Viral Video: ಅತ್ಯಾದ್ಭುತ ಕ್ಯಾಚ್: ಆಸ್ಟ್ರೇಲಿಯಾ ಆಟಗಾರನ ಡೈವಿಂಗ್ ಕ್ಯಾಚ್ಗೆ ಕ್ರಿಕೆಟ್ ಪ್ರೇಮಿಗಳು ಫಿದಾ
Handscomb Catch: ಇದಕ್ಕೂ ಮುನ್ನ ಮ್ಯಾಟ್ ಶಾರ್ಟ್ ಅವರ ಅದೇ ಎಸೆತದಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಮ್ಯಾಟ್ ರೆನ್‌ಶಾಗೆ ಕ್ಯಾಚ್ ಹಿಡಿದಿದ್ದರು. ಆ ಬಳಿಕ ಸದರ್ಲೆಂಡ್ ಎಸೆತದಲ್ಲಿ ಗುರಿಂದರ್ ಸಂಧು ಅವರ ಮತ್ತೊಂದು ಕ್ಯಾಚ್ ಪಡೆದರು.
ಕ್ರಿಕೆಟ್ ಅಂಗಳ ಸಾಟಿಯಿಲ್ಲದ ಕ್ಯಾಚ್ಗಳಿಗೆ ಹಲವು ಬಾರಿ ಸಾಕ್ಷಿಯಾಗಿವೆ. ಅದರಲ್ಲೂ ಕೆಲವೊಂದು ಕ್ಯಾಚ್ಗಳು ನಂಬಲಸಾಧ್ಯ ಎಂಬಂತಿರುತ್ತವೆ. ಅಂತಹದೊಂದು ಕಠಿಣ ಪರಿಶ್ರಮವನ್ನು ಆಟಗಾರರು ಹಾಕಿರುತ್ತಾರೆ. ಇದೀಗ ಅಂತಹದ್ದೇ ಮತ್ತೊಂದು ಕ್ಯಾಚ್ ಕೂಡ ಮೂಡಿಬಂದಿದೆ. ಈ ಬಾರಿ ಇಂತಹ ಅಧ್ಬುತ ಕ್ಯಾಚ್ ಕಂಡು ಬಂದಿದ್ದು ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ನಲ್ಲಿ ಎಂಬುದು ವಿಶೇಷ. ಕ್ವೀನ್ಸ್‌ಲ್ಯಾಂಡ್ ಮತ್ತು ವಿಕ್ಟೋರಿಯಾ ನಡುವಣ ಈ ಪಂದ್ಯದಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಹಿಡಿದ ಕ್ಯಾಚ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಪಂದ್ಯದಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ 3 ಕ್ಯಾಚ್‌ಗಳನ್ನು ಹಿಡಿದ್ದರು. ಆದರೆ, ಈ 3 ಕ್ಯಾಚ್‌ಗಳಲ್ಲಿ ಅವರು ಹಿಡಿದ ಕೊನೆಯ ಕ್ಯಾಚ್ ಅತ್ಯಂತ ವಿಭಿನ್ನ ಮತ್ತು ಅತ್ಯುತ್ತಮ ಕ್ಯಾಚ್ ಆಗಿತ್ತು. ಏಕೆಂದರೆ ಹ್ಯಾಂಡ್ಸ್‌ಕಾಂಬ್ ತನ್ನ ಫೀಲ್ಡಿಂಗ್ ಪರಿಮಿತಿಯನ್ನು ದಾಟಿ ಆ ಕ್ಯಾಚ್ ಅನ್ನು ಹಿಡಿದಿದ್ದರು. ವಿಕ್ಟೋರಿಯಾ ತಂಡದ ನಾಯಕ ತಮ್ಮ ತಂಡದ ಸ್ಪಿನ್ನರ್ ಮ್ಯಾಟ್ ಶಾರ್ಟ್ ಅವರ ಎಸೆತದಲ್ಲಿ ಮಾರ್ಕ್ ಸ್ಟೆಕೆಟೆ 2ನೇ ಸ್ಲಿಪ್ ಮೂಲಕ ಚೆಂಡನ್ನು ಬಾರಿಸುವ ಪ್ರಯತ್ನ ಮಾಡಿದ್ದರು. ಮೊದಲ ಸ್ಲಿಪ್ನಲ್ಲಿ ತುಸು ಕೀಪರ್ ಹತ್ತಿರದಲ್ಲೇ ಇದ್ದ ಹ್ಯಾಂಡ್ಸ್‌ಕಾಂಬ್ ಸ್ಟೆಕೆಟೆ ಯಾವ ರೀತಿಯಾಗಿ ಚೆಂಡನ್ನು ಬಾರಿಸಲಿದ್ದಾರೆ ಎಂದು ಊಹಿಸಿದ್ದರು.
