AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Liam Livingstone, IPL 2022 Auction: 9 ಐಪಿಎಲ್ ಪಂದ್ಯಗಳನ್ನಾಡಿರುವ ಆಟಗಾರನಿಗೆ 11.50 ಕೋಟಿ ಸುರಿದ ಪಂಜಾಬ್!

Liam Livingstone IPL 2022 Auction: ಐಪಿಎಲ್ 2022 ಹರಾಜಿನಲ್ಲಿ ಲಿಯಾಮ್ ಲಿವಿಂಗ್‌ಸ್ಟನ್​ಗೆ 11.50 ಕೋಟಿ ರೂ. ನೀಡಿ ಪಂಜಾಬ್ ಕಿಂಗ್ಸ್ ಖರೀದಿಸಿದೆ. ಇದರೊಂದಿಗೆ ಲಿಯಾಮ್ ಲಿವಿಂಗ್‌ಸ್ಟನ್ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಇಂಗ್ಲಿಷ್ ಆಟಗಾರ ಎನಿಸಿಕೊಂಡಿದ್ದಾರೆ.

Liam Livingstone, IPL 2022 Auction: 9 ಐಪಿಎಲ್ ಪಂದ್ಯಗಳನ್ನಾಡಿರುವ ಆಟಗಾರನಿಗೆ 11.50 ಕೋಟಿ ಸುರಿದ ಪಂಜಾಬ್!
ಲಿಯಾಮ್ ಲಿವಿಂಗ್‌ಸ್ಟನ್
TV9 Web
| Edited By: |

Updated on:Feb 13, 2022 | 1:14 PM

Share

ಐಪಿಎಲ್ 2022 ಹರಾಜಿನಲ್ಲಿ (IPL 2022 Auction) ಲಿಯಾಮ್ ಲಿವಿಂಗ್‌ಸ್ಟನ್ (Liam Livingstone)​ಗೆ 11.50 ಕೋಟಿ ರೂ. ನೀಡಿ ಪಂಜಾಬ್ ಕಿಂಗ್ಸ್ (Punjab Kings) ಖರೀದಿಸಿದೆ. ಇದರೊಂದಿಗೆ ಲಿಯಾಮ್ ಲಿವಿಂಗ್‌ಸ್ಟನ್ ಐಪಿಎಲ್ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಇಂಗ್ಲಿಷ್ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಋತುವಿನ ಐಪಿಎಲ್‌ನಲ್ಲಿ ಅವರು ರಾಜಸ್ಥಾನ್ ರಾಯಲ್ಸ್‌ನ ಭಾಗವಾಗಿದ್ದರು. ಲಿವಿಂಗ್‌ಸ್ಟನ್ ಐಪಿಎಲ್‌ನಲ್ಲಿ ಇದುವರೆಗೆ ಒಂಬತ್ತು ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದರಲ್ಲಿ ಅವರು 112 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಇನ್ನೂ ಛಾಪು ಮೂಡಿಸಲು ಸಾಧ್ಯವಾಗದಿದ್ದರೂ, ಟಿ20 ಕ್ರಿಕೆಟ್‌ನಲ್ಲಿ ಲಿವಿಂಗ್‌ಸ್ಟನ್ ದೊಡ್ಡ ಹೆಸರು. 2021 ರಲ್ಲಿ, ಈ ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಇವರು ಒಬ್ಬರಾಗಿದ್ದರು.

