KKR, IPL 2022 Auction: ಕೆಕೆಆರ್​ಗೆ ಹೊಸ ನಾಯಕನ ಎಂಟ್ರಿ! ಹರಾಜಿನ ನಂತರ ಶಾರುಖ್ ತಂಡ ಹೀಗಿದೆ

Kolkata Knight Riders Auction Players: ಎರಡು ಬಾರಿಯ IPL ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ IPL 2022 ಗಾಗಿ 25 ಆಟಗಾರರ ಪಟ್ಟಿಯನ್ನು ಪೂರ್ಣಗೊಳಿಸಿದೆ. ಹರಾಜಿಗೂ ಮುನ್ನ ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಂಡಿತ್ತು.

KKR, IPL 2022 Auction: ಕೆಕೆಆರ್​ಗೆ ಹೊಸ ನಾಯಕನ ಎಂಟ್ರಿ! ಹರಾಜಿನ ನಂತರ ಶಾರುಖ್ ತಂಡ ಹೀಗಿದೆ
Follow us
TV9 Web
| Updated By: ಪೃಥ್ವಿಶಂಕರ

Updated on: Feb 14, 2022 | 6:31 PM

ಎರಡು ಬಾರಿಯ IPL ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) IPL 2022 ಗಾಗಿ 25 ಆಟಗಾರರ ಪಟ್ಟಿಯನ್ನು ಪೂರ್ಣಗೊಳಿಸಿದೆ. ಹರಾಜಿಗೂ ಮುನ್ನ ತಂಡ ನಾಲ್ವರು ಆಟಗಾರರನ್ನು ಉಳಿಸಿಕೊಂಡಿತ್ತು. ಹರಾಜಿನ ಮೊದಲ ದಿನ, ತಂಡವು ಐವರು ಆಟಗಾರರನ್ನು ಸೇರಿಸಿದರೆ, ಎರಡನೇ ದಿನ ಅವರು 16 ಆಟಗಾರರನ್ನು ಖರೀದಿಸಿದರು. ತಂಡವು ಈಗ ಸಾಕಷ್ಟು ಸಮತೋಲಿತವಾಗಿದೆ. ನಾಯಕತ್ವದ ಕೊರತೆ ಎದುರಿಸುತ್ತಿರುವ ಕೆಕೆಆರ್​ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲದಿದ್ದರೂ ಹರಾಜಿನ ನಂತರ, ಶ್ರೇಯಸ್ ಅಯ್ಯರ್ (Shreyas Iyer) ಕೆಕೆಆರ್ ನಾಯಕರಾಗುತ್ತಾರೆ ಎಂದು ಊಹಿಸಲಾಗಿದೆ.

ಕೆಕೆಆರ್ ತಂಡ 48 ಕೋಟಿ ರೂಪಾಯಿಯೊಂದಿಗೆ ಹರಾಜಿಗೆ ಪ್ರವೇಶಿಸಿತು. ಮೊದಲ ದಿನವೇ ಮಾರ್ಕ್ಯೂ ಪ್ಲೇಯರ್ ಲಿಸ್ಟ್​ನಲ್ಲಿದ್ದ ಶ್ರೇಯಸ್ ಅಯ್ಯರ್​ಗೆ ಸಾಕಷ್ಟು ಹಣ ಖರ್ಚು ಮಾಡಿತು. ಅಯ್ಯರ್‌ಗೆ ಬರೋಬ್ಬರಿ 12 ಕೋಟಿ 50 ಲಕ್ಷ ರೂಪಾಯಿ ಖರ್ಚು ಮಾಡಿತು. ಇದು ಈ ಹರಾಜಿನಲ್ಲಿ ಕೆಕೆಆರ್​ನ ಅತಿ ಹೆಚ್ಚು ಬಿಡ್ ಆಗಿತ್ತು. ಅಯ್ಯರ್ ರೂಪದಲ್ಲಿ ಬಲಿಷ್ಠ ಬ್ಯಾಟ್ಸ್ ಮನ್ ಸಿಕ್ಕಿದ್ದು ಮಾತ್ರವಲ್ಲದೆ ಅವರ ನಾಯಕನ ಹುಡುಕಾಟವೂ ಒಂದು ರೀತಿಯಲ್ಲಿ ಮುಗಿಯಿತು.

ಹಳೆಯ ಆಟಗಾರರ ಮೇಲೂ ನಂಬಿಕೆ

ಹಳೆಯ ಆಟಗಾರರ ಬಗ್ಗೆ ಮಾತನಾಡುವುದಾದರೆ, ಈ ಬಾರಿಯ ಹರಾಜಿನಲ್ಲಿ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಹೊರತುಪಡಿಸಿ, ಕೆಕೆಆರ್ ಅವರೊಂದಿಗೆ ಬೌಲರ್ ಶಿವಂ ಮಾವಿಯನ್ನು ಖರೀದಿಸಿದೆ. ಅದೇ ಸಮಯದಲ್ಲಿ, ಅಜಿಂಕ್ಯ ರಹಾನೆ ಅವರನ್ನು ಒಂದು ಕೋಟಿಗೆ ಖರೀದಿಸಿದರೆ, ನಿತೀಶ್ ರಾಣಾ ಅವರನ್ನು 8 ಕೋಟಿಗೆ ಖರೀದಿಸಿತು. ಇದನ್ನು ಹೊರತುಪಡಿಸಿ, ಕಳೆದ ಹರಾಜಿನಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ದಾಖಲೆಯ ಬಿಡ್ ಮಾಡಿದ್ದ ಕೆಕೆಆರ್ ಈ ಬಾರಿ ಅವರನ್ನು 7.25 ಕೋಟಿಗೆ ಖರೀದಿಸಿತು. ಮತ್ತೊಂದೆಡೆ ರಿಂಕು ಸಿಂಗ್ ಅವರನ್ನು 50 ಲಕ್ಷ ರೂ.ಗೆ ಖರೀದಿಸಲಾಗಿದೆ.

