DC, IPL 2022 Auction: ಪಂತ್, ವಾರ್ನರ್, ಶಾರ್ದೂಲ್! ಕಡಿಮೆ ಬಜೆಟ್‌ನಲ್ಲಿ ಬಲಿಷ್ಠ ತಂಡ ಕಟ್ಟಿದ ಡೆಲ್ಲಿ ಕ್ಯಾಪಿಟಲ್ಸ್
Delhi Capitals Auction Players: ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ ಅವರೊಂದಿಗೆ 19 ಆಟಗಾರರನ್ನು ಆಯ್ಕೆ ಮಾಡಲು ಪ್ರಾರಂಭಿಸಿತು. ವಾರ್ನರ್ ಅವರನ್ನು ಆಯ್ಕೆ ಮಾಡುವ ಮೂಲಕ ಅವರು ತಮ್ಮ ಓಪನಿಂಗ್ ಅನ್ನು ಬಲಪಡಿಸಿದ್ದಾರೆ.
ಬಲವಾದ ತಂಡವನ್ನು ಕಟ್ಟಲು ಪರ್ಸ್‌ನಲ್ಲಿ ಸಾಕಷ್ಟು ಹಣವನ್ನು ಹೊಂದಿರುವುದು ಅನಿವಾರ್ಯವಲ್ಲ. ಕಡಿಮೆ ಬಜೆಟ್‌ನಲ್ಲಿಯೂ ಸಮತೋಲಿತ ತಂಡವನ್ನು ಆಯ್ಕೆ ಮಾಡಬಹುದು ಎಂಬುದನ್ನು ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತೋರಿಸಿದೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ (IPL 2022 Auction) ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪರ್ಸ್‌ನಲ್ಲಿ ಕಡಿಮೆ ಹಣವನ್ನು ಹೊಂದಿದ್ದ ತಂಡವಾಗಿದೆ. ಆದರೆ, ಅವರು ಹರಾಜಿನಲ್ಲಿ ಸರಿಯಾದ ತಂಡವನ್ನು ಆಯ್ಕೆ ಮಾಡಿದ್ದಾರೆ. ಸೋಲುವ ಪಂದ್ಯವನ್ನು ಏಕಾಂಗಿಯಾಗಿ ಗೆಲ್ಲಿಸಬಲ್ಲ ಕೆಲವು ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಡೇವಿಡ್ ವಾರ್ನರ್ (David Warner) ಅವರೊಂದಿಗೆ 19 ಆಟಗಾರರನ್ನು ಆಯ್ಕೆ ಮಾಡಲು ಪ್ರಾರಂಭಿಸಿತು. ವಾರ್ನರ್ ಅವರನ್ನು ಆಯ್ಕೆ ಮಾಡುವ ಮೂಲಕ ಅವರು ತಮ್ಮ ಓಪನಿಂಗ್ ಅನ್ನು ಬಲಪಡಿಸಿದ್ದಾರೆ. ಬೌಲಿಂಗ್‌ನಲ್ಲಿ ಡೆಲ್ಲಿ ದೊಡ್ಡ ಹೆಸರುಗಳನ್ನು ಹೊಂದಿಲ್ಲ. ಆದರೆ, ಫ್ರಾಂಚೈಸಿ ಯಾರ ಮೇಲೆ ಬಾಜಿ ಕಟ್ಟಿದೆಯೋ ಅವರು ಗೆಲುವಿಗಾಗಿ ಹೋರಾಡಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಆದರೆ ಈ ಬಾರಿ ಅವರು ಮೆಗಾ ಹರಾಜಿನಲ್ಲಿ ಪ್ರಶಸ್ತಿ ಗೆಲ್ಲಲುಬೇಕಾದ ಪ್ರಮುಖ ಆಟಗಾರರನ್ನು ಖರೀದಿಸಿದ್ದಾರೆ.
IPL 2022 ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದ ಆಟಗಾರರು
ಡೇವಿಡ್ ವಾರ್ನರ್ – ರೂ 6.25 ಕೋಟಿ ಮಿಚೆಲ್ ಮಾರ್ಷ್ – ರೂ 6.25 ಕೋಟಿ ಶಾರ್ದೂಲ್ ಠಾಕೂರ್ – ರೂ 10.75 ಕೋಟಿ ಮುಸ್ತಾಫಿಜುರ್ ರೆಹಮಾನ್ – ರೂ 2 ಕೋಟಿ ಕುಲದೀಪ್ ಯಾದವ್ – ರೂ 2 ಕೋಟಿ ಅಶ್ವಿನ್ ಹೆಬ್ಬಾರ್ – ರೂ 20 ಲಕ್ಷ ಕೆಎಸ್ ಭರತ್ – ರೂ 2 ಕೋಟಿ ಕಮಲೇಶ್ ನಾಗರಕೋಟಿ – 2 ಕೋಟಿ10 ಲಕ್ಷ ಕೋಟಿ ರೂ. ಸರ್ಫರಾಜ್ ಖಾನ್ – ರೂ 20 ಲಕ್ಷ ಮನ್‌ದೀಪ್ ಸಿಂಗ್ 1.1 ಕೋಟಿ ಖಲೀಲ್ ಅಹ್ಮದ್ – 5.25 ಕೋಟಿ ಚೇತನ್ ಸಕರಿಯಾ – 4.20 ಕೋಟಿ ಲಲಿತ್ ಯಾದವ್ – ರೂ 65 ಲಕ್ಷ ರಿಪಾನ್ ಪಟೇಲ್ – ರೂ 20 ಲಕ್ಷ ಯಶ್ ಧುಲ್ – ರೂ 50 ಲಕ್ಷ ರೊವ್‌ಮನ್ ಪೊವೆಲ್ – ರೂ 2.80 ಕೋಟಿ ಲುಂಗಿ ಎಂಗಿಡಿ- 50 ಲಕ್ಷ ಸೆಫರ್ಟ್- 50 ಲಕ್ಷ ವಿಕ್ಕಿ ಓಸ್ವಾಲ್ – 20 ಲಕ್ಷ
YEH HAI NAYI DILLI ?
And a new era kicks off ?#YehHaiNayiDilli #IPL2022 #IPLAuction pic.twitter.com/cvePbUm7Ot
— Delhi Capitals (@DelhiCapitals) February 13, 2022
ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿದ್ದ ಆಟಗಾರರು
ಹರಾಜಿನಲ್ಲಿ ಖರೀದಿಸಿದ 19 ಆಟಗಾರರ ಹೊರತಾಗಿ, ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ 4 ಆಟಗಾರರನ್ನು ಉಳಿಸಿಕೊಂಡಿದೆ. ಇದರಲ್ಲಿ ನಾಯಕ ರಿಷಬ್ ಪಂತ್, ಅಕ್ಷರ್ ಪಟೇಲ್, ಎನ್ರಿಕ್ ನಾರ್ಕಿಯಾ ಮತ್ತು ಪೃಥ್ವಿ ಶಾ ಇದ್ದಾರೆ. ಅಕ್ಷರ್ ಪಟೇಲ್ ಆಲ್ ರೌಂಡರ್ ಆಗಿ ತಂಡದ ಭಾಗವಾಗಿದ್ದಾರೆ. ಅದೇ ಸಮಯದಲ್ಲಿ, ಎನ್ರಿಕ್ ನಾರ್ಕಿಯಾ ಡೆಲ್ಲಿ ಕ್ಯಾಪಿಟಲ್ಸ್‌ನ ವೇಗದ ಬೌಲಿಂಗ್ ಮುನ್ನಡೆಸುತ್ತಾರೆ.
Published On - 4:56 pm, Mon, 14 February 22