ಅದರಂತೆ ಸ್ಟೆಕೆಟೆ ಚೆಂಡನ್ನು ಬಾರಿಸುತ್ತಿದ್ದಂತೆ ಅತ್ತ ಹ್ಯಾಂಡ್ಸ್‌ಕಾಂಬ್ 2ನೇ ಸ್ಲಿಪ್ನತ್ತ ಓಡಿ ಹೋಗಿದ್ದರು. ಆದರೆ ಎತ್ತರದಲ್ಲಿದ್ದ ಚೆಂಡನ್ನು ಜಿಗಿಯುವ ಮೂಲಕ ತಡೆದು ನಿಲ್ಲಿಸಿದ ಹ್ಯಾಂಡ್ಸ್‌ಕಾಂಬ್ ಬಿದ್ದಲ್ಲಿಂದಲೇ ಡೈವ್ ಹೊಡೆಯುವ ಮೂಲಕ ಕ್ಯಾಚ್ ಹಿಡಿದರು. ಇದೀಗ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
View this post on Instagram
ಪೀಟರ್ ಹ್ಯಾಂಡ್ಸ್‌ಕಾಂಬ್ 3 ಕ್ಯಾಚ್: ಇದಕ್ಕೂ ಮುನ್ನ ಮ್ಯಾಟ್ ಶಾರ್ಟ್ ಅವರ ಅದೇ ಎಸೆತದಲ್ಲಿ ಪೀಟರ್ ಹ್ಯಾಂಡ್ಸ್‌ಕಾಂಬ್ ಮ್ಯಾಟ್ ರೆನ್‌ಶಾಗೆ ಕ್ಯಾಚ್ ಹಿಡಿದಿದ್ದರು. ಆ ಬಳಿಕ ಸದರ್ಲೆಂಡ್ ಎಸೆತದಲ್ಲಿ ಗುರಿಂದರ್ ಸಂಧು ಅವರ ಮತ್ತೊಂದು ಕ್ಯಾಚ್ ಪಡೆದರು. ಪರಿಣಾಮ ಕ್ವೀನ್ಸ್‌ಲ್ಯಾಂಡ್‌ನ ಮೊದಲ ಇನ್ನಿಂಗ್ಸ್ 349 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ವಿಕ್ಟೋರಿಯಾ 1 ವಿಕೆಟ್‌ಗೆ 172 ರನ್ ಗಳಿಸಿದೆ. ತಂಡದ ಪರ ಪೀಟರ್ ಹ್ಯಾಂಡ್ಸ್‌ಕಾಂಬ್ ಅಜೇಯ 74 ರನ್ ಗಳಿಸಿ ಮಾರ್ಕಸ್ ಹ್ಯಾರಿಸ್ (88) ಜೊತೆ ಕ್ರೀಸ್ನಲ್ಲಿದ್ದಾರೆ.
ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?
ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್
(Viral Video: Handscomb anticipates, hangs on to ‘extraordinary’ catch)