IND vs WI: ಭಾರತಕ್ಕೆ ಡಬಲ್ ಶಾಕ್! ಕೊಹ್ಲಿ ಜೊತೆಗೆ ಪಂತ್ ಕೂಡ ಅಂತಿಮ ಟಿ20ಗೆ ಗೈರು; ಲಂಕಾ ಸರಣಿಗೂ ಅಲಭ್ಯ
Rishabh Pant: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ T20 ಪಂದ್ಯದಿಂದ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲೂ ಅವರು ಆಡುವುದಿಲ್ಲ.
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಕೊನೆಯ T20 ಪಂದ್ಯದಿಂದ (India vs West Indies T20 Series) ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ (Rishabh Pant)ಅವರಿಗೆ ವಿಶ್ರಾಂತಿ ನೀಡಲಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲೂ (T20 series against Sri Lanka) ಅವರು ಆಡುವುದಿಲ್ಲ. ಮುಂಬರುವ ಸರಣಿಯ ಕಾರಣದಿಂದ ಬಿಸಿಸಿಐ ರಿಷಬ್ ಪಂತ್‌ಗೆ ಬಯೋ ಬಬಲ್‌ನಿಂದ ವಿಶ್ರಾಂತಿ ನೀಡಿದೆ. ಇದೀಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಅವರು ವಾಪಸಾಗಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಂತ್ ಉತ್ತಮ ಫಾರ್ಮ್ ತೋರಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಜೇಯ ಅರ್ಧಶತಕ ಬಾರಿಸಿ ತಂಡವನ್ನು ಬಲಿಷ್ಠ ಸ್ಕೋರ್ಗೆ ಕರೆದೊಯ್ದರು. ಈ ಹಿಂದೆ ವಿರಾಟ್ ಕೊಹ್ಲಿ (Virat Kohli)ಗೆ ಬಿಸಿಸಿಐ ಇದೇ ರೀತಿಯ ವಿಶ್ರಾಂತಿ ನೀಡಿತ್ತು. ಅವರು ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಟಿ20 ಮತ್ತು ಶ್ರೀಲಂಕಾ ವಿರುದ್ಧದ ಸರಣಿಯನ್ನೂ ಆಡುವುದಿಲ್ಲ.
ರಿಷಬ್ ಪಂತ್ ಕೆಲವು ಸಮಯದಿಂದ ನಿರಂತರವಾಗಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ ಮತ್ತು ಎಲ್ಲಾ ಮೂರು ಸ್ವರೂಪಗಳಲ್ಲಿ ಆಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ತುಂಬಾ ಬ್ಯುಸಿಯಾಗಲಿದ್ದಾರೆ. ಭಾರತೀಯ ತಂಡದ ಭಾಗವಾಗುವುದರ ಜೊತೆಗೆ, ಅವರು ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಪಂತ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಕೀಪಿಂಗ್ ಜವಾಬ್ದಾರಿಯನ್ನು ನಿಭಾಯಿಸಬಹುದು.
Rishabh Pant also given break, wicketkeeper to skip third T20 International against West Indies and T20Is against Sri Lanka
— Press Trust of India (@PTI_News) February 19, 2022
ರಿಷಬ್ ಪಂತ್‌ಗೆ ಬ್ರೇಕ್ ಸಿಕ್ಕಿದೆ
ಮಧ್ಯಮ ಕ್ರಮಾಂಕದಲ್ಲಿ ಆಡುವಾಗ ಅವರ ಇತ್ತೀಚಿನ ಪ್ರದರ್ಶನಗಳು ಆಕರ್ಷಕವಾಗಿವೆ. ಪಂತ್ ಅನೇಕ ಸಂದರ್ಭಗಳಲ್ಲಿ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ T20I ನಲ್ಲಿ ಪಂತ್ ಅಜೇಯ 52 ರನ್ ಗಳಿಸಿದರು. ಈ ಇನ್ನಿಂಗ್ಸ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರಿಂದಾಗಿ ಪಂತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಹಿಂದೆ ಏಕದಿನ ಸರಣಿಯಲ್ಲೂ ರಿಷಬ್ ಪಂತ್ ಅರ್ಧಶತಕ ಸಿಡಿಸಿದ್ದರು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ, ಅವರು ಟೆಸ್ಟ್‌ನಲ್ಲಿ ಶತಕ ಗಳಿಸಿದರು ಮತ್ತು ODIಗಳಲ್ಲಿ 85 ರನ್‌ಗಳ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಸಂದರ್ಭದಲ್ಲಿ ಪಂತ್‌ಗೆ ಆರಂಭಿಕರಾಗಿ ಕಣಕ್ಕಿಳಿಸಲಾಯಿತು. ಅದರೆ ಅವರು ಅಲ್ಲಿ ಅಷ್ಟು ಯಶಸ್ಸು ಕಾಣಲಿಲ್ಲ. ಬಳಿಕ ಮತ್ತೆ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಲಾಯಿತು.
Published On - 11:34 am, Sat, 19 February 22