ಲಿಯಾಮ್ ಲಿವಿಂಗ್‌ಸ್ಟನ್ ಅವರ ಅಂತರಾಷ್ಟ್ರೀಯ ಕ್ರಿಕೆಟ್‌ನ ಅಂಕಿಅಂಶಗಳನ್ನು ನೋಡಿದಾಗ, ಅವರ ಸ್ಟ್ರೈಕ್ ರೇಟ್ 158 ಕ್ಕಿಂತ ಹೆಚ್ಚಿದೆ. ಅವರು 17 ಪಂದ್ಯಗಳಲ್ಲಿ 285 ರನ್ ಗಳಿಸಿದ್ದಾರೆ ಮತ್ತು ಇದರಲ್ಲಿ ಶತಕವೂ ಸೇರಿದೆ. ಅಲ್ಲದೆ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೇ ಟಿ20 ಕ್ರಿಕೆಟ್ ನಲ್ಲಿ 164 ಪಂದ್ಯಗಳನ್ನಾಡಿದ್ದು 4095 ರನ್ ಗಳಿಸಿದ್ದಾರೆ. ಇಲ್ಲಿ ಅವರು ಎರಡು ಶತಕ ಮತ್ತು 23 ಅರ್ಧ ಶತಕಗಳನ್ನು ಹೊಂದಿದ್ದಾರೆ. ಅಲ್ಲದೆ 67 ವಿಕೆಟ್‌ಗಳನ್ನು ಪಡೆದಿದ್ದಾರೆ.

ಲಿವಿಂಗ್‌ಸ್ಟನ್‌ಗೆ ಬಿಡ್ 2022 ರ ಐಪಿಎಲ್ ಹರಾಜಿನಲ್ಲಿ ಈ ಇಂಗ್ಲೆಂಡ್ ಆಟಗಾರನ ಮೂಲ ಬೆಲೆ 1 ಕೋಟಿ ರೂ. ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಮೊದಲು ಬಿಡ್ ಮಾಡಿತು. ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವೂ ಸೇರಿಕೊಂಡಿತು. ಇಬ್ಬರ ನಡುವೆ ನಾಲ್ಕು ಕೋಟಿ ರೂಪಾಯಿವರೆಗೂ ಫೈಪೋಟಿ ನಡೆಯಿತು. ಆಗ ಸಿಎಸ್​ಕೆ ತಂಡ ಹಿಂದೆ ಸರಿದಿತ್ತು. ಇಲ್ಲಿಂದ ಪಂಜಾಬ್ ಕಿಂಗ್ಸ್ ತಂಡ ಬಿಡ್‌ಗೆ ಸೇರಿಕೊಂಡಿತು. KKR ಲಿವಿಂಗ್‌ಸ್ಟನ್‌ಗೆ 6.25 ಕೋಟಿ ರೂ.ವರೆಗೆ ಬಿಡ್ ಮಾಡಿತು ಆದರೆ ಪಂಜಾಬ್ ಅವರಿಗೆ ಬಿಡ್‌ಗಳನ್ನು ಮುಂದಿಟ್ಟಿತು.

ನಂತರ ಗುಜರಾತ್ ಟೈಟಾನ್ಸ್ ಪಂಜಾಬ್​ಗೆ ಪೈಪೋಟಿ ನೀಡುವ ಪ್ರಯತ್ನ ನಡೆಸಿತು. ಆದರೆ ಪಂಜಾಬ್ ಈ ಆಟಗಾರನನ್ನು ಬಿಟ್ಟುಕೊಡಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗುಜರಾತ್ ಕೂಡ ಹಿಂದೆ ಸರಿಯಿತು. ಸನ್ ರೈಸರ್ಸ್ ಹೈದರಾಬಾದ್ ಕೂಡ ಲಿವಿಂಗ್ ಸ್ಟನ್ ಮೇಲೆ ಬೆಟ್ಟಿಂಗ್ ಕಟ್ಟಿತು. ಹೀಗಿರುವಾಗ ಬಿಡ್ 10 ಕೋಟಿ ದಾಟಿತು. ಅಂತಿಮವಾಗಿ ಪಂಜಾಬ್ 11.50 ಕೋಟಿ ಬಿಡ್‌ನೊಂದಿಗೆ ಲಿವಿಂಗ್‌ಸ್ಟನ್ ಅವರನ್ನು ತನ್ನೊಂದಿಗೆ ಕರೆದೊಯ್ದಿತು.