ಉಳಿಸಿಕೊಂಡಿದ್ದ ಆಟಗಾರರು

ಆಂಡ್ರೆ ರಸೆಲ್ – 12 ಕೋಟಿ ರೂ

ವರುಣ್ ಚಕ್ರವರ್ತಿ – 8 ಕೋಟಿ ರೂ

ವೆಂಕಟೇಶ್ ಅಯ್ಯರ್ – 8 ಕೋಟಿ ರೂ

ಸುನಿಲ್ ನರೈನ್ – 6 ಕೋಟಿ ರೂ

ಕೆಕೆಆರ್​ ಹರಾಜಿನಲ್ಲಿ ಖರೀದಿಸಿದ ಆಟಗಾರರು

ಪ್ಯಾಟ್ ಕಮ್ಮಿನ್ಸ್ – 7.75 ಕೋಟಿ ರೂ

ಶ್ರೇಯಸ್ ಅಯ್ಯರ್ – 12.25 ಕೋಟಿ ರೂ

ನಿತೀಶ್ ರಾಣಾ – 8 ಕೋಟಿ ರೂ

ಶಿವಂ ಮಾವಿ – 7.25 ಕೋಟಿ ರೂ

ಶೆಲ್ಡನ್ ಜಾಕ್ಸನ್ – 60 ಲಕ್ಷ ರೂ

ಅಜಿಂಕ್ಯ ರಹಾನೆ – 1 ಕೋಟಿ ರೂ

ರಿಂಕು ಸಿಂಗ್ – 55 ಲಕ್ಷ

ಅನುಕೂಲ್ ರಾಯ್ – 20 ಲಕ್ಷ

ಅಭಿಜಿತ್ ತೋಮರ್ – 40 ಲಕ್ಷ

ಪ್ರಥಮ್ ಸಿಂಗ್ – 20 ಲಕ್ಷ

ರಾಸಿಖ್ ಸಲಾಮ್ – 20 ಲಕ್ಷ

ಅಶೋಕ್ ಶರ್ಮಾ – 55 ಲಕ್ಷ

ಬಾಬಾ ಇಂದರ್‌ಜಿತ್ – 20 ಲಕ್ಷ

ಚಾಮಿಕಾ ಕರುಣಾರತ್ನ – 50 ಲಕ್ಷ

ಸ್ಯಾಮ್ ಬಿಲ್ಲಿಂಗ್ಸ್ – 2 ಕೋಟಿ

ಅಲೆಕ್ಸ್ ಹೇಲ್ಸ್ – 1.5 ಕೋಟಿ

ಟಿಮ್ ಸೌಥಿ – 1.5 ಕೋಟಿ

ಉಮೇಶ್ ಯಾದವ್ – 2 ಕೋಟಿ

ಮೊಹಮ್ಮದ್ ನಬಿ – 1 ಕೋಟಿ

ಅಮನ್ ಖಾನ್ – 20 ಲಕ್ಷ

ಕೋಲ್ಕತ್ತಾ ಎರಡು ಬಾರಿ ಚಾಂಪಿಯನ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು 15 ಋತುಗಳಲ್ಲಿ ಎರಡು ಬಾರಿ ಚಾಂಪಿಯನ್ ಆಗಿದೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಈ ತಂಡ 2012 ಮತ್ತು 2014ರಲ್ಲಿ ಚಾಂಪಿಯನ್ ಆಗಿತ್ತು. ಆದಾಗ್ಯೂ, 2014 ರಿಂದ ಕೋಲ್ಕತ್ತಾದ ಪ್ರಯಾಣವು ಉತ್ತಮವಾಗಿರಲಿಲ್ಲ. ಕಳೆದ ಋತುವಿನಲ್ಲಿ ಫೈನಲ್ ತಲುಪಿದ್ದರೂ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಒಟ್ಟಾರೆ, ಈ ತಂಡವು ಏಳು ಬಾರಿ ನಾಕೌಟ್ ಪಂದ್ಯಗಳನ್ನು ತಲುಪಿದೆ ಮತ್ತು ಎರಡು ಬಾರಿ ಮಾತ್ರ ಫೈನಲ್ ಗೆದ್ದಿದೆ.

ಇದನ್ನೂ ಓದಿ:Liam Livingstone, IPL 2022 Auction: 9 ಐಪಿಎಲ್ ಪಂದ್ಯಗಳನ್ನಾಡಿರುವ ಆಟಗಾರನಿಗೆ 11.50 ಕೋಟಿ ಸುರಿದ ಪಂಜಾಬ್!