪಂತ್ ಕೂಡ ಅಂತಿಮ ಟಿ20ಗೆ ಗೈರು; ಲಂಕಾ ಸರಣಿಗೂ ಅಲಭ್ಯ