ಐಪಿಎಲ್‌ನಲ್ಲಿ ಇಂಗ್ಲೆಂಡ್‌ನ ಅತ್ಯಂತ ದುಬಾರಿ ಆಟಗಾರ ಬೆನ್ ಸ್ಟೋಕ್ಸ್ ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಇಂಗ್ಲೆಂಡ್‌ನ ಅತ್ಯಂತ ದುಬಾರಿ ಆಟಗಾರ. ಅವರನ್ನು ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ 2017 ರಲ್ಲಿ 14.50 ಕೋಟಿ ರೂ.ಗೆ ಖರೀದಿಸಿತು. ನಂತರ 2018 ರಲ್ಲಿ ರಾಜಸ್ಥಾನ್ ರಾಯಲ್ಸ್ ಸ್ಟೋಕ್ಸ್ ಅನ್ನು 12.50 ಕೋಟಿಗೆ ತೆಗೆದುಕೊಂಡಿತು. ಅದೇ ಸಮಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 2017 ರಲ್ಲಿ 12 ಕೋಟಿ ಪಾವತಿಸಿ ಟೆಮಲ್ ಮಿಲ್ಸ್ ಅನ್ನು ಖರೀದಿಸಿತ್ತು.

ಇದನ್ನೂ ಓದಿ:IPL Auction 2022: ಕಡು ಬಡತನದಿಂದ ಬಂದು ಐಪಿಎಲ್​ನಲ್ಲಿ ಕೋಟಿ ಗಳಿಸಿದ ಪ್ರತಿಭಾವಂತ ಕ್ರಿಕೆಟಿಗರಿವರು

Published On - 12:51 pm, Sun, 13 February 22

Follow Us
TV9 Web
TV9 Web

TV9 Kannada

Read More
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
ಮಂತ್ರಿಗಳ ಮೇಲೆ ರಹಸ್ಯ ಕ್ಯಾಮೆರಾ ಕಣ್ಣು: ಸಚಿವರನ್ನ ಎಚ್ಚರಿಸಿದ ಡಿಕೆಶಿ
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
'ಸಿಎಂ ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್ ಮಾಡಿದ್ದರು'
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಕಬ್ಬು ಬೆಳೆಗಾರರ ಮೀಟಿಂಗ್‌ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೀಗಂದ್ರು
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಸಾರಿಗೆ ನೌಕರರಿಂದ ಮತ್ತೆ ಪ್ರತಿಭಟನೆ: ವೇತನ ಪರಿಷ್ಕರಣೆಗೆ ಆಗ್ರಹ
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಮೈಸೂರು: ಚಾಮುಂಡೇಶ್ವರಿ ದರ್ಶನ ಪಡೆದ ತೆಲುಗು ನಟ ಮಂಚು ಮನೋಜ್
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಗಾಲ್ಫ್​​ನಲ್ಲಿ ಚಿನ್ನದ ಪದಕ ವಿಜೇತೆ ಪ್ರಣವಿ​ಗೆ ಅದ್ದೂರಿ ಸ್ವಾಗತ
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಕಾಲು ಮುರಿದು ಬಿದ್ದಿದ್ದ ದ್ರೋಣ ಆನೆ ಈಗ ಫುಲ್ ಫಿಟ್
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಸ್ವಂತ ಹಣದಲ್ಲಿ ಹೆದ್ದಾರಿಯ ನೂರಾರು ಗುಂಡಿಗಳನ್ನು ಮುಚ್ಚಿದ ಯುವಕರಪಡೆ
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಮೈಸೂರು ದಸರಾ 2026: ಗಜಪಡೆ, ಅಶ್ವಪಡೆಗೆ ಸಿಡಿಮದ್ದು ತಾಲೀಮು
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!
ಕೊಪ್ಪಳ: ತಾನೇ ನಲ್ಲಿ ತಿರುಗಿಸಿ ದಾಹ ಇಂಗಿಸಿಕೊಂಡ ಗೋಮಾತೆ!